ಮಡಿಕೇರಿ, ನ. ೧೩ : ಸಿದ್ದಾಪುರ ಸಮೀಪದ ಆನಂದಪುರ ಗ್ರಾಮದ ಕಾಫಿ ತೋಟದ ನಡುವೆ ಇರುವ ಪುರಾತನ ಕಾಲದ ಈಶ್ವರ ದೇವಾಲಯದಲ್ಲಿ ಪತ್ತೆಯಾದ ನಿಧಿ ಪೊಲೀಸ್ ಇಲಾಖೆ ಸುಪರ್ದಿಯಲ್ಲಿದ್ದು, ನಿಯಮಾನುಸಾರ ಅದನ್ನು ಧಾರ್ಮಿಕ ದತ್ತಿ ಹಾಗೂ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದ್ದಾರೆ.

ತಾ. ೧೨ ರಂದು ತಡೆಗೋಡೆ ನಿರ್ಮಾಣ ಉದ್ದೇಶಕ್ಕೆ ಭೂಮಿ ಅಗೆಯುವ ಸಂದರ್ಭ ಕಾರ್ಮಿಕರಿಗೆ ೨ ಡಬ್ಬಿಗಳು ಕಂಡುಬAದಿದ್ದು, ಪರಿಶೀಲಿಸಿದ ಸಂದರ್ಭ ಚಿನ್ನ, ಬೆಳ್ಳಿ, ಲೋಹ ಹೋಲುವ ಆಭರಣಗಳು ಪತ್ತೆಯಾಗಿದ್ದವು. ನಂತರ ಇದನ್ನು ಕಂದಾಯ ಇಲಾಖೆ ವಶಪಡಿಸಿಕೊಂಡು, ಪೊಲೀಸ್ ಸುಪರ್ದಿಗೆ ನೀಡಿತ್ತು.

ಧಾರ್ಮಿಕ ದತ್ತಿ - ಪುರಾತತ್ವ ಇಲಾಖೆ ಸುಪರ್ದಿಗೆ ನಿಧಿ ಹಸ್ತಾಂತರಕ್ಕೆ ಕ್ರಮ

(ಮೊದಲ ಪುಟದಿಂದ) ಇದೀಗ ಸೂಕ್ತ ಭದ್ರತೆಯಲ್ಲಿ ನಿಧಿಯನ್ನು ಇಡಲಾಗಿದೆ. ಯಾವುದೇ ವಿವಾದ ಇಲ್ಲದ ಕಾರಣ ನೇರವಾಗಿ ಸಂಬAಧಪಟ್ಟ ಇಲಾಖೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು. ಹಸ್ತಾಂತರಕ್ಕೆ ನ್ಯಾಯಾಲಯದ ಅನುಮತಿ ಅವಶ್ಯವಿದ್ದಲ್ಲಿ ಅದನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ 'ಶಕ್ತಿ'ಗೆ ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಪೊಲೀಸ್ ವಶದಲ್ಲಿರುವ ಅಪರೂಪದ ಆಭರಣಗಳ ಹಿನ್ನೆಲೆ ಸಂಬAಧಪಟ್ಟ ಇಲಾಖೆಗೆ ಹಸ್ತಾಂತರ ಮಾಡಿ ತಜ್ಞರ ಅಧ್ಯಯನ ಬಳಿಕವಷ್ಟೆ ಮಾಹಿತಿ ಹೊರಬೀಳಲಿದೆ. ಮೇಲ್ನೋಟಕ್ಕೆ ಇದು ದೇವರ ಆಭರಣವಿರಬಹುದು ಎಂದು ಹಿರಿಯರು ಅಂದಾಜಿಸಿದ್ದಾರೆ.