ಮಡಿಕೇರಿ, ನ. ೧೫: ವಿಷ್ಣುಶರಣ ಬಿ. ಸುಳ್ಯ ತಾಲೂಕಿನವರು ತಮ್ಮ ಮಾರುತಿ ಆಲ್ಟೋ ಕಾರು ಮಂಗಳೂರು-ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಮಹೇಂದ್ರ ಬೋಲೇರೋ ಜೀಪಿಗೆ ಡಿಕ್ಕಿಯಾಗಿ ಇತ್ತೀಚೆಗೆ ಅಪಘಾತವಾಗಿರುತ್ತದೆ.

ಇವರು ಕಾರಿನ ಇನ್ಸುರೆನ್ಸ್ ಅನ್ನು ಕ್ಲೇಮು ಮಾಡಲು ಬಜಾಜ್ ಅಲಿಯನ್ಸ್ ಜನರಲ್ ಇನ್ಸುರೆನ್ಸ್ ಕಂಪೆನಿ ಲಿ. ಇಲ್ಲಿಗೆ ಸಲ್ಲಿಸುತ್ತಾರೆ. ಆದರೆ ಇನ್ಸುರೆನ್ಸ್ ಕಂಪೆನಿಯವರು ದೂರುದಾರರ ಅಳಿಯನೇ ಕಾರು ಓಡಿಸುತ್ತಿದ್ದರು ಎಂದು ತಿಳಿಸಿ, ಕ್ಲೇಮ್ ನೀಡಿರುವುದಿಲ್ಲ.

ಆದ್ದರಿಂದ ದೂರುದಾರರು ಕೊಡಗು ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಗ್ರಾಹಕರ ಆಯೋಗವು ವಿಚಾರಣೆ ನಡೆಸಿ ದೂರನ್ನು ಭಾಗಶಃ ಪುರಸ್ಕರಿಸಿ ಕಾರಿಗೆ ಜಾಬ್ ಗಾರ್ಡಿನಲ್ಲಿರುವ ಮೊತ್ತವನ್ನು ೪೫ ದಿನಗಳ ಒಳಗೆ ಪಾವತಿಸುವಂತೆ ತಿಳಿಸಿ, ಪಾವತಿಸಲು ತಪ್ಪಿದ್ದಲ್ಲಿ ಶೇ.೯ ರಂತೆ ಬಡ್ಡಿಯನ್ನು ಸೇರಿಸಿ ಪಾವತಿಸಲು ಭಾದ್ಯರಾಗಿರುತ್ತಾರೆ ಹಾಗೂ ಎದುರುದಾರರು ರೂ. ೧೦ ಸಾವಿರ ಮಾನಸಿಕ ವೇದನೆಗೆ ಹಾಗೂ ಖರ್ಚು ವೆಚ್ಚಗಳಿಗೆ ೫ ಸಾವಿರಗಳನ್ನು ನೀಡಲು ಆದೇಶವಾಗಿರುತ್ತದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಮತ್ತು ಸಹಾಯಕ ರಿಜಿಸ್ಟಾçರ್ ಅವರು ತಿಳಿಸಿದ್ದಾರೆ.