ಮಡಿಕೇರಿ, ನ. ೧೫ : ಆರ್ಥಿಕ ಸಂಪತ್ತು ದ್ವಿಗುಣಗೊಳ್ಳುವುದರ ಮೂಲಕ ಭಾರತ ಏಷ್ಯಾ ಖಂಡದಲ್ಲಿಯೇ ಬಲಿಷ್ಠ ರಾಷ್ಟçವಾಗಿ ಹೊರಹೊಮ್ಮಿದೆ. ಈ ರೀತಿಯ ಆರ್ಥಿಕ ಪ್ರಗತಿಯಿಂದ ಸಹಕಾರಿ ಕ್ಷೇತ್ರದ ಸಬಲೀಕರಣ ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಹೊದ್ದೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನೂತನ ಗೋದಾಮು ಮತ್ತು ಸಭಾಂಗಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಲವಾರು ಉಪಯುಕ್ತ ಯೋಜನೆಗಳಿಂದ ರಾಜ್ಯದೆಲ್ಲೆಡೆ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಸೂಕ್ತ ಸೇವೆಯನ್ನು ಸಲ್ಲಿಸುತ್ತಿವೆ ಎಂದರು. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಿಸಲಾಗುತ್ತಿದೆ. ಕಟ್ಟಡ ನಿಮಾಣ, ಗೋದಾಮು, ಗೊಬ್ಬರಕ್ಕೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಆ ಮೂಲಕ ಕೃಷಿಕ ವರ್ಗದ ಅಭ್ಯುದಯಕ್ಕೆ ಸಹಕಾರಿಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊAದು ಪ್ಯಾಕ್ಸ್ ನಿರ್ಮಾಣ ಆಗಬೇಕು. ಎಲ್ಲಾ ಕಾರ್ಯಚಟುವಟಿಕೆಗಳು ಪ್ಯಾಕ್ಸ್ನಂತಹ ಆರ್ಥಿಕ ಕೇಂದ್ರದ ಮೂಲಕ ನಡೆದು, ರೈತರಿಗೆ ಪ್ರಯೋಜನಕಾರಿಯಾಗಬೇಕು ಎಂದು ಮನು ಮುತ್ತಪ್ಪ ಹೇಳಿದರು.

ಪ್ಯಾಕ್ಸ್ನ ಸೇಪ್ ಲಾಕರನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಉತ್ತಮ ಆಡಳಿತ ಮಂಡಳಿಯ ಸಹಕಾರವಿದ್ದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಇದಕ್ಕೆ ಹೊದ್ದೂರು ಪ್ಯಾಕ್ಸ್ ಕಟ್ಟಡದ ನಿರ್ಮಾಣ ಮಾದರಿಯಾಗಿದೆ ಎಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಕನ್ನಂಡ ಸಂಪತ್ ಪ್ಯಾಕ್ಸ್ನ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲಘಟ್ಟದ ಕೂಡುವಳಿ ಪದ್ಧತಿ, ಕೆಲಸಗಳು ಮರುಕಳುಹಿಸು ವಂತಾಗಬೇಕು. ಇದರಿಂದ ಸಮಾಜದಲ್ಲಿ, ಸಂಸಾರದಲ್ಲಿ ಒಗ್ಗಟ್ಟು, ಶಾಂತಿ, ನೆಮ್ಮದಿ ಕಂಡುಕೊಳ್ಳಲು, ಅಭಿವೃದ್ಧಿ ಸಾಧಿಸಲು ಸಹಕಾರಿ ಯಾಗಲಿದೆ ಎಂದರು.

ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಕೊಡಪಾಲು ಎಸ್.ಗಣಪತಿ ಮಾತನಾಡಿ, ದಾನಿಗಳ ಸೇವೆಯನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಕಾರ್ಯ ಸಹಕಾರಿ ಸಂಸ್ಥೆಗಳಿAದ ಆಗಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊದ್ದೂರು ಪ್ಯಾಕ್ಸ್ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ, ಗ್ರಾಮದ ರೈತರ ಸಹಕಾರ ಇಂದು ಸಹಕಾರಿ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಸಂಸ್ಥೆಯಲ್ಲಿ ದೊರಕುವ ಎಲ್ಲಾ ಸೌಲಭ್ಯಗಳನ್ನು ಮುಕ್ತವಾಗಿ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು. ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ನಂದಿನೆರವAಡ ರವಿ ಬಸಪ್ಪ ಸಹಕಾರ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಸಹಕಾರಿ ರತ್ನ ಪ್ರಶಸ್ತಿ ವಿಜೇತರು, ರಾಜ್ಯ ಸಹಕಾರ ಹಾಪ್‌ಕಾಮ್ಸ್ ನಿರ್ದೇಶಕ ಬಿದ್ದಾಟಂಡ ರಮೇಶ್ ಚಂಗಪ್ಪ, ಕಡಂಗ ಕೃಷಿ ಪತ್ತಿನ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್, ಹೊದ್ದೂರು ಪ್ಯಾಕ್ಸ್ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ. ಸೋಮಣ್ಣ, ಪ್ಯಾಕ್ಸ್ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹೊದ್ದೂರು ಪ್ಯಾಕ್ಸ್ ಉಪಾಧ್ಯಕ್ಷ ವಾಂಚೀರ ರನ್ನ ಅಜಯ್‌ಕುಮಾರ್ ಸ್ವಾಗತಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.