ಸಿದ್ದಾಪುರ, ನ. ೧೩: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕ ರನ್ನು ಬಂಧಿಸಿದ ಘಟನೆ ಸಿದ್ದಾಪುರ ಸಮೀಪದ ಚೆನ್ನಯ್ಯನ ಕೋಟೆಯಲ್ಲಿ ನಡೆದಿದೆ.
ಚೆನ್ನಯ್ಯನಕೋಟೆ ಮುಖ್ಯ ರಸ್ತೆ ಬದಿ ಆಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಸಿದ್ದಾಪುರ ಪೊಲೀಸರಿಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ೨೦ ಕೆ.ಜಿ. ಗೋಮಾಂಸ ಸಹಿತ ಆರೋಪಿಗಳಾದ ಹುಸೈನ್ ಮತ್ತು ಆಸ್ಮತ್ ಎಂಬುವರುಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.