ವೀರಾಜಪೇಟೆ, ನ. ೧೩: ನಗರ ಅಭಿವೃದ್ಧಿ ಕಾಣಲು ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಕೈಜೋಡಿಸಬೇಕೆಂದು ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಸೋಮವಾರ ವೀರಾಜಪೇಟೆ ಪುರಸಭೆಯ ಕಳೆದ ಆರು ತಿಂಗಳಿನ ಅಭಿವೃದ್ಧಿ ಅವಲೋಕನಾ ಸಭೆಯಲ್ಲಿ ಪಾಲ್ಗೊಂಡು ಪುರಸಭಾ ಸದಸ್ಯರುಗಳಿಗೆ ಹಾಗೂ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಆಡಳಿತಾಧಿಕಾರಿ ಯತೀಶ್ ಉಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹಾಜರಿದ್ದು ಸಲಹೆ ಸೂಚನೆ ನೀಡಿದರು. ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಸಭೆಯ ನಡಾವಳಿ ಮಂಡನೆ ಮಾಡಿದರು.

ಚಿಕ್ಕಪೇಟೆ ವಾರ್ಡ್ನ ಆಶಾ ಸುಬ್ಬಯ್ಯ, ತೆಲುಗರ ಬೀದಿ ವಾರ್ಡ್ನ ಡಿ.ಪಿ.ರಾಜೇಶ್, ಈಗಾಗಲೇ ಟೆಂಡರ್ ಪಡೆದಿರುವವರ ಬೇಜವಾಬ್ದಾರಿ, ವರ್ತನೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ವಿಳಂಬದ ಕುರಿತು ಶಾಸಕರ ಗಮನ ಸೆಳೆದರು.

ಶಾಸಕದ್ವಯರು ಈಗಾಗಲೆ ಈ ಬಗ್ಗೆ ಒಬ್ಬರಿಂದ ಮಾತ್ರ ಟೆಂಡರ್ ಬಂದಿರುವುದರಿAದ ತಾತ್ಕಾಲಿಕ ನೆಲೆಯಲ್ಲಿ ಷರತ್ತುಗಳ ಆಧಾರದಲ್ಲಿ ಅವರ ಟೆಂಡರನ್ನೇ ಮುಂದುವರಿಸು ವಂತೆ ಸಲಹೆಯಿತ್ತರು. ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯದ ಬಗ್ಗೆ ಸದಸ್ಯರುಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿ ಸಂಬAಧಿಸಿದ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ಮೀನುಮಾರುಕಟ್ಟೆ ಸಂಕೀರ್ಣ ದಲ್ಲಿ ತಾತ್ಕಾಲಿಕವಾಗಿ ಕುರಿ ಮತ್ತು ಕೋಳಿ ಮಾಂಸದ ಮಳಿಗೆ ಪ್ರಾರಂಭಿಸುವAತೆ ತೀರ್ಮಾನಿಸ ಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ನೈರ್ಮಲ್ಯವೂ ಸೇರಿದಂತೆ ಇತರ ದಿನನಿತ್ಯದ ಕೆಲಸಗಳಿಗೆ ಪೌರ ಕಾರ್ಮಿಕರ ಕೊರತೆಯಿದ್ದು, ತೀರ್ಮಾನಗಳನ್ನು ಕಾರ್ಯಗತ ಮಾಡುವಲ್ಲಿ ವಿಳಂಬ ಉಂಟಾಗುತ್ತಿದೆ ಎಂಬ ಆರೋಪವು ಸದಸ್ಯರಿಂದ ಕೇಳಿ ಬಂತು. ಸದಸ್ಯರುಗಳಾದ ಎಸ್.ಹೆಚ್.ಮತೀನ್, ಮಹಮ್ಮದ್ ರಾಫಿ ಹಾಗೂ ರಂಜಿ ಪೂಣಚ್ಚ ಈ ಬಗ್ಗೆ ಶಾಸಕರ

(ಮೊದಲ ಪುಟದಿಂದ) ಗಮನ ಸೆಳೆದಾಗ, ಸಿಬ್ಬಂದಿ ಕೊರತೆ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಹೇಳಿದರು.

ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದ್ದು ದಿನಕ್ಕೆ ಒಂದರAತೆ ಪ್ರತಿ ಬೀದಿಯಲ್ಲಿ ಪ್ರಕರಣಗಳು ಬರುತ್ತಿದ್ದು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸದಸ್ಯರುಗಳಾದ ಮಹದೇವ, ಜೂನಾ ಸುನಿತಾ ಹೇಳಿದರು. ಇತರ ಸದಸ್ಯರುಗಳು ಇದಕ್ಕೆ ಧ್ವನಿಗೂಡಿಸಿದರು.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ೫೫ ಲಕ್ಷ ರೂಪಾಯಿಗಳು ವ್ಯಯವಾಗದೆ ಉಳಿದಿದ್ದು, ಇದನ್ನು ಕೂಡಲೇ ಅರ್ಹ ಯೋಜನೆಗೆ ವಿನಿಯೋಗಿಸಬೇಕೆಂದು ಮೊಗರಗಲ್ಲಿ ವಾರ್ಡ್ನ ಎಂ.ಕೆ.ದೇಚಮ್ಮ ಸಭೆಯ ಗಮನಕ್ಕೆ ತಂದರು. ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಈ ಬಗ್ಗೆ ಯೋಜನೆ ತಯಾರಿಸುವುದಾಗಿ ಆಡಳಿತಾಧಿಕಾರಿ ಯತೀಶ್ ಉಲ್ಲಾಳ್ ಹೇಳಿದರು.

ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ, ಅಖಿಲ ಕೊಡವ ಸಮಾಜದ ಮಾಜಿ ಅಧ್ಯಕ್ಷ ದಿ. ಮಾತಂಡ ಮೊಣ್ಣಪ್ಪ ಅವರ ಹೆಸರನ್ನು ಸಂಘದ ಕೋರಿಕೆ ಮೇರೆಗೆ ವೀರಾಜಪೇಟೆಯ ಮಡಿಕೇರಿ ಮುಖ್ಯ ರಸ್ತೆಯಿಂದ ಕೊಡವ ಸಮಾಜದ ರಸ್ತೆಗೆ ನಾಮಕರಣ ಮಾಡುವಂತೆ ಸಭೆಗೆ ಮಾಹಿತಿ ನೀಡಿದರು. ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಸದಸ್ಯರಾದ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ ಇರುವ ಪೌರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗುತ್ತಿಲ್ಲ, ಅಲ್ಲದೇ ಹಲವಾರು ವರ್ಷಗಳ ಕಾಲ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ತಿಳಿಸಿದರು.

ಸದಸ್ಯರಾದ ಮಹಮ್ಮದ್ ರಾಫಿ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಅನೇಕ ನೂತನ ಮಳಿಗೆಗಳು ಹರಾಜು ಪ್ರಕ್ರಿಯೆ ಮಾಡದೇ ಇರುವುದು ಪುರಸಭೆ ಬೊಕ್ಕಸಕ್ಕೆ ತುಂಬಾ ನಷ್ಟ ವಾಗುತ್ತಿದೆ, ಆದಷ್ಟು ಬೇಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹರಾಜು ಪ್ರಕ್ರಿಯೆ ನಡೆಸಿದರೆ ಪುರಸಭೆ ವ್ಯಾಪ್ತಿಯಲ್ಲಿ ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎಂದು ತಿಳಿಸಿದರು.

ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಯಂತರ ಹೇಮಕುಮಾರ್ ಅವರನ್ನು ಇಲ್ಲಿಗೆ ವರ್ಗಾವಣೆ ಮಾಡುವಂತೆ ಕೋರಿದರು. ಸರ್ಕಾರ ಈಗಾಗಲೇ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಆದ್ದರಿಂದ ನಗರದಲ್ಲಿ ಇರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮಾಡಿ ಎಂದು ಸದಸ್ಯರಾದ ರಜನಿಕಾಂತ್ ಹೇಳಿದರು.

ಸದಸ್ಯರಾದ ಅಗಸ್ಟಿನ್ ಬೆನ್ನಿ ಮಾತನಾಡಿ ನೆಹರು ನಗರದ ಅನೇಕ ಬಾವಿಗಳು ಬತ್ತಿ ಹೋಗಿದೆ. ಪರ್ಯಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು. ವೀರಾಜಪೇಟೆ ಶುದ್ಧ ನೀರಿನ ಘಟಕವನ್ನು ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ನಿರ್ಮಾಣ ಮಾಡುವಂತೆ ಫಸೀಯಾ ಮನವಿ ಮಾಡಿದರು.

ಆಶಾ ಸುಬ್ಬಯ್ಯ ಮಾತನಾಡಿ ಛÀತ್ರಕೆರೆ ಅಭಿವೃದ್ಧಿ ಹಾಗೂ ಸುತ್ತಲೂ ಬೀದಿ ದೀಪಗಳು, ಸಿಮೆಂಟ್ ಕುರ್ಚಿಗಳನ್ನು ಅಳವಡಿಸುವಂತೆ ಮನವಿ ಮಾಡಿದರು. ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆಯಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಾಣಗೊಂಡಿರುವ ವಸತಿ ಗೃಹಗಳ ಸಮುಚ್ಚಯದ ಮಂಜೂರಾತಿ ಮತ್ತು ಫಲಾನುಭವಿಗಳ ಆಯ್ಕೆ ಬಗ್ಗೆ ಸರಕಾರದಿಂದ ಬಂದ ನಿರ್ದೇಶನಗಳು ಹಾಗೂ ಅನುಬಂಧ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲು ಐದು ಮಂದಿ ಸದಸ್ಯರುಗಳನ್ನು ಒಳಗೊಂಡ ಉಪಸಮಿತಿಯನ್ನು ರಚಿಸಲಾಯಿತು. ಅದರಂತೆ ಸದಸ್ಯರಾದ ಅಬ್ದುಲ್ ಜಲಿಲ್, ರಜನಿಕಾಂತ್, ಆಶಾ ಸುಬ್ಬಯ್ಯ, ಪೃಥ್ವಿನಾಥ್, ಮತೀನ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಮುಂದಿನ ಸಭೆಗೆ ಮುಂಚಿತವಾಗಿ ಕಡತಗಳ ಕೂಲಂಕುಶÀ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಶಾಸಕರು ಸೂಚಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.