ವೀರಾಜಪೇಟೆ, ನ. ೧೭: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಕೊಡವ ನಮ್ಮೆ ಅಂಗವಾಗಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ, ಅಮ್ಮತ್ತಿ, ನಾಪೋಕ್ಲು, ಮೈಸೂರು ಕೊಡವ ಸಮಾಜಗಳು ಸೆಮಿಫೈನಲ್ಸ್ಗೆ ಅರ್ಹತೆ ಪಡೆದುಕೊಂಡಿದೆ.
ಮೈಸೂರು ಕೊಡವ ಸಮಾಜ ತಂಡವು ೩-೨ ಗೋಲುಗಳಿಂದ ಮೂರ್ನಾಡು ಕೊಡವ ಸಮಾಜವನ್ನು ಪರಾಭವಗೊಳಿಸಿತು. ಮೈಸೂರು ಕೊಡವ ಸಮಾಜ ಪರ ಮೇರಿಯಂಡ ರಾಯ್ (೧೬ನಿ), ಮುಕ್ಕಾಟಿರ ಸಾಗರ್ (೨೭ನಿ), ಮತ್ರಂಡ ಶ್ರವಣ್ (೪೧ನಿ), ಮೂರ್ನಾಡು ಕೊಡವ ಸಮಾಜ ಪರ ಮೇಕೇರಿರ ನಿಹಾಲ್ (೧೭ನಿ), ಬೊಳ್ಯಪಂಡ ಧ್ಯಾನ್ (೩೧ನಿ) ಗೋಲು ದಾಖಲಿಸಿದರು.
ಅಮ್ಮತ್ತಿ ಕೊಡವ ಸಮಾಜ ತಂಡವು ಮಡಿಕೇರಿ ಕೊಡವ ಸಮಾಜ ತಂಡವನ್ನು ೨-೦ ಗೋಲಿನಿಂದ ಪರಾಭವಗೊಳಿಸಿತು. ಅಮ್ಮತ್ತಿ ಕೊಡವ ಸಮಾಜ ತಂಡದ ಪರ ನೆಲ್ಲಮಕ್ಕಡ ಅಯ್ಯಪ್ಪ (೨೨ನಿ), ಪುಚ್ಚಿಮಾಡ ಭವನ್ (೪೫ನಿ)ದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು.
ವೀರಾಜಪೇಟೆ ಕೊಡವ ಸಮಾಜ ತಂಡವು ೨-೦ ಗೋಲಿನಿಂದ ಆರಾಯಿರನಾಡ್ ಕೊಡವ ಸಮಾಜ ತಂಡವನ್ನು ಮಣಿಸಿತು. ವೀರಾಜಪೇಟೆ ಕೊಡವ ಸಮಾಜ ತಂಡದ ಪರ ಚೇಂದAಡ ಮೋಕ್ಷಿತ್(೧೯ನಿ), ಪುಲಿಯಂಡ ತಿಮ್ಮಣ್ಣ (೪೭ನಿ) ದಲ್ಲಿ ಗೋಲು ದಾಖಲಿಸುವುದರೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡರು.
ನಾಪೋಕ್ಲು ಕೊಡವ ಸಮಾಜ ತಂಡವು ಹುದಿಕೇರಿ ಕೊಡವ ಸಮಾಜ ತಂಡವನ್ನು ೩-೨ ಗೋಲುಗಳಿಂದ ಪೆನಾಲ್ಟಿ ಶೂಟೌಟ್ನಲ್ಲಿ ಸೋಲಿಸಿತು. ನಿಗಧಿತ ಅವಧಿಯಲ್ಲಿ ೨ ತಂಡಗಳು ೧-೧ ಸಮಬಲ ಸಾಧಿಸಿತು. ನಾಪೋಕ್ಲು ಕೊಡವ ಸಮಾಜದ ತಂಡದ ಪರ ಪರದಂಡ ಚೆಶ್ವಿನ್(೩ನಿ), ಹುದಿಕೇರಿ ಕೊಡವ ಸಮಾಜದ ಪರ ಜಶ್ವಿನ್(೩೬ನಿ)ದಲ್ಲಿ ಗೋಲು ದಾಖಲಿಸಿ ಸಮಬಲ ಸಾಧಿಸಿ ಕೊಂಡರು. ನಿಗಧಿತ ಅವಧಿಯಲ್ಲಿ ಸಮಬಲ ಸಾಧಿಸಿದ ಕಾರಣ ಪೆನಾಲ್ಟಿ ಶೂಟೌಟ್ಗೆ ಮೊರೆ ಹೋಗ ಬೇಕಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ನಾಪೋಕ್ಲು ತಂಡದ ಪರ ಬಿದ್ದಾಟಂಡ ಅಖಿಲ್, ಪರದಂಡ ಚಶ್ವಿನ್, ಹುದಿಕೇರಿ ತಂಡದ ಪರ ಚೆಕ್ಕೇರ ಆದರ್ಶ್ ಗೋಲು ದಾಖಲಿಸಿದರು.
ಪಂದ್ಯಾಟದ ತೀರ್ಪುಗಾರರಾಗಿ ಚಂದಪAಡ ಆಕಾಶ್, ಕುಪ್ಪಂಡ ದಿಲನ್, ನೆಲ್ಲಮಕ್ಕಡ ಪವನ್, ಚೆಕ್ಕೇರ ಆದರ್ಶ್, ಬಲ್ಲಚಂಡ ನಾಣಯ್ಯ, ಅಂಜಪರವAಡ ಕುಶಾಲಪ್ಪ ತಾಂತ್ರಿಕ ಸಮಿತಿಯಲ್ಲಿ ಪಟ್ರಪಂಡ ಸಚಿನ್ ಮಂದಣ್ಣ, ಕರವಂಡ ಅಪ್ಪಣ್ಣ, ಮೈಂದಪAಡ ಡ್ಯಾನಿ, ತಾಂತ್ರಿಕ ನಿರ್ದೇಶಕರಾಗಿ ಕೋಡಿಮಣಿಯಂಡ ಗಣಪತಿ ಕಾರ್ಯನಿರ್ವಹಿಸಿದರು. ಮಾಳೇಟೀರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು.
ಇಂದಿನ ಕಾರ್ಯಕ್ರಮ
ಪ್ರಥಮ ಸೆಮಿಫೈನಲ್ಸ್ ಪಂದ್ಯಾಟ ಮುಗಿದ ಬಳಿಕ ಫೆಡರೇಷನ್ ಆಫ್ ಕೊಡವ ಸಮಾಜದ ಆವರಣದಲ್ಲಿರುವ ಯೋಧರ ಸ್ಮಾರಕಕ್ಕೆ ಮೇಜರ್ ಜನರಲ್ ಬಾಚಮಂಡ ಕಾರ್ಯಪ್ಪ ಅವರು ಪುಷ್ಪಗುಚ್ಚ ಇರಿಸಿ ಅಗಲಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು. ನಂತರ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ.