ಮಡಿಕೇರಿ, ನ. ೧೫: ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಪ್ರತಿನಿಧಿಗಳ ಸಭೆ ನಡೆಸಲಾಯಿತು.

ಸಮಾಜದ ವಾರ್ಷಿಕ ಕ್ರೀಡೋತ್ಸವವನ್ನು ಹಾತೂರು ಸರ್ಕಾರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ೨೦೨೪ರ ಮೇ ೩ರಿಂದ ೫ನೇ ತನಕ ಮೂರು ದಿನಗಳ ಕಾಲ ಕ್ರಿಕೆಟ್, ಹಗ್ಗ ಜಗ್ಗಾಟ ಮತ್ತು ಮಹಿಳೆಯರಿಗೆ ಥ್ರೋ ಬಾಲ್ ಪಂದ್ಯಾವಳಿಯನ್ನು ವಿಜೃಂಭಣೆಯಿAದ ನಡೆಸಲು ತೀರ್ಮಾನಿಸಲಾಯಿತು.

ಈ ಕ್ರೀಡಾ ಕೂಟದ ಯಶಸ್ವಿಗೆ ಸರ್ವರ ಸಹಕಾರ ಕೋರಲಾಯಿತು ಕ್ರೀಡಾ ಕೂಟ ನಡೆಯುವ ದಿನಾಂಕಗಳAದು ಕೊಡಗು ಹೆಗ್ಗಡೆ ಜನಾಂಗದವರು ಮದುವೆ ಅಥವಾ ಇತರೆ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೋತ್ಸವದಲ್ಲಿ ಭಾಗವಹಿಸಲು ವಿನಂತಿ ಮಾಡಿಕೊಳ್ಳಲಾಯಿತು. ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೂತನವಾಗಿ ಆಯ್ಕೆಯಾದ ತಂಬAಡ ವಿಜಯ್ ಪೂಣಚ್ಚ ಅವರನ್ನು ಅಭಿನಂದಿಸಿ ನಿರ್ಣಯಿಸಲಾಯಿತು.

ಮುಂಬರುವ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಸದಸ್ಯರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ ನೀಡುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರುವ ಚಿಂತನೆ ಇದೆಯೆಂದು ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ಅವರು ತಿಳಿಸಿದರು. ನಂತರ ಕಾವೇರಿ ತೀರ್ಥ ಪೂಜೆ ನಡೆಸಲಾಯಿತು. ಸಮಾಜದ ಉಪಾಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚAಡ ಕಟ್ಟಿ ಕಾವೇರಪ್ಪ, ಕೋಶಾಧ್ಯಕ್ಷರಾದ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕ ರಾದ ಪಡಿಞರಂಡ ಪ್ರಭು ಕುಮಾರ್, ಮೂರೀರ ಕುಶಾಲಪ್ಪ, ಕೊಪ್ಪಡ ಪಟ್ಟು ಪಳಂಗಪ್ಪ, ಕೊಕ್ಕೇರ ಬೆಲ್ಲುಜಗನಾಥ್, ಪುದಿಯತಂಡ ಬೆಳ್ಳಿಯಪ್ಪ, ಪಂದಿಕAಡ ಸುನಾ, ಪಂದಿಕAಡ ನಾಗೇಶ್, ಮೂರೀರ ಶಾಂತಿ, ಮಲ್ಲಾಡ ಸುತಾ, ಚಳಿಯಂಡ ಕಮಲಾ ಹಾಜರಿದ್ದರು. ಉಪಾಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪನವರು ಸ್ವಾಗತಿಸಿ ವಂದಿಸಿದರು