ನಾಪೋಕ್ಲು. ನ. ೧೭: ಕೊಡವ ಸಮಾಜಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಸದರ ನಿಧಿಯಿಂದ ಅನುದಾನ ನೀಡಲಾಗಿದ್ದು ಜಿಲ್ಲೆಯ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸ ಲಾಗುವುದು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.
ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ೬೨ನೇ ವರ್ಷದ ಅಂತರ ಗ್ರಾಮಾಂತರ ಕೈಲ್ ಮುಹೂರ್ತ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಗೆ ೩೦ ಕೊಡವ ಸಮಾಜಗಳಿಗೆ ತಲಾ ೧೦ ಲಕ್ಷ ರೂ.ನಂತೆ ಮೂರು ಕೋಟಿ ಅನುದಾನ ಬಿಡುಗಡೆಯಾಗಿದೆ. ಬಾಳುಗೋಡು ಕೊಡವ ಕಲ್ಚರಲ್ ಸೆಂಟರ್ನಲ್ಲಿ ಹಾಕಿ ಸ್ಟೇಡಿಯಂ ನಿರ್ಮಾಣ ಮಾಡಲು ೪೦ ಲಕ್ಷ ರೂ. ನೀಡಲಾಗಿದೆ ಎಂದರು.
ಕೇAದ್ರ ಸರ್ಕಾರದಿಂದ ರಾಜ್ಯದಲ್ಲಿ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿ ಸಲಾಗುತ್ತಿದೆ. ಹಾಗೆಯೇ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತಿದೆ. ೫.೫ ಕಿಲೋಮೀಟರ್ ಅಂತರದ ಬಾವಲಿ- ನರಿಯಂದಡ ಹಾಗೂ ಬಲಮುರಿ- ಕುಯ್ಯಂಗೇರಿ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಅಭಿವೃದ್ಧಿ ಪಡಿಸಲಾಗಿದೆ. ಉಳಿದ ಗ್ರಾಮೀಣ ರಸ್ತೆಗಳನ್ನು ನಾಲ್ಕನೇ ಹಂತದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯಡಿಯಲ್ಲಿ ಅಭಿವೃದ್ಧಿಪಡಿಸ ಲಾಗುವುದು ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್ .ಪೊನ್ನಣ್ಣ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳು ವುದರಿಂದ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ. ಜಿಲ್ಲೆಯಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸು ವಂತಹ ಮನೋಭಾವನೆ ಬೆಳೆಯುತ್ತದೆ. ಕ್ರೀಡಾಕೂಟದಿಂದ ಉತ್ತಮ ಪ್ರತಿಭೆಗಳು ಹೊರಹೊಮ್ಮುವಂತಾಗಲಿ ಎಂದರು. ಆಯ್ಕೆಯಾದ ಜನಪ್ರತಿನಿಧಿಗಳಿಗೆ ಜನರ ಬೆಂಬಲ ಅತಿ ಮುಖ್ಯ. ಐದು ಗ್ರಾಮಗಳ ಮಂದಿ ಒಟ್ಟಾಗಿ ಸ್ಥಳ ಗುರುತಿಸಿದರೆ ಕ್ರೀಡಾ ಮೈದಾನ ನಿರ್ಮಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊದಂಡೇರ ಪಿ. ಬಾಂಡ್ ಗಣಪತಿ ಮಾತನಾಡಿ ೬೨ ವರ್ಷಗಳಿಂದ ನಿರಂತರವಾಗಿ ೫ ಗ್ರಾಮಗಳ ಮಂದಿ ಒಗ್ಗೂಡಿ ಕ್ರೀಡಾ ಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಶಾಲಾ-ಕಾಲೇಜುಗಳ ಕ್ರೀಡಾಕೂಟವನ್ನು ಮೀರಿಸುವಂತೆ ಗ್ರಾಮಸ್ಥರು ಒಟ್ಟಾಗಿ ಕ್ರೀಡಾಕೂಟ ನಡೆಸುತ್ತಿದ್ದಾರೆ. ಹಿರಿಯರ ದೂರದೃಷ್ಟಿಯಿಂದ ಸಮಾಜದಲ್ಲಿ ಕ್ರೀಡಾಕೂಟದ ಮೂಲಕ ಉತ್ತಮ ಬಾಂಧವ್ಯ ನಿರ್ಮಾಣವಾಗುತ್ತಿದೆ. ಪುಟ್ಟ ಜಿಲ್ಲೆಯಿಂದ ಒಲಂಪಿಕ್ಸ್ನಲ್ಲಿ ೨೧ ಮಂದಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಕ್ರೀಡಾಪಟುಗಳು ಸ್ಪರ್ಧಿಸುವಂತಾಗಲು ಗ್ರಾಮೀಣ ಮಟ್ಟದಲ್ಲಿ ಪ್ರೋತ್ಸಾಹ ಅಗತ್ಯ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಕ್ರೀಡಾ ಕೂಟಗಳು ಸಹಕಾರಿ. ಇತ್ತೀಚಿನ ದಿನಗಳಲ್ಲಿ ಹಬ್ಬ, ಉತ್ಸವ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಗ್ರಾಮೀಣ ಕ್ರೀಡಾ ಕೂಟಗಳು ಉತ್ತಮ ಪ್ರತಿಭೆಗಳು ಹೊರ ಹೊಮ್ಮಲು ಸಹಕಾರಿಯಾಗಿದೆ ಎಂದರು. ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಮಚ್ಚಂಡ ಸಾಬಾ ದೇವಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಅಂತರರಾಷ್ಟಿçÃಯ ಆಟಗಾರ್ತಿ ಮುಲ್ಲೇರ ಪೂವಮ್ಮ ಪೂವಣ್ಣ ಅವರನ್ನು ಕ್ರೀಡಾ ಮಂಡಳಿ ಅವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಪುರುಷರ ಹಾಕಿ ಪಂದ್ಯಾಟದಲ್ಲಿ ಬಾವಲಿ ಗ್ರಾಮದ ತಂಡವು ಪ್ರಥಮ ಸ್ಥಾನ, ಕಿರುಂದಾಡು ಗ್ರಾಮದ ತಂಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಕಿರುಂದಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ಬಾವಲಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನವನ್ನು, ಕೈಕಾಡು ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ ಹಾಗೂ ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು.
ಪುರುಷರ ವಿಭಾಗದಲ್ಲಿ ಗ್ರಾಮಾಂತರ ವೈಯಕ್ತಿಕ ಚಾಂಪಿಯನ್ ಆಗಿ ಕೈಕಾಡಿನ ಬೊಳ್ಳಂಡ ರೋಶನ್ ಹಾಗೂ ಕಿರುಂದಾಡಿನ ಕುಮ್ಮಂಡ ಅಮಿನ್ ಸೋಮಯ್ಯ ಹೊರ ಹೊಮ್ಮಿದರು. ಮಹಿಳೆಯರ ವಿಭಾಗದಲ್ಲಿ ಬಲಮುರಿಯ ತ್ರಿಷಾ ದೇಚಮ್ಮ ಹಾಗೂ ರೀತ್ ಪಾಲಂದಿರ ವೈಯಕ್ತಿಕ ಚಾಂಪಿ ಯನ್ ಶಿಪ್ ಗಳಿಸಿದರು. ಕಿರುಂದಾಡು ಗ್ರಾಮವು ಗ್ರಾಮಾಂತರ ಸಮಗ್ರ ಚಾಂಪಿಯನ್ ಶಿಪ್ ಗಳಿಸಿತು. ಗೇಮ್ಸ್ ವಿಭಾಗದಲ್ಲಿ ಬಾವಲಿ ಮತ್ತು ಕಿರುಂದಾಡು ಗ್ರಾಮಗಳು ಸಮಾನ ಅಂಕಗಳಿಸಿ ಕಿರುಂದಾಡು ಗ್ರಾಮ ಚಾಂಪಿಯನ್ ಆಗಿ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು.
ಈ ಸಂದರ್ಭ ಚೆಸ್ಕಾಂನ ಬಟ್ಟಕಾಳಂಡ ಮುತ್ತಣ್ಣ., ಕೊಣಂಜಗೇರಿ ಗ್ರಾ.ಪಂ. ಅಧ್ಯಕ್ಷ ಕಟ್ಟಿ ಕುಶಾಲಪ್ಪ, ಕಿರುಂದಾಡು ಗ್ರಾಮದ ಬಾದುಮಂಡ ನಂಜಪ್ಪ, ವಕೀಲ ಬಿಟ್ಟೀರ ರಾಜಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪನೆರವಂಡ ರಾಜಾ ಪೂವಯ್ಯ, ದತ್ತಿನಿಧಿ ಅಧ್ಯಕ್ಷ ನಾಯಕಂಡ ದೀಪು ಚಂಗಪ್ಪ, ಉಪಾಧ್ಯಕ್ಷರಾದ ಬೊಳ್ಳಚೆಟ್ಟಿರ ಶಾಂತಿ, ಗೌರವ ಕಾರ್ಯದರ್ಶಿ ಅಪ್ಪನೆರವಂಡ ರಾಜೇಶ್, ನಿರ್ದೇಶಕರು ಹಾಗೂ ೫ ಗ್ರಾಮಗಳ ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಬೊಳ್ಳಂಡ ಗೀತಾ ಗಿರೀಶ್ ಅವರ ಪ್ರಾರ್ಥಿಸಿ, ಚೈಯಂಡ ಕಸ್ತೂರಿ ನಿರೂಪಿಸಿ, ಬೊಳಕಾರಂಡ ಮಂಜು ಮಾಚಯ್ಯ ವಂದಿಸಿದರು. - ದುಗ್ಗಳ