ನಾಪೋಕ್ಲು, ನ. ೧೩: ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಸಂಸ್ಥಾಪಕ ಸಂಪಾದಕರಾದ ಡಾ. ಕಲ್ಯಾಟಂಡ ಬಿ. ಗಣಪತಿ ಅವರಿಗೆ ಮೈಸೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಕಕ್ಕಬ್ಬೆ ಕುಂಜಿಲ ಗ್ರಾಮದ ಕಲ್ಯಾಟಂಡ ಐನ್‌ಮನೆಯಲ್ಲಿ ಅವರನ್ನು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗಣಪತಿ, ಕುಟುಂಬಗಳ ನಡುವೆ ಒಗ್ಗಟ್ಟು, ಸಾಮರಸ್ಯ ಅಗತ್ಯ. ಕಲ್ಯಾಟಂಡ ಕುಟುಂಬದಲ್ಲಿ ವಾರ್ಷಿಕವಾಗಿ ೩-೪ ಬಾರಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಟಂಡ ಅಪ್ಪಚ್ಚು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಕುಟುಂಬದ ಹಿರಿಯರಾದ ಪ್ರೊ. ಕಲ್ಯಾಟಂಡ ಪೂಣಚ್ಚ, ಕಲ್ಯಾಟಂಡ ಅಯ್ಯಪ್ಪ, ಕಲ್ಯಾಟಂಡ ಮುತ್ತಪ್ಪ ಮಾತನಾಡಿದರು. ವೇದಿಕೆಯಲ್ಲಿ ಕಲ್ಯಾಟಂಡ ಕುಟುಂಬದ ಅಧ್ಯಕ್ಷ ಕಲ್ಯಾಟಂಡ ಚಿಣ್ಣಪ್ಪ, ಕಲ್ಯಾಟಂಡ ರ‍್ಯಾಲಿ ಗಣಪತಿ, ಕಲ್ಯಾಟಂಡ ಶಾರದ ಅಪ್ಪಣ್ಣ, ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು. ಕಲ್ಯಾಟಂಡ ಜಾನ್ಸಿ ಗಣಪತಿ ಪ್ರಾರ್ಥನೆ, ಕಲ್ಯಾಟಂಡ ಪ್ರೊ. ಪೂಣಚ್ಚ ಸ್ವಾಗತ, ಕಲ್ಯಾಟಂಡ ತೇಜಸ್ವಿನಿ ನಿರೂಪಿಸಿ, ಕಲ್ಯಾಟಂಡ ರಮೇಶ್ ಚಂಗಪ್ಪ ವಂದಿಸಿದರು.