ಕುಶಾಲನಗರ, ನ.೧೫ : ಅಂತರರಾಷ್ಟಿçÃಯ ಸೆಸ್ಟೋಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸುಂಟಿಕೊಪ್ಪದ ಇರ್ಷಾದ್ ಮುಸ್ತಫ ಮತ್ತು ಟೀಮ್ ಇಂಡಿಯಾ ಕ್ಯಾಪ್ಟನ್ ಶಾಯಿಲ್ ಉಸ್ಮಾನ್ ಅವರುಗಳನ್ನು ಜಿಲ್ಲೆಯ ಗಡಿ ಭಾಗ ಕುಶಾಲನಗರದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
೨೦೨೩ ರ ಅಂತರರಾಷ್ಟಿçÃಯ ಮಟ್ಟದ ಸೆಸ್ಟೋಬಾಲ್ ಚಾಂಪಿಯನ್ಶಿಪ್ನಲ್ಲಿ ಥೈಲ್ಯಾಂಡ್ ಹಾಗೂ ಶ್ರೀಲಂಕಾ ವಿರುದ್ಧ ಭಾರತಕ್ಕೆ ಚಿನ್ನದ ಪದಕಗಳಿಸಿದ್ದು, ಇರ್ಷಾದ್ ಮುಸ್ತಫ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಹೊರಹೊಮ್ಮಿದ್ದಾರೆ. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಗೆಳೆಯರ ಬಳಗದ ಸದಸ್ಯರು, ಕಾಂಗ್ರೆಸ್ ಪಕ್ಷದ ಪ್ರಮುಖರು, ಕ್ರೀಡಾಪಟುಗಳ ಕುಟುಂಬ ಸದಸ್ಯರು ಸನ್ಮಾನಿಸಿ ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಸಾಧಕರು ಸೆಸ್ಟೋಬಾಲ್ ಕ್ರೀಡೆಗೆ ಭಾರತದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕ್ರೀಡಾಪಟುಗಳಿಗೆ ಕ್ರಿಕೆಟ್ ಆಟಗಾರರ ರೀತಿಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಮನವಿ ಮಾಡಿದರು. ಸಾಧಕರನ್ನು ಗೇಟ್ ಬಳಿಯಿಂದ ಕುಶಾಲನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ , ಗೆಳೆಯರ ಬಳಗದ ಪ್ರಮುಖರಾದ ವಿ ಎನ್ ಆನಂದಕುಮಾರ್, ಚಂದ್ರು, ಮುಸ್ತಫ ಹಾಗೂ ಬಳಗದ ಸದಸ್ಯರು, ಸಾರ್ವಜನಿಕರು ಇದ್ದರು.