ಕೂಡಿಗೆ, ನ. ೧೫: ಮಿನಿ ವಿಮಾನ ನಿಲ್ದಾಣಕ್ಕೆ ಸಂಬAಧಿಸಿದAತೆ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಅಳುವಾರ ವ್ಯಾಪ್ತಿಯ ಗ್ರಾಮಗಳಲ್ಲಿರುವ ಕಂದಾಯ ಇಲಾಖೆಯ ಜಾಗದ ಸರ್ವೆ ಕಾರ್ಯ ಮುಗಿದಿದೆ.
ಕಳೆದ ೫ ವರ್ಷಗಳಿಂದಲೂ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ೪೯ ಏಕರೆಗಳಷ್ಟು ಪ್ರದೇಶದಲ್ಲಿ ಏರ್ ಸ್ಟಿçಪ್ನೊಂದಿಗೆ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬAಧಿಸಿದAತೆ ಅನೇಕ ಪ್ರಕ್ರಿಯೆಗಳು ನಡೆದಿದ್ದವು.
ಆದರೆ ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ಆರಂಭಕ್ಕೆ ಸಂಬAಧಿಸಿದAತೆ ಕೃಷಿ ಇಲಾಖೆಯ ೪೯ ಎಕರೆ ಪ್ರದೇಶದ ಜಾಗದಲ್ಲಿ ವಿಮಾನಯಾನ ಸಂಸ್ಥೆಗಳ ನಿಯಮದಡಿಯಲ್ಲಿ ಜಾಗದ ಕೊರತೆ ಹಿನ್ನೆಲೆಯಲ್ಲಿ ಇದೀಗ ಕೂಡಿಗೆಯ ಬದಲು ದೊಡ್ಡ ಅಳುವಾರದ ಸಮೀಪದಲ್ಲಿರುವ ೧೩೦.೨೪ ಏಕರೆಗಳಷ್ಟು ಜಾಗವನ್ನು ಆಯ್ಕೆ ಮಾಡಲಾಗಿದೆ.
ಮಿನಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸುವಿಕೆಯೊಂದಿಗೆ ಜಾಗದ ನಕ್ಷೆಯು ಸಿದ್ದಗೊಂಡಿದ್ದು, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಹಂತಕ್ಕೆ ತಲುಪಿ ಮುಂದಿನ ಯೋಜನೆಗಳು ರೂಪುಗೊಳ್ಳಬೇಕಿದೆ. -ಕೆ.ಕೆ. ನಾಗರಾಜಶೆಟ್ಟಿ.