ಗೋಣಿಕೊಪ್ಪಲು, ನ. ೧೫: ಒಂಟಿ ವೃದ್ಧೆಯ ಮನೆಗೆ ಭೇಟಿ ನೀಡಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಹಾಗೂ ತಂಡ ಆಕೆಯ ಜೀವನೋಪಾಯಕ್ಕೆ ಅನುಕೂಲ ವಾಗುವಂತೆ ಸರ್ಕಾರದ ವತಿಯಿಂದ ಮಾಸಾಶನ ಮಂಜೂರು ಮಾಡಿದ್ದಾರೆ.
ಒಂಟಿ ವೃದ್ಧೆಯ ಲವಲವಿಕೆ ಜೀವನ, ಕಾವಲಿಗೆ ನಿಂತಿರುವ ಸಾಕು ನಾಯಿಗಳು, ಶಾಂತಿಯ ಜೀವನಕ್ಕೆ ಜಾನುವಾರುಗಳೇ ಆಧಾರ ಎಂಬ ಸುದ್ದಿಯನ್ನು ‘ಶಕ್ತಿ’ಯಲ್ಲಿ ಪ್ರಕಟಿಸುವ ಮೂಲಕ ಒಂಟಿ ವೃದ್ಧೆ ಶಾಂತಿಯು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು.
ಸುದ್ದಿಯನ್ನು ಗಮನಿಸಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ರೆವೆನ್ಯೂ ಅಧಿಕಾರಿ ಸುಧೀಂದ್ರ ಹಾಗೂ ತಂಡ ಚೆನ್ನಂಗೊಲ್ಲಿ ಒಂಟಿ ಮನೆಯಲ್ಲಿ ವಾಸಿಸುವ ವೃದ್ಧೆ ಶಾಂತಿ ಮನೆಗೆ ತೆರಳಿ ಆಕೆಯ ಕಷ್ಟಗಳನ್ನು ಆಲಿಸಿದರು. ಸರ್ಕಾರದಿಂದ ಸಿಗುವ ಯೋಜನೆಯ ಪ್ರಯೋಜನಗಳ ಬಗ್ಗೆ ಸುದ್ದಿಯನ್ನು ‘ಶಕ್ತಿ’ಯಲ್ಲಿ ಪ್ರಕಟಿಸುವ ಮೂಲಕ ಒಂಟಿ ವೃದ್ಧೆ ಶಾಂತಿಯು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು.
ಸುದ್ದಿಯನ್ನು ಗಮನಿಸಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ರೆವೆನ್ಯೂ ಅಧಿಕಾರಿ ಸುಧೀಂದ್ರ ಹಾಗೂ ತಂಡ ಚೆನ್ನಂಗೊಲ್ಲಿ ಒಂಟಿ ಮನೆಯಲ್ಲಿ ವಾಸಿಸುವ ವೃದ್ಧೆ ಶಾಂತಿ ಮನೆಗೆ ತೆರಳಿ ಆಕೆಯ ಕಷ್ಟಗಳನ್ನು ಆಲಿಸಿದರು. ಸರ್ಕಾರದಿಂದ ಸಿಗುವ ಯೋಜನೆಯ ಪ್ರಯೋಜನಗಳ ಬಗ್ಗೆ ತಹಶೀಲ್ದಾರ್ ಬಳಿ ಹೇಳಿಕೊಂಡರು.
ಈ ವೇಳೆ ತಹಶೀಲ್ದಾರ್ ಶಾಂತಿಯ
(ಮೊದಲ ಪುಟದಿಂದ) ಬಳಿಯಿದ್ದ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಪಡೆಯುವ ಮೂಲಕ ಸರ್ಕಾರದ ವತಿಯಿಂದ ಪ್ರತಿ ತಿಂಗಳು ಸಿಗುವ ಮಾಸಾಶÀನ ಮಂಜೂರು ಮಾಡುವುದಾಗಿ ಶಾಂತಿಗೆ ತಿಳಿಸಿದರು. ಸ್ಥಳದಲ್ಲಿದ್ದ ಸಹ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿ ತಕ್ಷಣ ಆದೇಶ ಪ್ರತಿ ನೀಡಲು ಸೂಚನೆ ನೀಡಿದರು. ಈ ವೇಳೆ ಪೊನ್ನಂಪೇಟೆ ತಾಲೂಕು ರೆವೆನ್ಯೂ ಇಲಾಖೆಯ ಅಧಿಕಾರಿಗಳಾದ ಸಿ.ಕಾವ್ಯ, ಬಿ.ಡಿ. ಚೇತನ್, ಕೆ.ಎ.ಪೂವಯ್ಯ, ಕೆ.ಆರ್.ರಾಜೇಶ್ ಹಾಜರಿದ್ದರು.
೭೩ರ ಪ್ರಾಯದ ಶಾಂತಿ ಮಕ್ಕಳಿ ಲ್ಲದೆ ಒಂಟಿ ಜೀವನ ಸಾಗಿಸುತ್ತಿ ದ್ದಾರೆ. ತನ್ನ ಜೀವನಕ್ಕೆ ಮೇಕೆ, ಕುರಿ ಗಳನ್ನು ಸಾಕುತ್ತಾ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಹಶೀಲ್ದಾರ್ ಎನ್.ಎಸ್ ಪ್ರಶಾಂತ್ ಭೇಟಿ ವೇಳೆ ಮಾಯಮುಡಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಸಣ್ಣುವಂಡ ವಿಶ್ವನಾಥ್ ಹಾಜರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಎA. ಬಸವರಾಜ್ ಹಾಗೂ ತಂಡ ಚನ್ನಂಗೊಲ್ಲಿಯ ಶಾಂತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿತು. ಸರ್ಕಾರದ ವತಿಯಿಂದ ಮಂಜೂರಾತಿ ಆಗುವ ಗೃಹ ಲಕ್ಷಿö್ಮ ಯೋಜನೆಯ ಬಗ್ಗೆ ಮಾಹಿತಿ ಒದಗಿಸಿತು.
ಬ್ಯಾಂಕ್ ಖಾತೆಗೆ ಜಮಾ ಆಗಿರುವ ಮಾಹಿತಿ ತಿಳಿಸಿದ ಹಿರಿಯ ಅಧಿಕಾರಿಗಳು ಅಗತ್ಯ ಬಿದ್ದಲ್ಲಿ ಮಡಿಕೇರಿಯ ವ್ರದ್ದಾಶ್ರಮದಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ ಎಂದರು. ಈ ಸಂದರ್ಭ ಸಿಡಿಪಿಓ ನಟರಾಜ್, ಎಸಿ ಡಿಪಿಒ ಬಿ.ಎಸ್. ರೀತಾ, ಸಿಬ್ಬಂದಿ ಗಳಾದ ಕಾವ್ಯ, ಚೈತ್ರ ಮುಂತಾದವರು ಹಾಜರಿದ್ದರು. -ಹೆಚ್.ಕೆ.ಜಗದೀಶ್