ಮಡಿಕೇರಿ, ನ. ೧೫: ಹೊಸ್ಕೇರಿ ಗ್ರಾಮ ಪಂಚಾಯಿತಿ ೨೦೨೩-೨೪ನೇ ಸಾಲಿನ ಅರೆಕಾಡು-೧ ವಾರ್ಡ್ ಸಭೆ ಪ್ರಭುಶೇಖರ್ ಬಿ.ವೈ. ಅಧ್ಯಕ್ಷತೆಯಲ್ಲಿ ತಾ.೧೬ರಂದು ಪೂರ್ವಾಹ್ನ ೧೧ ಗಂಟೆಗೆ ಗ್ರಾ.ಪಂ. ಕಚೇರಿ ಮುಂಭಾಗದ ಆವರಣದಲ್ಲಿ ನಡೆಯಲಿದೆ. ಹೊಸ್ಕೇರಿ ವಾರ್ಡ್ ಸಭೆ ಪಾರ್ವತಿ ಕೆ.ಜೆ. ಅಧ್ಯಕ್ಷತೆಯಲ್ಲಿ ತಾ.೧೬ರಂದು ಅಪರಾಹ್ನ ೪ ಗಂಟೆಗೆ ಶಾಸ್ತಿçÃನಗರ ಸಮುದಾಯ ಭವನದಲ್ಲಿ ನಡೆಯಲಿದೆ. ಅರೆಕಾಡು-೨ ವಾರ್ಡ್ ಸಭೆ ಯೂಸುಫ್ ಅಲಿ ಅಧ್ಯಕ್ಷತೆಯಲ್ಲಿ ತಾ.೧೭ರಂದು ಅಪರಾಹ್ನ ೪ ಗಂಟೆಗೆ ನೇತಾಜಿನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.