ನಾಪೋಕ್ಲು, ನ. ೧೩: ಕೊಡಗಿನ ಪ್ರಮುಖ ಹಬ್ಬ ‘ಹುತ್ತರಿ’ (ಪುತ್ತರಿ ನಮ್ಮೆ) ಯನ್ನು ನವೆಂಬರ್ ೨೭ ರಂದು ಆಚರಿಸಲು ಕಕ್ಕಬೆಯ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸೋಮವಾರ ದಿನ ನಿಗದಿಪಡಿಸಲಾಯಿತು.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ನಾಡಿನ ಹದಿಮೂರು ತಕ್ಕಮುಖ್ಯಸ್ಥರು, ಊರಿನ ಗಣ್ಯರು ಸಂಪ್ರದಾಯದAತೆ ದೇವಾಲಯದ ಅಮ್ಮಂಗೇರಿ ಜ್ಯೋತಿಷ್ಯರಾದ ಶಶಿಕುಮಾರ್, ಕಣಿಯರ ನಾಣಯ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಣೆಯ ಸಮಯವನ್ನು ನಿಗದಿಪಡಿಸಿದರು.

ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನವಾದ ನವೆಂಬರ್ ೨೭ ರಂದು ಸೋಮವಾರ ರಾತ್ರಿ ೭.೨೦ ಗಂಟೆಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು, ೮.೨೦ ಗಂಟೆಗೆ ಕದಿರು ತೆಗೆಯುವುದು ಮತ್ತು ೯.೨೦ ಗಂಟೆಗೆ ಪ್ರಸಾದ ಭೋಜನ ಸ್ವೀಕಾರ ಮಾಡಲು ಶುಭ ಘಳಿಗೆಯಾಗಿರುವುದನ್ನು ನಿರ್ಧರಿಸಲಾಯಿತು.

ಸಂಪ್ರದಾಯದAತೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪ್ರಥಮವಾಗಿ ಹುತ್ತರಿ ಆಚರಣೆ ಬಳಿಕ ನಾಡಿನೆಲ್ಲೆಡೆ ರಾತ್ರಿ ೭.೪೫ ಕ್ಕೆ ನೆರೆ ಕಟ್ಟುವುದು, ೮.೪೫ ಕ್ಕೆ ಕದಿರು ತೆಗೆಯುವುದು ಮತ್ತು ೯.೪೫ ಕ್ಕೆ ಪ್ರಸಾದ ಭೋಜನ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಹುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಹುತ್ತರಿಗೆ ಮುನ್ನಾ ದಿನವಾದ ನವೆಂಬರ್ ೨೬ ರಂದು ಭಾನುವಾರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕಲ್ಲಾಡ್ಚ ಹಬ್ಬವನ್ನು ಆಚರಿಸಲು ದಿನ ನಿಗದಿಪಡಿಸಲಾಯಿತು.

ಈ ಸಂದರ್ಭ ದೇಶ ತಕ್ಕರು, ದೇವತಕ್ಕರೂ

(ಮೊದಲ ಪುಟದಿಂದ) ಆದ ಪರದಂಡ ಕುಟುಂಬದ ಪರವಾಗಿ ಸುಬ್ರಮಣಿ ಕಾವೇರಪ್ಪ ಮಾತನಾಡಿ ದೇವಾಲಯದ ಕಟ್ಟುಪಾಡುಗಳನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಸಮಸ್ತ ಭಕ್ತರು ಅನುಸರಿಸಿ ಸಹಕರಿಸುವಂತೆ ಮನವಿ ಮಾಡಿದರು. ಭಕ್ತರು ದೇಶಕಟ್ಟು ಅನ್ನು ತಪ್ಪದೆ ಪಾಲಿಸಬೇಕು. ಮಲ್ಲಬೆಟ್ಟದಲ್ಲಿ ಇಂದು ಮಧ್ಯಾಹ್ನ ನಂತರ ದೇಶಕಟ್ಟು ಹಾಕಲಾಗಿದ್ದು, ಈ ದಿನದಿಂದ ೧೫ ದಿನಗಳ ನಂತರ ನಡೆಯುವ ಕಲ್ಲಾಡ್ಚದ ದಿನ ಕಟ್ಟು ಸಡಿಲಿಸುವವರೆಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ದೇಶ ಕಟ್ಟನ್ನು ಪಾಲಿಸಿ ಆಡಂಬರದ ಸಭೆ ಸಮಾರಂಭ, ಮದುವೆ, ಪ್ರಾಣಿ ಹಿಂಸೆ ಇತ್ಯಾದಿಗಳಿಂದ ದೂರವಿದ್ದು ಸಂಪ್ರದಾಯದAತೆ ವಿಧಿ ವಿಧಾನಗಳನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಹುತ್ತರಿ ಆಚರಣೆಗೆ ಸಂಬAಧಿಸಿದAತೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ, ಪೂಜೆ ಸಲ್ಲಿಸಿ ಅನಂತರ ಮಹಾಪೂಜೆ ನಡೆದು ಸಾರ್ವಜನಿಕರಿಗೆ ಹುತ್ತರಿ ದಿನ ನಿಗದಿ ವಿವರಗಳನ್ನು ತಿಳಿಸಲಾಯಿತು.

ಪ್ರಮುಖರುಗಳಾದ ಕಲ್ಯಾಟಂಡ ಮುತ್ತಪ್ಪ, ನಂಬುಡಮAಡ ಸುಬ್ರಮಣಿ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮೇಚಂಡ ಜಯ ಜೋಯಪ್ಪ, ಪರದಂಡ ವಿಠಲ, ಬಡಕಡ ಸುರೇಶ್, ಕುಂಡ್ಯೋಳAಡ ವಿಶು ಪೂವಯ್ಯ, ಕೇಟೋಳಿರ ರಘು ಕುಟ್ಟಪ್ಪ, ಕೇಟೋಳಿರ ರಾಜಪ್ಪ ಕುಟ್ಟಪ್ಪ, ಪೇರಿಯಂಡ ಪೂವಯ್ಯ, ಕುಟ್ಟಂಜೆಟ್ಟೀರ ಶ್ಯಾಂ, ಕೇಲೇಟಿರ ಮಧು, ಕುಲ್ಲೇಟಿರ ನಂದಾ ನಾಚಪ್ಪ, ಪಾರುಪತ್ತೆಗಾರರಾದ ಪರದಂಡ ಪ್ರಿನ್ಸ್ ತಮ್ಮಯ್ಯ, ಕಣಿಯರ ಪ್ರಕಾಶ್, ಜೀವನ್, ಇನ್ನಿತರರು ಉಪಸ್ಥಿತರಿದ್ದರು. ವರದಿ: ದುಗ್ಗಳ ಸದಾನಂದ