ಮಡಿಕೇರಿ, ನ. ೧೮: ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾಟ ವೀಕ್ಷಣೆ ನಗರದ ಜನರಲ್ ತಿಮಯ್ಯ ಕ್ರೀಡಾಂಗಣ ಬಳಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವ್ಯವಸ್ಥೆ ಮಾಡಲಾಗಿದೆ.
ಭಾರತ ಮತ್ತು ಆಸ್ಟೆçÃಲಿಯಾ ತಂಡಗಳ ಮಧ್ಯೆ ನಡೆಯುವ ವಿಶ್ವಕಪ್ -೨೦೨೩ ರ ಫೈನಲ್ ಪಂದ್ಯಾವಳಿಯು ಮಧ್ಯಾಹ್ನ ೨ ಗಂಟೆಗೆ ಆರಂಭಗೊಳ್ಳಲಿದ್ದು, ಪಂದ್ಯಾವಳಿಯ ಉಚಿತ ನೇರ ಪ್ರಸಾರವನ್ನು ದೊಡ್ಡ ಪರದೆಯಲ್ಲಿ ಎಲ್.ಸಿ.ಡಿ ಪ್ರೊಜೆಕ್ಟರ್ ಮೂಲಕ ಪ್ರದರ್ಶನ ಮಾಡಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ವಿಸ್ಮಯಿ ತಿಳಿಸಿದ್ದಾರೆ.