(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ನ. ೧೫ : ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ - ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರಿಟಿ ತಾಲೂಕಿನ ಅಯ್ಯನ್‌ಗುಂದ್ ಪಂಚಾಯಿತಿಯ ಉರುಪ್ಪುಕುಚ್ಚಿ ಸ್ಥಳದಲ್ಲಿ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡಿದ್ದು ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ನಂತರ ನಕ್ಸಲರು ಕೊಡಗಿನ ಗಡಿ ಭಾಗಕ್ಕೆ ನುಸುಳಬಹುದು ಎಂಬ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೊಡಗು ಪೊಲೀಸರು ಕೊಡಗಿನ ಗಡಿ ಭಾಗವಾದ ಕುಟ್ಟ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಸಿಲುಕಿಕೊಂಡ ನಕ್ಸಲರು ಕೊಡಗಿನ ಗಡಿ ಭಾಗದಲ್ಲಿ ಇರುವ ಮೆಡಿಕಲ್ ಸ್ಟೋರ್‌ಗಳಿಗೆ ಅಗತ್ಯ ಔಷಧಿಗಳ ಖರೀದಿಗೆ ಆಗಮಿಸಬಹುದೆಂಬ ಸಂಶಯವಿರುವುದರಿAದ ಪೊಲೀಸರು ಗಡಿಗೆ ಹೊಂದಿಕೊAಡಿರುವ ಮೆಡಿಕಲ್ ಶಾಪ್‌ಗಳ ಮೇಲೆ ಕಣ್ಗಾವಲಿಟ್ಟಿದ್ದಾರೆ. ಅಲ್ಲದೆ, ಸುತ್ತಮುತ್ತಲ ಹೋಂಸ್ಟೇಗಳು ಹಾಗೂ ಹೊಟೇಲ್‌ಗಳ ಮೇಲೂ ಗಮನವಿರಿಸಲಾಗಿದೆ.

ಕೇರಳ ಗಡಿಗೆ ಹೊಂದಿಕೊAಡಿರುವ ಬಿರುನಾಣಿ, ತೆರಾಲು, ಪರಕÀಟಕೇರಿ, ಕುಟ್ಟ ಸೇರಿದಂತೆ ಇನ್ನಿತರ ಭಾಗದಲ್ಲಿ ಪೊಲೀಸರು ವಿವಿಧ ತಂಡದಲ್ಲಿ ಕೂಂಬಿAಗ್ ಕಾರ್ಯಾಚರಣೆ ಮುಂದುವರೆಸುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಆಯಾಕಟ್ಟಿನ ಸ್ಥಳದಲ್ಲಿ ಚೆಕ್‌ಪೋಸ್ಟ್ಗಳನ್ನು ಹಾಗೂ ನಾಕಾಬಂದಿಗಳನ್ನು ಹಾಕುವ ಮೂಲಕ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಸಂಶಯಾಸ್ಪದ ವ್ಯಕ್ತಿ ಕಂಡು ಬಂದಲ್ಲಿ ಕೂಡಲೇ ವಿಚಾರಣೆಗೆ ಒಳಪಡಿಸುವಂತೆ ಪೊಲೀಸರಿಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ನಿರ್ದೇಶನ ನೀಡಿದ್ದಾರೆ. ಈಗಾಗಲೇ ಕೊಡಗು ಎಸ್ಪಿ ರಾಮರಾಜನ್ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಕುಟ್ಟ ಭಾಗದ ಗಡಿಯಲ್ಲಿ ಪೊಲೀಸ್ ಸಿಬ್ಬಂದಿಗಳು ನಡೆಸುತ್ತಿರುವ ಕೂಂಬಿAಗ್ ಕಾರ್ಯಾಚರಣೆ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ್ದಾರೆ. ಕುಟ್ಟ ಭಾಗದಲ್ಲಿ ಎಎನ್‌ಎಫ್ ತಂಡ ಬೀಡುಬಿಟ್ಟಿದ್ದು ಈ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರಿಟಿ ತಾಲೂಕಿನ ಅಯ್ಯನ್‌ಗುಂದ್ ಪಂಚಾಯಿತಿಯ ಉರುಪ್ಪುಕುಚ್ಚಿ ಅರಣ್ಯ ಪ್ರದೇಶದಲ್ಲಿ ಕೇರಳ ಪೋಲಿಸರ ವಿಶೇಷ ತಂಡ ಕೂಂಬಿAಗ್ ನಡೆಸುತ್ತಿದ್ದ ವೇಳೆ ನಕ್ಸಲರ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಕೇರಳ ಪೊಲೀಸರು ಹಲವು ನಕ್ಸಲರನ್ನು ವಶಕ್ಕೆ ಪಡೆದಿದ್ದರು. ಕೆಲವರು ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ನಕ್ಸಲರು ಕೊಡಗಿನ ಗಡಿ ಭಾಗವಾದ ಕುಟ್ಟ ಅರಣ್ಯ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಕ್ಕೆ ಲಗ್ಗೆ ಇಡಬಹುದು ಎಂಬ ಕಾರಣದಿಂದ ಇಲ್ಲಿನ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.