ಮಡಿಕೇರಿ: ವೀರಾಜಪೇಟೆಯ ಬಿಟ್ಟಂಗಾಲ ಸಮೀಪದ ಅಂಬಟ್ಟಿ ಗ್ರಾಮದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಗೋಪೂಜೆ ನಡೆಯಿತು. ಗೋಪೂಜೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಯೋಗೇಶ್ , ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುನಿಲ್ ಮಾದಾಫುರ, ವೀರಾಜಪೇಟೆ ತಾಲೂಕು ಸಹ ಸಂಯೋಜಕ್ ಗಣೇಶ್ ಸೇರಿದಂತೆ ಸ್ಥಳೀಯ ಹಿಂ.ಜಾ.ವೇ. ಕಾರ್ಯಕರ್ತರು, ಗ್ರಾಮಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು.ಮೇಕೇರಿ ಶ್ರೀ ಗೌರಿಶಂಕರ ಸನ್ನಿಧಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾಲಂಕಾರ ಹಾಗೂ ಗೋಪೂಜೆ ನೆರವೇರಿತು.
ವೀರಾಜಪೇಟೆ: ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವೀರಾಜಪೇಟೆ ಪ್ರಖಂಡದಿAದ ಕಾವಾಡಿ ಶ್ರೀ ಗೋ ಶಾಲೆಯಲ್ಲಿ ಗೋ ಪೂಜೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ, ಸೇವಾ ಭಾರತೀಯ ಜಿಲ್ಲಾಧ್ಯಕ್ಷರಾದ ಟಿ.ಸಿ. ಚಂದ್ರ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ವಿವೇಕ್ ರೈ, ತಾಲೂಕು ಸಂಚಾಲಕ ಐನಂಡ ಕುಶಾಲಪ್ಪ, ಗೋ ಪರಿವಾರದ ಸೋಮಶೇಖರ್, ಜಾಗರಣ ವೇದಿಕೆ ತಾಲೂಕು ಸಂಚಾಲಕ ಗಣೇಶ್, ಗೋರಕ್ಷಾ ಪ್ರಮುಖ್ ಶರೀನ್, ರಾಜ, ವಿಶ್ವ ಹಾಗೂ ಸಂಘಟನೆ ಪ್ರಮುಖರು ಹಾಜರಿದ್ದರು.
ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವರ ಸಾನಿಧ್ಯದಲ್ಲಿ ಪಯಸ್ವಿನಿ ಯುವಕ ಸಂಘದ ವತಿಯಿಂದ ಕಾರ್ತಿಕ ದೀಪೋತ್ಸವ ನಡೆಯಿತು. ನಂತರ ಶ್ರೀ ಕ್ಷೇತ್ರದಲ್ಲಿ ಬಲಿಯೇಂದ್ರ ಪೂಜೆ ನಡೆಯಿತು. ಬಲಿ ಪಾಡ್ಯಮಿ ಹಬ್ಬದ ಹಿನ್ನೆಲೆಯನ್ನು ಕಿರಣ್ ಚೌಟಾಜೆ ಸಂಪಾಜೆ ಭಕ್ತಾಧಿಗಳಿಗೆ ವಿವರಿಸಿದರು. ನಂತರ ಪಯಸ್ವಿನಿ ಯುವಕ ಸಂಘ ವತಿಯಿಂದ ಗೋ ಪೂಜೆ ಕಾರ್ಯಕ್ರಮ ನಡೆಯಿತು. ದೇವಾಲಯದ ಮೊಕ್ತೇಸರರಾದ ಎಂ.ಬಿ ಸದಾಶಿವ ಅವರು ಗೋಪೂಜೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭ ಸಂಪಾಜೆಯ ಭಕ್ತಾಧಿಗಳು, ದೇವಾಲಯದ ಆಡಳಿತ ಮಂಡಲಿಯ ಪಧಾಧಿಕಾರಿಗಳು ಹಾಗೂ ಪಯಸ್ವಿನಿ ಯುವಕ ಸಂಘದ (ರಿ) ಪದಾಧಿಕಾರಿಗಳು ಮತ್ತು ಹಿರಿಯ, ಕಿರಿಯ ಸದಸ್ಯರುಗಳು ಭಾಗವಹಿಸಿದ್ದರು.
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನತೆ ಮಂಗಳವಾರ ದೀಪಾವಳಿ-ಬಲಿಪಾಡ್ಯಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮನೆಮನೆಗಳಲ್ಲೂ ತಳಿರು ತೋರಣದ ಜೊತೆಗೆ ಚೆಂಡು ಹೂವಿನ ಮಾಲೆಯೂ ಬಾಗಿಲನ್ನು ಅಲಂಕರಿಸಿತ್ತು. ಮುಂಜಾನೆಯೇ ಮನೆಯ ಹೆಣ್ಣುಮಕ್ಕಳು ಅಂಗಳದಲ್ಲಿ ಚೆಂದದ ರಂಗೋಲಿ ಬಿಡಿಸಿ ಚೆಂಡು ಹೂವಿನಿಂದ ಅಲಂಕರಿಸಿದ್ದರು. ಹಳ್ಳಿಗಳಲ್ಲಿ ಸಗಣಿ ಉಂಡೆಗೆ ಚೆಂಡು ಹೂವುಗಳನ್ನು ಸಿಕ್ಕಿಸಿ ಮನೆಯ ಹೊಸ್ತಿಲಿಗೆ ಹಾಗೂ ರಂಗೋಲಿ ಮೇಲಿಟ್ಟು ಅಲಂಕರಿಸಿದ್ದರು.
ಹಬ್ಬದಲ್ಲಿ ರೈತರು ತಮ್ಮ ಮನೆಗಳಲ್ಲಿ ಗೋಪೂಜೆ ಮಾಡಿದರು. ಮನೆಮನೆಗಳಲ್ಲಿ ಸಾಲುಸಾಲು ದೀಪಗಳನ್ನು ಬೆಳಗಿಸಿದರು. ತುಳು ಭಾಷಿಗರ, ಸಂಸ್ಕೃತಿಯ ಕೆಲ ಮನೆಗಳಲ್ಲಿ ಬಲಿಯೇಂದ್ರ ಪೂಜೆಯನ್ನು ಮಾಡಿ ವರ್ಷಕ್ಕೊಮ್ಮೆ ಭೂಮಿಗೆ ಬರುವ ಬಲೀಂದ್ರನನ್ನು ಆಹ್ವಾನಿಸಿ ಪೂಜಿಸಲಾಯಿತು. ಸೋಮವಾರಪೇಟೆ: ಬೆಳಕಿನ ಹಬ್ಬ ದೀಪಾವಳಿಯನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮನೆಗಳನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಿ, ಮನೆಯ ಮೆಟ್ಟಿಲು, ಬಾಗಿಲುಗಳ ಬಳಿ ಹೂಚೆಟ್ಟಿ ರಚಿಸಿ, ದೀಪಗಳನ್ನು ಹೊತ್ತಿಸಲಾಯಿತು. ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಹಲವಷ್ಟು ಮನೆಗಳಲ್ಲಿ ಅಗಲಿದ ಹಿರಿಯರಿಗೆ ಎಡೆ ಸಮರ್ಪಣೆ ಮಾಡಿ ಕುಟುಂಬಸ್ಥರೆಲ್ಲರೂ ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮಕ್ಕಳು, ವೃದ್ಧರಾದಿಯಾಗಿ ಮಹಿಳೆಯರೂ ಸಹ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹಸಿರು ದೀಪಾವಳಿ ಸಂಭ್ರಮ: ಪಟ್ಟಣ ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದಲ್ಲಿ ದೀಪಾವಳಿ ಅಂಗವಾಗಿ ಹಸಿರು ದೀಪಾವಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳು ಸಂಭ್ರಮದಿAದ ಭಾಗವಹಿಸಿದ್ದರು. ಹಣತೆಗಳನ್ನು ಹಚ್ಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಶಬ್ದ ಹಾಗೂ ವಾಯುಮಾಲಿನ್ಯಕ್ಕೆ ಕಾರಣವಾಗುವ ರಾಸಾಯನಿಕ ಮಿಶ್ರಿತ ಪಟಾಕಿಗಳ ಬದಲಿಗೆ ಬೆಳಕು ಸೂಸುವ ದೀಪಗಳನ್ನು ಹಚ್ಚಿ ಹಸಿರು ದೀಪಾವಳಿ ಆಚರಿಸುವ ಮೂಲಕ ವಾತಾವರಣವನ್ನು ಕಾಪಾಡಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಹೇಳಲಾಯಿತು. ಪಟಾಕಿ ಸಿಡಿತದಿಂದ ಹಲವಷ್ಟು ಮಕ್ಕಳು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪಟಾಕಿಗಳಿಂದ ದೂರವಿರಬೇಕೆಂದು ಮನವರಿಕೆ ಮಾಡಿಕೊಡಲಾಯಿತು.ಸಂಪಾಜೆ: ಆದರ್ಶ ಫ್ರೆಂಡ್ಸ್ ಚಡಾವು - ಸಂಪಾಜೆ, ಇದರ ವತಿಯಿಂದ ೧೧ನೇ ವರ್ಷದ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮವು ತಾ.೧೪ರ ಸಂಜೆ ಸಂಘದ ಸದಸ್ಯರು ಹಾಗೂ ವ್ಯಾಪ್ತಿಯ ಹಿಂದೂ ಬಾಂಧವರು ಹಾಗೂ ಮಹಿಳೆಯರ ಉಪಸ್ಥಿತಿಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಗೋಪೂಜೆಯ ಮಹತ್ವ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಗೋವಿನ ಪಾತ್ರ ಇದರ ಬಗ್ಗೆ ಹರೀಶ್ ಕೊಯಿಂಗಾಜೆ ಇವರು ಬೌದ್ಧಿಕ್ ನೀಡಿದರು. ರಮಾದೇವಿ ಬಾಲಚಂದ್ರ ಕಳಗಿ ಇವರು ದೀಪಾವಳಿಯ ಶುಭ ಹಾರೈಸಿದರು, ವೇದಿಕೆಯಲ್ಲಿ ಸಂಘದ ಸಂಚಾಲಕರಾದ ಅಜಿತ್ ದೇವರಗುಂಡ ಉಪಸ್ಥಿತರಿದ್ದರು. ಪುರುಷೋತ್ತಮ ಬಾಳೆಹಿತ್ಲು ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಕೆದಂಬಾಡಿ ವಂದಿಸಿದರು.
ಗೋವಿಗೆ ಪೂಜೆ ಸಲ್ಲಿಸುವುದರ ಮೂಲಕ ನೆರೆದಿದ್ದವರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ದೀಪಾವಳಿಯನ್ನು ಸಂಭ್ರಮಿಸಲಾಯಿತು.
ಚೆಟ್ಟಳ್ಳಿ: ಶ್ರೀ ವೀರಾಂಜನೇಯ ಯುವಕ ಸಂಘ ಚೆಟ್ಟಳ್ಳಿಯ ವತಿಯಿಂದ ಚೆಟ್ಟಳ್ಳಿಯ ಶ್ರೀ ನರೇಂದ್ರಮೋದಿ ಸಹಕಾರ ಭವನದಲ್ಲಿ ದೀಪಾವಳಿ ಆಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧೆಡೆ ಬಣ್ಣ ಬಣ್ಣದ ರಂಗೋಲಿ ಹಾಕಿ ಅಣತೆ ಹಚ್ಚಿದರು. ಬಲ್ಲಾರಂಡ ಮಣಿ ಉತ್ತಪ್ಪನವರು ಪಶುಪತಿನಾಥ, ಕಾವೇರಿಮಾತೆ, ಮಹಾಗಣಪತಿ, ಮಹಾವಿಷ್ಣು, ವೀರಾಂಜನೇಯನಿಗೆ ದೀಪಾರಾಧನೆ ನಡೆಸುವ ಮೂಲಕ ಪೂಜೆಸಲ್ಲಿಸಿ ಗ್ರಾಮದ ಒಳಿತಿಗೆ ಪ್ರಾರ್ಥಿಸಲಾಯಿತು. ಸಂಘದ ಸದಸ್ಯರು ಭಾಗಿಗಳಾಗಿದ್ದರು.
ಸೋಮವಾರಪೇಟೆ: ದೀಪಾವಳಿ ಮುನ್ನಾ ದಿನ ಆಚರಿಸುವ ಧನಲಕ್ಷಿö್ಮÃ ಪೂಜೆಯನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪೂಜೆಯ ಅಂಗವಾಗಿ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಪೂಜೆಯ ನಂತರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಇದರೊAದಿಗೆ ಗ್ರಾಮೀಣ ಭಾಗದಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಮನೆಗಳಲ್ಲಿ ಕಳಸ ಪ್ರತಿಷ್ಠಾಪಿಸಿ, ಚಿನ್ನಾಭರಣ, ನಗದು ಇಟ್ಟು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಮಹಿಳೆಯರು ಮನೆಯಲ್ಲಿ ಸಿದ್ಧಪಡಿಸಿದ್ದ ಸಿಹಿಯನ್ನು ಅಕ್ಕಪಕ್ಕದವರು, ನೆಂಟರಿಷ್ಟರಿಗೆ ಹಂಚಿದರು. ಸೋಮವಾರಪೇಟೆ ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಪತ್ರಿಕಾ ವಿತರಕ ಶಿವಕುಮಾರ್ ಅವರ ಶಿವ ಬುಕ್ ಸ್ಟಾಲ್ನಲ್ಲಿ ಧನಲಕ್ಷಿö್ಮÃ ಪೂಜೆ ಸಂಭ್ರಮದಿAದ ನೆರವೇರಿತು. ಭಾಗಮಂಡಲ: ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನದಂದು ಗೋಧೂಳಿ ಲಗ್ನದಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿ ಗೋಪೂಜೆ ನೆರವೇರಿಸಲಾಯಿತು. ನಂತರ ಪ್ರಸಾದ ವಿನಿಯೋಗ ನಡೆಯಿತು.
ದೀಪಾವಳಿ ಹಬ್ಬದ ಅಂಗವಾಗಿ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯ ಭಕ್ತಾದಿಗಳು ಕಂಡು ಬಂದರು. ಅಮಾವಾಸ್ಯೆ ದಿನ ಭಕ್ತರು ಕ್ಷೇತ್ರದಲ್ಲಿ ಪಿಂಡಪ್ರಧಾನ ನೆರವೇರಿಸಿದರು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪಾರುಪತ್ಯೆಗಾರ ಪೊನ್ನಣ್ಣ ಉಪಸ್ಥಿತರಿದ್ದರು. -ಸುನಿಲ್
ಸೋಮವಾರಪೇಟೆ: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದ ಬಸವೇಶ್ವರ ದೇವಾಲಯ ಹಾಗೂ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆಗಳೊಂದಿಗೆ ಗೋ ಪೂಜೆ ನೆರವೇರಿಸಲಾಯಿತು. ಬಸವೇಶ್ವರ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ವೀರಶೈವ ಸಮಾಜ ಯಜಮಾನ ಬಿ.ಪಿ. ಶಿವಕುಮಾರ್ ,ಶೆಟ್ಟರಾದ ಬಿ. ಆರ್. ಮೃತ್ಯುಂಜಯ, ಕಾರ್ಯದರ್ಶಿ ಸಿ.ಸಿ. ನಾಗರಾಜ್ ಸೇರಿದಂತೆ ಸಮಾಜ ಬಾಂಧವರು, ಭಕ್ತಾದಿಗಳು ಉಪಸ್ಥಿತರಿದ್ದರು.
ಆಂಜನೇಯ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ದೇವಾಲಯ ಸಮಿತಿ ಪ್ರಮುಖರಾದ ಸೀತಾರಾಮ್, ನಂದಕುಮಾರ್, ಬನ್ನಳ್ಳಿ ಗೋಪಾಲ್, ಸುಭಾಷ್ ತಿಮ್ಮಯ್ಯ, ಎಂ.ಬಿ. ಉಮೇಶ್, ರಾಘವ, ಅರೆಯೂರು ಜಯಣ್ಣ, ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.