*ಗೋಣಿಕೊಪ್ಪ, ನ. ೧೫: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬAಧಿಸಿದAತೆ ಗೋಣಿಕೊಪ್ಪ ರಿಲಯನ್ಸ್ ಪೆಟ್ರೋಲ್ ಬಂಕ್ ಮಾಲೀಕರುಗಳಾದ ಕೆ.ಪಿ. ನಂಜಪ್ಪ ಅವರಿಗೆ ೬ ತಿಂಗಳು, ಕೆ.ಎನ್ ಬೋಪಣ್ಣ ಅವರಿಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಪೊನ್ನಂಪೇಟೆ ಕಾಫಿ ಉದ್ಯಮಿ ಈಶ್ವರ್ ಅವರ ಕಾಫಿ ವ್ಯಾಪಾರದಲ್ಲಿ ನಡೆದ ಸಾಲ ವ್ಯವಹಾರಕ್ಕೆ ಸಂಬAಧಿಸಿದAತೆ ಚೆಕ್ ಬೌನ್ಸ್ ಪ್ರಕರಣ ಪೊನ್ನಂಪೇಟೆ ಜೆ.ಎಂ.ಎಪ್.ಸಿ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಕೆ.ಎನ್. ಬೋಪಣ್ಣ ಅವರಿಗೆ ೩೪ ಲಕ್ಷದ ೧೬ ಸಾವಿರ ರೂಪಾಯಿಗಳ ವಸೂಲಿ ಮತ್ತು ದೂರುದಾರರಿಗೆ ೫ ಸಾವಿರ ರೂಪಾಯಿಗಳ ಪರಿಹಾರ ಧನ ಒದಗಿಸಿಕೊಡುವಂತೆ ಇಲ್ಲದಿದ್ದಲ್ಲಿ ಮತ್ತೆ ೩ ತಿಂಗಳ ಕಾಲ ಸಾದ ಜೈಲುವಾಸ ಹಾಗೂ ಕೆ.ಪಿ. ನಂಜಪ್ಪ ಅವರಿಗೆ ೬ ತಿಂಗಳ ಜೈಲು ಶಿಕ್ಷೆ ೨೩ ಲಕ್ಷದ ೬೦ ಸಾವಿರ ವಸೂಲಿ ಮತ್ತು ೫ ಸಾವಿರ ರೂಪಾಯಿ ದೂರುದಾರರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ತಪ್ಪಿದ್ದಲ್ಲಿ ೩ ತಿಂಗಳ ಜೈಲು ಶಿಕ್ಷೆಗೆ ಪೊನ್ನಂಪೇಟೆ ನ್ಯಾಯಾಲಯ ಸೂಚಿಸಿದೆ. ವಕೀಲ ಎಸ್.ಬಿ. ಸುರೇಶ್ ವಕಾಲತ್ತು ವಹಿಸಿದ್ದರು. ನ್ಯಾಯಾಧೀಶೆ ಆಶಾ ಅವರು ಕಳೆದ ಮೂರು ತಿಂಗಳ ಹಿಂದಿನಿAದ ನಡೆದ ವ್ಯಾಜ್ಯಕ್ಕೆ ಅಂತಿಮ ತೀರ್ಪು ನೀಡಿದ್ದಾರೆ.