ಅಹ್ಮದಾಬಾದ್, ನ. ೧೩: ದೇಶದಲ್ಲಿ ನಡೆಯುತ್ತಿರುವ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೇರಿದಂತೆ ಇತರ ೩ ಬಲಿಷ್ಠ ತಂಡಗಳಾದ ಆಸ್ಟೆçÃಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಝಿಲ್ಯಾಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿವೆ. ಈ ೪ ಅನುಭವಿ ‘ಕ್ರಿಕೆಟಿಂಗ್’ ರಾಷ್ಟçಗಳಿಗೆ ಹೋಲಿಸಿದರೆ ಉಗ್ರಗಾಮಿ ತಾಲಿಬಾನ್ ಆಳ್ವಿಕೆಯಲ್ಲಿಯೇ ಮುಂದೆ ಸಾಗುತ್ತಿರುವ ಅಫ್ಘಾನಿಸ್ತಾನ ದೇಶವು ಭಾರತದ ಸಹಾಯದ ಮುಖಾಂತರ ಕ್ರಿಕೆಟ್ ಕ್ರೀಡೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಸರು ಪಡೆಯುತ್ತಿದೆ. ಆದರೆ ಈ ಬಾರಿಯ ವಿಶ್ವಕಪ್ನಲ್ಲಿ ಮತ್ತೊಂದು ಹೆÀಜ್ಜೆ ಮುಂದೆ ಸಾಗಿ ಬಲಿಷ್ಠ ತಂಡಗಳಾದ ಇಂಗ್ಲೆAಡ್, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ನೆದರ್ಲ್ಯಾಂಡ್ ರಾಷ್ಟçಗಳ ಎದುರು ಜಯ ಸಾಧಿಸಿ ಅಫ್ಘಾನ್ ಇತಿಹಾಸ ಸೃಷ್ಟಿಸಿದೆ. ಈ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಅಫ್ಘಾನ್ ಒಂದಕ್ಕಿAತ ಹೆಚ್ಚು ವಿಶ್ವಕಪ್ ಪಂದ್ಯಗಳನ್ನು ಗೆದ್ದಿದೆ. ಮೊದ¯ ಬಾರಿಗೆ ತಂಡದ ಬ್ಯಾಟ್ಸ್ಮ್ಯಾನ್ ವಿಶ್ವಕಪ್ನಲ್ಲಿ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ್ದಾರೆ.
ಆಸ್ಟೆçÃಲಿಯಾ, ದಕ್ಷಿಣ ಆಫ್ರಿಕಾ ರಾಷ್ಟçಗಳನ್ನೂ ಸೋಲಿಸುವ ಹಂತ ತಲುಪಿತ್ತಾದರೂ ಕೊನೆ ಹಂತದಲ್ಲಿ ವಿಫಲವಾಯಿತು. ಸೆಮಿಫೈನಲ್ ಪ್ರವೇಶಿಸಲು ವಿಫಲವಾದರೂ ತಂಡದ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಪ್ರದರ್ಶಿಸಿದ ಶ್ರಮ, ಶಿಸ್ತು, ಸ್ಫೂರ್ತಿಯಿಂದಾಗಿ ತಮ್ಮ ಗೌರವ ಹೆಚ್ಚಿಸಿಕೊಂಡರು. ಈ ನಡುವೆ ತಂಡದ ಆಟಗಾರರೊಬ್ಬ ಮೈದಾನ ಹೊರಗೂ ಮಾನವೀಯ ಕಾರ್ಯ ಕೈಗೊಳ್ಳುವ ಮೂಲಕ ಮಾದರಿಯಾಗಿ ಸರ್ವರ ಮನಗೆದ್ದಿದ್ದಾರೆ.
ತಾ.೧೩ ರ ಮಧ್ಯರಾತ್ರಿ ಸುಮಾರು ೩ ಗಂಟೆಗೆ ಗುಜರಾತ್ನ ಅಹ್ಮದಾಬಾದ್ನಲ್ಲಿ ತಾವು ತಂಗಿದ್ದ ಹೊಟೇಲ್ನಿಂದ ವಾಹನದಲ್ಲಿ ನಗರದ ರಸ್ತೆಯೊಂದಕ್ಕೆ ಅಫ್ಘಾನ್ ತಂಡದ ಆರಂಭಿಕ ದಾಂಡಿಗ ರಹಮನುಲ್ಹಾ ಗುರ್ಬಾಜ್ ಆಗಮಿಸಿದ್ದಾರೆ. ಅಲ್ಲಿ ಬಹಳ ಸಂಖ್ಯೆಯಲ್ಲಿ ನಿರಾಶ್ರಿತರು ಮಲಗಿದ್ದನ್ನು ಗಮನಿಸಿದ ಅವರು ಸ್ಥಳೀಯರೋರ್ವರ ಸಹಕಾರದಿಂದ ಪ್ರತಿಯೋರ್ವರಿಗೆ ದೀಪಾವಳಿ ಕೊಡುಗೆಯಾಗಿ ರೂ.೫೦೦ ನೀಡಿ ತಮ್ಮ ವಾಹನ ಹತ್ತಿ ಸದ್ದಿಲ್ಲದೆಯೇ ವಾಪಸ್ಸು ತೆರಳಿದ್ದಾರೆ. ಈ ಚಿತ್ರಣವೊಂದನ್ನು ಅಲ್ಲಿನ ನಿವಾಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಿರಾಶ್ರಿತರಿಗೆ ದೀಪಾವಳಿ ಆಚರಣೆ ಮಾಡುವ ನಿಟ್ಟಿನಲ್ಲಿ ಅವರಿಗೆ ಅರಿವಿಲ್ಲದೆಯೇ ಅವರುಗಳು ಮಲಗಿದ್ದ ಜಾಗದಲ್ಲಿ ನಗದು ಇಟ್ಟು ಮಾನವೀಯತೆ ಮೆರೆದು ಸರ್ವರ ಪ್ರಶಂಸೆಗೆ ಗುರ್ಬಾಜ್ ಪಾತ್ರರಾಗಿದ್ದಾರೆ.