ಮಡಿಕೇರಿ, ನ. ೧೭: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ೨೦೨೨-೨೩ನೇ ಸಾಲಿನ ಮಹಾಸಭೆ ತಾ. ೨೬ ರಂದು ಬೆಳಿಗ್ಗೆ ೧೦. ಗಂಟೆಗೆ ಮಡಿಕೇರಿ ಕಾಮಧೇನು ಪೆಟ್ರೋಲ್ ಬಂಕ್‌ನ ಬದಿಯಲ್ಲಿ ಇರುವ ರೋಟರಿ ಹಾಲ್‌ನಲ್ಲಿ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ (ನಿ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಈ ಸಭೆಗೆ ಕೊಡಗು ಜಿಲ್ಲಾ ಎಲ್ಲಾ ಮಾಜಿ ಸೈನಿಕರು ಮತ್ತು ವಿಧವೆಯವರು ಹಾಜರಾಗುವಂತೆ ಸಂಘದ ಪ್ರಕಟಣೆ ಕೋರಿದೆ. ಹೆಚ್ಚಿನ ವಿವರಕ್ಕಾಗಿ ಸಂಘದ ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ (ಮೊ. ೯೮೪೫೩೩೧೪೩೧ ಅವರನ್ನು ಸಂಪರ್ಕಿಸಬಹುದು.