ಕೂಡಿಗೆ, ನ. ೧೬: ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸುವ ಪರೀಕ್ಷೆ ಫಲಿತಾಂಶ ಗೊಂದಲಮಯವಾಗಿದೆ ಎಂದು ಆರೋಪಿಸಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ, ಬಿ.ಎ ವಿದ್ಯಾರ್ಥಿಗಳು ಕೂಡಿಗೆ, ನ. ೧೬: ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸುವ ಪರೀಕ್ಷೆ ಫಲಿತಾಂಶ ಗೊಂದಲಮಯವಾಗಿದೆ ಎಂದು ಆರೋಪಿಸಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ, ಬಿ.ಎ ವಿದ್ಯಾರ್ಥಿಗಳು ಎಂದು ತೋರಿಸುತ್ತಿದ್ದು, ಈ ಸಮಸ್ಯೆಯಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆ ಯಲ್ಲಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಈ ಗೊಂದಲಮಯ ಧೋರಣೆಯಿಂದ ಕಗ್ಗತ್ತಲಲ್ಲಿರುವ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾಲೇಜಿನ ಅಂತಿಮ ಬಿ.ಕಾಂ ಮತ್ತು ಬಿ.ಎ. ನ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿ ರೋಹಿತ್, ಪ್ರತಿ ಸೆಮಿಸ್ಟರ್ ಫಲಿತಾಂಶ ಪ್ರಕಟವಾದಾಗ ಫಲಿತಾಂಶ ಪಾಸ್ ಎಂದು ತೋರಿಸಿದರೂ ನಂತರ ಅದೇ ವೆಬ್‌ಸೈಟ್ ಪರಿಶೀಲಿಸಿದಾಗ ಫೇಲ್ ಎಂದು ತೋರಿಸುತ್ತದೆ. ಈ ರೀತಿ ಹಲವು ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಸಂಬAಧಿಸಿದವರು ಗಮನಹರಿಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ವಿದ್ಯಾರ್ಥಿಗಳಾದ ಯಶವಂತ್, ಪ್ರೀತಂ, ದಿನುಕುಮಾರ್, ಪ್ರಶಾಂತ್, ಕಾರ್ತಿಕ್, ಕಿರಣ್, ಅಮಿತ, ರಕ್ಷಿತ, ಸ್ಮಿತ ಮತ್ತಿತರರು ಇದ್ದರು. ಸಮಸ್ಯೆ ಬಗೆಹರಿಸಲು ಕೋರಿ ಕಾಲೇಜು ಪ್ರಾಂಶುಪಾಲರು ಹಾಗೂ ತಹಶೀಲ್ದಾರ ರಿಗೆ ಮನವಿ ಸಲ್ಲಿಸಲಾಯಿತು.