ಮಡಿಕೇರಿ, ನ. ೧೫: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜಿನಿಂದ ಪ್ರತಿನಿಧಿಸಿದ್ದ ಪ್ರಜ್ವಲ್ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇವರು ರಾಷ್ಟçಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆ ಆಗಿದ್ದು ಮುಂದಿನ ತಿಂಗಳು ಮಹಾರಾಷ್ಟçದಲ್ಲಿ ನಡೆಯಲಿದೆ. ಇವರು ಸಂತ ಅಂತೋಣಿ ಪದವಿ ಪೂರ್ವ ಕಾಲೇಜು ಪೊನ್ನಂಪೇಟೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಸುರೇಶ್ ಕುಮಾರ್ ಮತ್ತು ಉಷಾರಾಣಿ ಎಂ.ಜಿ. ದಂಪತಿ ಪುತ್ರ.