ಸೋಮವಾರಪೇಟೆ, ನ. ೧೨: ಕೇರಳ ರಾಜ್ಯದಿಂದ ಲಾಟರಿಗಳನ್ನು ತಂದು ಸೋಮವಾರಪೇಟೆ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಆರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ.
ಪಟ್ಟಣದ ನಿವಾಸಿ ದಿ. ನಾರಾಯಣ ಅವರ ಪುತ್ರ ಶಿವಪ್ರಸಾದ್ ಎಂಬಾತ, ಕೇರಳದ ಕಾಸರಗೋಡಿನಿಂದ ಲಾಟರಿ ಟಿಕೇಟ್ಗಳನ್ನು ತಂದು ಪಟ್ಟಣದ ಕೆಲ ಗಿರಾಕಿಗಳಿಗೆ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಇಂದು ಬೆಳಿಗ್ಗೆ ೮ ಗಂಟೆ ಸುಮಾರಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಸಹಿತ ೩,೨೦೦ ರೂ. ನಗದು, ಅಕ್ರಮವಾಗಿ ಮಾರಾಟಕ್ಕೆ ಇಟ್ಟಿದ್ದ ಲಾಟರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶಿವಪ್ರಸಾದ್ ಕಳೆದ ೯ ತಿಂಗಳಿನಿAದ ನಿರಂತರವಾಗಿ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ತನ್ನ ಸಹೋದರ ಮನೆಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ ಕಾಸರಗೋಡಿನಿಂದ ಲಾಟರಿಗಳನ್ನು ತಂದು ಪಟ್ಟಣದ ಕೆಲವರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಲಾಟರಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಮುಖ್ಯ ಪೇದೆ ಸುರೇಶ್, ಪ್ರವೀಣ್, ಶಶಿಧರ್, ರಾಜಶ್ರೀ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.