ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಮೋದಿ

ಹಿಮಾಚಲ ಪ್ರದೇಶ, ನ. ೧೨: ಪ್ರತೀ ವರ್ಷ ದೀಪಾವಳಿ ಹಬ್ಬದ ವೇಳೆ ದೇಶದ ಗಡಿ ಕಾಯುವ ವೀರ ಯೋಧರ ಜೊತೆ ಹಬ್ಬ ಆಚರಿಸುವ ಪ್ರಧಾನಿ ಮೋದಿ, ಈ ಬಾರಿ ಕೂಡಾ ತಮ್ಮ ಪರಿಪಾಠವನ್ನು ಮುಂದು ವರೆಸಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಸೇನೆಯ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ೨೦೨೨ರಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯ ಕಾರ್ಗಿಲ್‌ನಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಿದ್ದ ಪ್ರಧಾನಿ ಮೋದಿ, ೨೦೨೩ರಲ್ಲಿ ಭಾರತ ಮತ್ತು ಚೀನಾ ಗಡಿಯ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಭಾನುವಾರ ಬೆಳಗ್ಗೆಯೇ ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿದ ಪ್ರಧಾನಿ ಮೋದಿ, ಗಡಿಭಾಗದ ಸೈನಿಕರಿಗೆ ಸಿಹಿ ಹಂಚಿ, ಉಡು ಗೊರೆಗಳನ್ನು ನೀಡಿದರು. ಬಳಿಕ ಅವರೊಂದಿಗೆ ಸಂವಾದ ನಡೆಸಿದರು.

ರಾಜ್ಯ ಸರಕಾರದ ವಿರುದ್ಧ ಹೆಚ್.ಡಿ.ಕೆ. ವಾಗ್ದಾಳಿ

ಬೆಂಗಳೂರು, ನ. ೧೨: ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ತೆಲಂಗಾಣದಲ್ಲಿ ಚುನಾವಣಾ ಭಾಷಣ ಮಾಡಲು ಹೋಗಿ ಅಪಮಾನಕ್ಕೀಡಾಗಿ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಚಿವರೊಬ್ಬರು ನೀಡಿರುವ ವಿದೇಶಿ ಸೋಫಾಸೆಟ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ೧ ಕೋಟಿ ೯೦ ಲಕ್ಷ ರೂಪಾಯಿ ಬೆಲೆಬಾಳುವ ಗಿಫ್ಟ್ ಎಂದೂ ಹೇಳಿದ್ದಾರೆ. ಅಲ್ಲದೆ, ಇದು ಹ್ಯೂಬ್ಲೋಟ್ ವಾಚ್‌ನ ಅಪ್ಡೇಟೆಡ್ ವರ್ಷನ್ ಎಂದು ಕಾಲೆಳೆದಿದ್ದಾರೆ. ವಿದೇಶದಲ್ಲಿ ಸಿಗುವ ಸ್ಟಾಂಗ್ಲೆ ಅನ್ನೊ ವಿದೇಶಿ ಬ್ರಾಂಡ್ ಸೋಫಾ ಸೆಟ್ ಇದಾಗಿದ್ದು, ೧ ಕೋಟಿ ೯೦ ಲಕ್ಷ ರೂಪಾಯಿ ಬೆಲೆಬಾಳುತ್ತದೆ. ಇದನ್ನು ಯಾರೋ ಆಪ್ತ ಸಚಿವರೇ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಬಂದಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಹಮಾಸ್‌ನಿಂದ ಯೋಧರ ಮೇಲೆ ಗುಂಡಿನ ದಾಳಿ

ಗಾಜಾ, ನ. ೧೨: ಗಾಜಾ ನಗರದ ಅಲ್-ಶಾತಿ ಕ್ಯಾಂಪ್‌ನಲ್ಲಿ ಯೋಧರು ಹೋರಾಡುತ್ತಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಗಿವಾತಿ ಬ್ರಿಗೇಡ್ ಟ್ರೂಪ್‌ಗಳು ಅಲ್ಲಿ ನಾಗರಿಕರನ್ನು ಪತ್ತೆಮಾಡಿದ್ದು, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ವೇಳೆ ಇಸ್ರೇಲಿ ಯೋಧರ ಮೇಲೆ ಹಮಾಸ್ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಐಡಿಎಫ್ ಆರೋಪಿಸಿದೆ. ಮತ್ತೊಂದು ಘಟನೆಯಲ್ಲಿ, ಅಲ್-ಶಾತಿಯಲ್ಲಿನ ಕಟ್ಟಡವೊಂದರಲ್ಲಿ ಹಮಾಸ್ ಕಾರ್ಯಕರ್ತರ ಗುಂಪನ್ನು ಸೈನಿಕರು ಗುರುತಿಸಿದ್ದು ಅವರನ್ನು ಹೊಡೆದುರುಳಿಸಲು ವೈಮಾನಿಕ ದಾಳಿಗೆ ನಿರ್ದೇಶಿಸಿದ್ದಾರೆ ಎಂದು ಐಡಿಎಫ್ ಹೇಳಿದೆ. ಏತನ್ಮಧ್ಯೆ, ದಿ ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಕ್ಷಿಪಣಿಯೊಂದು ಅಲ್ಲಿನ ಶಿಬಿರದ ಕಟ್ಟಡದಲ್ಲಿದ್ದ ಹಮಾಸ್ ಶಸ್ತಾçಸ್ತçಗಳ ಡಿಪೋಗೆ ಅಪ್ಪಳಿಸಿದೆ ಎಂದು ಹೇಳಿದೆ.

ಕಾರ್ಯಕರ್ತರ ನಡುವೆ ಘರ್ಷಣೆ:ಶಾಸಕ ಆಸ್ಪತ್ರೆಗೆ ದಾಖಲು

ನಾಗರಕರ್ನೂಲ್, ನ. ೧೨: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ, ಆಡಳಿತಾರೂಢ ಭಾರತ್ ರಾಷ್ಟç ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದೆ. ನಾಗರಕರ್ನೂಲ್ ಜಿಲ್ಲೆಯ ಅಚಂಪೇಟೆ ಪಟ್ಟಣದಲ್ಲಿ ಶನಿವಾರ ರಾತ್ರಿ ೧೧ ಗಂಟೆಯಲ್ಲಿ ನಡೆದ ಘರ್ಷಣೆಯಲ್ಲಿ ಆಡಳಿತ ಪಕ್ಷದ ಶಾಸಕ ಗುವ್ವಲ ಬಾಲರಾಜು ಗಾಯಗೊಂಡಿದ್ದಾರೆ ಮತ್ತು ಇತರರೊಂದಿಗೆ ಹೈದರಾಬಾದ್‌ನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಸಕರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಶಂಕಿಸಿದ್ದಾರೆ. ಇದು ಮಾತಿನ ಚಕಮಕಿಗೆ ಕಾರಣವಾಗಿದ್ದು, ಘರ್ಷಣೆ ಉಂಟಾಗಿದೆ. ಕೆಲವು ಕಾಂಗ್ರೆಸ್ ಮುಖಂಡರು ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಅಚ್ಚಂಪೇಟೆಯ ವೃತ್ತ ನಿರೀಕ್ಷಕ ಅನುದೀಪ್ ಹೇಳಿದ್ದಾರೆ. ಶನಿವಾರ ಸಂಜೆ ಪ್ರಚಾರ ಮುಗಿಸಿ ಅಚಂಪೇಟೆ ಪಟ್ಟಣಕ್ಕೆ ಆಗಮಿಸಿದ್ದ ಹಾಲಿ ಬಿಆರ್‌ಎಸ್ ಶಾಸಕರ ಮೇಲೆ ಕೆಲ ಕಾಂಗ್ರೆಸ್ ಮುಖಂಡರು ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರಂಗ ಕುಸಿತದಿಂದ ಸಿಲುಕಿಕೊಂಡ ಕಾರ್ಮಿಕರು

ಉತ್ತರಕಾಶಿ, ನ. ೧೨: ಉತ್ತರಾಖಂಡದ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟಿçÃಯ ಹೆದ್ದಾರಿಯಲ್ಲಿ ಸಿಲಕ್ಕಾರ ಮತ್ತು ದಂಡಲ್‌ಗಾAವ್ ಮಧ್ಯೆ ನಿರ್ಮಿಸಲಾಗುತ್ತಿದ್ದ ಸುರಂಗ ಮಾರ್ಗದಲ್ಲಿ ಕೆಲವು ಭಾಗ ಭಾನುವಾರ ಕುಸಿದು, ೩೬ ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ೬- ೭ ಗಂಟೆ ನಡುವೆ ಈ ಘಟನೆ ನಡೆದಿದೆ. ಒಳಗೆ ೩೬ ಕಾರ್ಮಿಕರು ಸಿಲುಕಿದ್ದಾರೆ ಎಂದು ರಾಷ್ಟಿçÃಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ (ಎನ್‌ಎಚ್‌ಐಡಿಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು ಎಂದು ಉತ್ತರಕಾಶಿಯ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ತಿಳಿಸಿದ್ದಾರೆ. ಒಳಗೆ ಸಿಲುಕಿರುವ ಕಾರ್ಮಿಕರಿಗೆ ಉಸಿರಾಟ ಮತ್ತು ಆಹಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಆಮ್ಲಜನಕ ಮತ್ತು ಆಹಾರ ಪದಾರ್ಥಗಳನ್ನು ಕಳುಹಿಸಿಕೊಡಲಾಗುತ್ತಿದೆ.

ಸುಡಾನ್‌ನಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಸಾವು

ಕೈರೊ, ನ. ೧೨: ಸುಡಾನ್‌ನ ಯುದ್ಧಪೀಡಿತ ‘ದಾರ್ಫು' ಪ್ರಾಂತ್ಯದಲ್ಲಿ ಅರೆಸೇನಾ ಪಡೆಯ ಯೋಧರು ಮತ್ತು ಅವರ ಮೈತ್ರಿಯ ಅರಬ್ ಸೇನೆ ನಡೆಸಿದ ದಾಳಿಯಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮತ್ತು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ ಮಧ್ಯಂತರ ಅವಧಿ ವೇಳೆ ಸುಡಾನ್ ಸೇನೆಯ ಮುಖ್ಯಸ್ಥ ಅಬ್ಬೆಲ್ ಫತಾ ಬುರ್ಹಾನ್ ಮತ್ತು ಅರೆಸೇನಾ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ಹಾನ್ ಡಗಾಲೊ ಮಧ್ಯೆ ನಡುವಿನ ಬಿಕ್ಕಟ್ಟಿನಿಂದಾಗಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಸೇನೆ ಮತ್ತು ಅರೆಸೇನಾ ನಡುವಿನ ಆಂತರಿಕ ಕಲಹದಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದು, ೮೦೦೦ಕ್ಕೂ ಹೆಚ್ಚು ಮಂದಿ ನೆರೆಯ ಚಾಡ್ ದೇಶಕ್ಕೆ ವಲಸೆ ಹೋಗಿದ್ದಾರೆ. ೨೦ ವರ್ಷಗಳ ಹಿಂದೆ ದಾರ್ಫು ಪ್ರಾಂತ್ಯದಲ್ಲಿ ಉದ್ಭವಿಸಿದ್ದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಶೋಷಣೆಗಳು ಇಡೀ ವಿಶ್ವವನ್ನೇ ಆಘಾತಗೊಳಿಸಿದ್ದವು. ಇದೀಗ ಮತ್ತೆ ಅಂಥದ್ದೇ ದಿನಗಳು ಬರುತ್ತಿವೆ ಎಂದು ವಿಶ್ವಸಂಸ್ಥೆಯ ಹೈಕಮಿಷನರ್ (ನಿರಾಶ್ರಿತರ ವಿಭಾಗ) ಫಿಲಿಪ್ರೊ ಗ್ರಾಂಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ:ಸಿಐಡಿ ತನಿಖೆಗೆ ಆದೇಶ

ಬೆಂಗಳೂರು, ನ. ೧೨: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಪರೀಕ್ಷಾ ಅಕ್ರಮ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಶನಿವಾರ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ. ಪರೀಕ್ಷಾ ಅಕ್ರಮ ಸಂಬAಧ ಯಾದಗಿರಿಯಲ್ಲಿ ಐದು, ಕಲಬುರಗಿ ಟೌನ್‌ನಲ್ಲಿ ಎರಡು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಒಂದು ಸೇರಿದಂತೆ ಒಟ್ಟು ಎಂಟು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಇದೀಗ ಗೃಹ ಇಲಾಖೆಯು ಸಿಐಡಿಗೆ ತನಿಖೆಗೆ ಆದೇಶಿರುವ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳ ಸಂಬAಧದ ದಾಖಲೆಗಳನ್ನು ತನಿಖಾಧಿಕಾರಿಗಳಿಂದ ಪಡೆದು ಸಿಐಡಿಗೆ ಹಸ್ತಾಂತರಿಸುವAತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.