ಕಣಿವೆ, ನ. ೧೩: ವಾಹನಗಳ ಸಂಚಾರಕ್ಕೆ ಸಂಚಕಾರವಾಗಿದ್ದ ಕುಶಾಲನಗರ ಪುರಸಭಾ ವ್ಯಾಪ್ತಿಯ ರಸ್ತೆಗಳಲ್ಲಿದ್ದ ಗುಂಡಿಗಳಿಗೆ ಸೋಮವಾರ ಡಾಂಬರು ಹಾಕಿ ಮುಚ್ಚುವ ಕಾಮಗಾರಿಗೆ ಚಾಲನೆ ಸಿಕ್ಕಿದೆ.

ಕುಶಾಲನಗರದ ಸೋಮೇಶ್ವರ ದೇಗುಲ ರಸ್ತೆ, ರೈತ ಭವನ ರಸ್ತೆ, ಬೈಪಾಸ್ ರಸ್ತೆ, ಇಂದಿರಾ ಬಡಾವಣೆ ರಸ್ತೆ ಹೀಗೆ ಒಂದಲ್ಲ ಎರಡಲ್ಲ, ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಏರ್ಪಟ್ಟಿದ್ದವು. ಇವು ದ್ವಿಚಕ್ರ ಸವಾರರಿಗೆ ಮರಣ ಭಾವಿಗಳಂತಿದ್ದವು. ಜೊತೆಗೆ ಪಾದಚಾರಿಗಳಿಗೂ ಕಂಟಕವಾಗಿದ್ದವು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಬಂದ ಬಳಿಕ ಎಚ್ಚೆತ್ತುಕೊಂಡ ಪುರಸಭಾ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.