೨೦೦೯ ರಲ್ಲಿ ಪ್ರಾರಂಭವಾದ ವಿಶ್ವ ನ್ಯುಮೋನಿಯಾ ದಿನ (Woಡಿಟಜ Pಟಿeumoಟಿiಚಿ ಆಚಿಥಿ) ಪ್ರತಿವರ್ಷ ನವೆಂಬರ್ ೧೨ ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಹಲವು ಲಕ್ಷ ಮಕ್ಕಳ ಸಾವಿಗೆ ಕಾರಣವಾಗುವ ನ್ಯುಮೋನಿಯಾ ವಿರುದ್ಧ ಹೋರಾಟ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ನ್ಯುಮೋನಿಯಾದ ಕುರಿತು ಜಾಗತಿಕವಾಗಿ ಜಾಗೃತಿ ಹೆಚ್ಚಿಸಲು “ಸ್ಟಾಪ್ ನ್ಯುಮೋನಿಯಾ ಆರ್ಗ್” ಸಂಸ್ಥೆಯು ವಿಶ್ವ ನ್ಯುಮೋನಿಯಾ ದಿನವನ್ನು ಆರಂಭಿಸಿತು. ಈ ಮಾರಣಾಂತಿಕ ಕಾಯಿಲೆಯು ಪುರಾತನವಾಗಿದ್ದು ಹೆಚ್ಚಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು ಐವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ‘ನ್ಯುಮೋನಿಯ ತಡೆಗಟ್ಟಲು ಅಭಿಯಾನ’ ಎಂಬ ಘೋಷವಾಕ್ಯದಡಿ ವಿಶ್ವ ನ್ಯುಮೋನಿಯಾ ದಿನ ಆಚರಿಸಲಾಗುತ್ತಿದೆ. ನ್ಯುಮೋನಿಯಾ ಸುಲಭವಾಗಿ ಚಿಕಿತ್ಸಿಸಬಲ್ಲ ಕಾಯಿಲೆಯಾಗಿದ್ದರೂ ಪ್ರತಿ ೨೦ ಸೆಕೆಂಡ್ಗೆ ಒಂದು ಮಗುವಿನ ಮರಣವಾಗುತ್ತದೆ. ಆದ್ದರಿಂದ ಅತಿ ಹೆಚ್ಚು ಜನರಲ್ಲಿ ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸಿ ಇದನ್ನು ತಡೆಗಟ್ಟುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ನ್ಯುಮೋನಿಯಾ ಮತ್ತು ಅದರ ಲಕ್ಷಣಗಳು
ನ್ಯುಮೋನಿಯಾ ಶ್ವಾಸಕೋಶಗಳ ಒಂದು ಸೋಂಕು. ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರಗಳ ಸಹಿತ ಹಲವು ಸೋಂಕುಕಾರಕಗಳಿAದ ನ್ಯುಮೋನಿಯಾ ಉಂಟಾಗುತ್ತದೆ. ನ್ಯುಮೋನಿಯಾದ ಲಕ್ಷಣಗಳ ತೀವ್ರತೆ ರೋಗಿಯ ವಯಸ್ಸನ್ನು ಅವಲಂಬಿಸಿರುತ್ತವೆ. ಹಳದಿ, ಅಥವಾ ಹಸಿರು ಬಣ್ಣದ ಕಫ, ಚಳಿಯಿಂದ ಕೂಡಿದ ತೀವ್ರ ಜ್ವರವು ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳಾಗಿವೆ. ಶ್ವಾಸಕೋಶದಲ್ಲಿ ಕಫ ಅಥವಾ ನೀರು ಸೇರಿಕೊಂಡು ಆಮ್ಲಜನಕ ಸೇವಿಸುವ ಪ್ರಮಾಣಕ್ಕೆ ತಡೆಯೊಡ್ಡುತ್ತದೆ ಹಾಗೂ ಉಸಿರಾಟವನ್ನು ಕಷ್ಟಕರ ಮತ್ತು ನೋವುದಾಯಕ ವನ್ನಾಗಿಸುತ್ತದೆ. ಮಕ್ಕಳಲ್ಲಿ ನ್ಯುಮೋನಿಯಾವನ್ನು ಉಂಟು ಮಾಡುವ ಅತ್ಯಂತ ಸಾಮಾನ್ಯ ಬ್ಯಾಕ್ಟೀರಿಯಾ ಎಂದರೆ “ಸ್ಟೆçಪ್ಟೊಕಾಕಸ್”. ಸೋಂಕುಕಾರಕಗಳಿAದ ಇದು ಉಂಟಾಗುತ್ತದೆ ಹಾಗೂ ಕೆಮ್ಮು ಮತ್ತು ಸೀನುಗಳಿಂದ ಒಬ್ಬರಿಂದ ಇನ್ನೊಬರಿಗೆ ಹರಡುತ್ತದೆ.
ತಡೆಗಟ್ಟುವುದು ಹೇಗೆ?
ಆರಂಭದಲ್ಲಿಯೇ ರೋಗವನ್ನು ಪತ್ತೆಹಚ್ಚಿದರೆ ನ್ಯುಮೋನಿಯಾದಿಂದ ಆಗುವ ತೀವ್ರತೆಗಳನ್ನು ತಡೆಯಬಹುದು. ಸಾಮಾನ್ಯವಾಗಿ ನ್ಯುಮೋನಿಯಾ ರೋಗವನ್ನು ಎದೆಯ ಎಕ್ಸ್ರೇ ಮತ್ತು ರಕ್ತ ಪರೀಕ್ಷೆಗಳಿಂದ ವೈದ್ಯರು ಪತ್ತೆ ಹಚ್ಚುತ್ತಾರೆ. ಸುಲಭವಾಗಿ ಚಿಕಿತ್ಸೆ ಲಭ್ಯವಿದ್ದರೂ ಈ ಕಾಯಿಲೆಗೆ ತುತ್ತಾಗುತ್ತಿರು ವುದನ್ನು ನಿರೋಧಿಸುವ ಸಲುವಾಗಿ ಈ ಕಾರ್ಯಕ್ರಮ ವನ್ನು ನಡೆಸಲಾಗುತ್ತದೆ. ನಾವೆಲ್ಲರೂ ಇದರ ಬಗ್ಗೆ ಹೆಚ್ಚು ಜಾಗರೂಕರಾಗಿ ಮತ್ತು ಇತರರಿಗೂ ಈ ಕಾಯಿ ಲೆಯ ಬಗ್ಗೆ ಅರಿವು ಮೂಡಿಸುತ್ತಾ ನ್ಯುಮೋನಿಯಾ ರೋಗವನ್ನು ತಡೆಗಟ್ಟುವಲ್ಲಿ ಕೈ ಜೋಡಿಸೋಣ.
- ಡಾ. ಅನುಷ. ಎಸ್., "ಅನ್ವಯ ಆಯುರ್ವೇದ”, ರೇಸ್ಕೋರ್ಸ್ ರಸ್ತೆ, ಮಡಿಕೇರಿ. ದೂ: +೯೧-೯೪೮೨೨೦೯೦೨೭, ತಿತಿತಿ.ಚಿಟಿvಚಿಥಿಚಿಚಿಥಿuಡಿveಜಚಿ.ಛಿom