ಮಡಿಕೇರಿ, ನ. ೧೬: ಮಡಿಕೇರಿ ನಗರದ ಧಾರ್ಮಿಕ ಕ್ಷೇತ್ರಗಳ ಲ್ಲೊಂದಾದ ಶ್ರೀ ವಿಜಯ ವಿನಾಯಕ ದೇವಾಲಯದ ೨೫ನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ತಾ. ೧೫ ರಿಂದಲೇ ವಿವಿಧ ಪೂಜಾದಿ ಕಾರ್ಯಗಳು ನಡೆದವು. ಇಂದು ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮ ಹವನಾದಿಗಳು ನಡೆದು ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಶ್ರೀ ಕೃಷ್ಣ ಉಪಾಧ್ಯ ಹಾಗೂ ಶ್ರೀನಿವಾಸ ಉಪಾಧ್ಯ ನೇತೃತ್ವದ ಅರ್ಚಕರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಮಹಾ ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು. ೨೫ನೇ ವರ್ಷದ ಸಾರ್ಥಕತೆಗಾಗಿ ವಿನಾಯಕನಿಗೆ
(ಮೊದಲ ಪುಟದಿಂದ) ರೂ.೨೦ ಲಕ್ಷ ವೆಚ್ಚದ ಚಿನ್ನದ ಮುಖವಾಡವನ್ನು ಅರ್ಪಣೆ ಮಾಡಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜಯ ವಿನಾಯಕನ ಕೃಪಾಶೀರ್ವಾದಕ್ಕೆ ಪಾತ್ರರಾದರು. ದೇವಾಲಯ ಸಮಿತಿ ಟ್ರಸ್ಟಿಗಳು, ಸಂಘ ಸಂಸ್ಥೆಗಳ ಪ್ರಮುಖರು, ವಿಜಯನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದರು.