ಸುಂಟಿಕೊಪ್ಪ, ನ.೧೬: ಕಾಫಿ ಪುಡಿ ಅಂಗಡಿ ಹಾಗೂ ವಾಹನ ತರಬೇತಿ ಕೇಂದ್ರಕ್ಕೆ ಬುಧವಾರ ರಾತ್ರಿ ಬೀಗ ಮುರಿದು ಕಳ್ಳರು ನುಗ್ಗಿ ನಗದು, ಮೊಬೈಲ್ ಅಪಹರಿಸಿ ಪರಾರಿ ಯಾಗಿದ್ದಾರೆ.
ಸುಂಟಿಕೊಪ್ಪ ಉಲುಗುಲಿ ರಸ್ತೆಯ ಶ್ರೀಚಾಮುಂಡೇಶ್ವರಿ ಕಾಫಿ ವರ್ಕ್ಸ್ಗೆ ರಾತ್ರಿ ವೇಳೆ ಅಂಗಡಿಯ ಬೀಗವನ್ನು ಮುರಿದು ಒಳ ನುಸುಳಿದ ಕಳ್ಳರು ನಗದು ಪೆಟ್ಟಿಗೆಯಲ್ಲಿದ್ದ ೫ ಸಾವಿರ ರೂ. ಹಾಗೂ ಬ್ಯಾಂಕ್ ಖಾತೆ ಪುಸ್ತಕಗಳನ್ನು ಅಪಹರಿಸಿದ್ದಾರೆ. ನಂತರ ಅದೇ ರಸ್ತೆಯಲ್ಲಿದ್ದ ವೇದಾ ಮೋಟರ್ಸ್ ಡ್ರೆöÊವಿಂಗ್ ಸ್ಕೂಲ್ಗೆ ತೆರಳಿ ಬೀಗವನ್ನು ಮುರಿದು ಗಲ್ಲ ಪೆಟ್ಟಿಗೆಯನ್ನು ತೆರೆಯಲಾಗದೆ ಅಲ್ಲಿದ್ದ ಮೊಬೈಲ್ನ್ನು ಕಳವು ಮಾಡಿದ್ದಾರೆ.
ಬೆಳಿಗ್ಗೆ ಅಂಗಡಿ ಮಾಲೀಕರು ಅಂಗಡಿ ತೆರೆಯಲು ಮುಂದಾ ದಾಗ ಬೀಗವನ್ನು ಮುರಿದಿರುವುದು ಗೋಚರಿಸಿದೆ. ಮಾಲೀಕರು ದೂರು ನೀಡಿದ ಹಿನ್ನೆಲೆ ಸುಂಟಿಕೊಪ್ಪ ಪೊಲೀಸರು ಅಂಗಡಿಯನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.