ಗೋಣಿಕೊಪ್ಪಲು, ನ. ೧೧: ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗೆ ಜಾನುವಾರುಗಳ ಮೇಲೆ ದಾಳಿ ನಡೆಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾಲ್ಕಿತ್ತು ಭಯ ಹುಟ್ಟಿಸುತ್ತಿರುವ ಹುಲಿಯೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಹುಲಿಯನ್ನು ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದ ೧೦ ವರ್ಷ ಪ್ರಾಯದ, ಅರಣ್ಯ ಇಲಾಖೆ ಗುರುತಿಸಿರುವ '೧೬-ಯು-೪೬೮' ಎಂಬ ಗಂಡು ಹುಲಿ ಸೆರೆಗೆ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ.

ಈ ಹುಲಿಯು ಜನವಸತಿ ಪ್ರದೇಶಕ್ಕೆ ಬಂದು ರೈತರು ಸಾಕಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಚಲನವಲನದ ಬಗ್ಗೆ ಕ್ಯಾಮರಾಗಳನ್ನು ಅಳವಡಿಸಿ ಮಾಹಿತಿ ಕಲೆ ಹಾಕಿದ್ದರು. ನಂತರ ಉನ್ನತ ಅಧಿಕಾರಿಗಳು ಈ ಹುಲಿಯ ಸೆರೆಗೆ ಅನುಮತಿ ನೀಡಿದ್ದರು.

ಹುಲಿ ಸೆರೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತ ಕಳೆದ ಕೆಲ ದಿನಗಳಿಂದ ಕಲ್ಲಳ್ಳ ವ್ಯಾಪ್ತಿಯಲ್ಲಿ ಕೂಂಬಿAಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಹುಲಿಯು ಕಿರುಗೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸಿದ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಕಲ್ಲಳ್ಳ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ತಂಡ ಹುಲಿಯ ಸೆರೆಗಾಗಿ ಅಗತ್ಯ ಸಾಮಗ್ರಿಗಳೊಂದಿಗೆ ತೆರಳಿದ್ದರು. ಆದರೆ ನಿಗದಿತ ಹುಲಿಯು ಇದೀಗ ಮತ್ತೆ ಬಾಳೆಲೆ ಸಮೀಪದ ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಪ್ರವೇಶ ಮಾಡಿರಬಹುದೆಂದು ಅಂದಾಜಿಸಲಾಗಿದೆ.

ಕೆಲ ದಿನಗಳಿಂದ ದ. ಕೊಡಗಿನಿಂದ ಯಾವುದೇ ಭಾಗದಲ್ಲಿ ರೈತರ ಜಾನುವಾರುಗಳ ಮೇಲೆ ದಾಳಿ ನಡೆದ ಬಗ್ಗೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸರ್ವ ಸನ್ನದ್ಧವಾಗಿದ್ದು ಹುಲಿಯ ಸಂಚಾರದ ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ತೆರಳಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಸೆರೆಗೆ ಅನುಮತಿ ಇರುವ ಹುಲಿಯೆಂದು ಗಮನಕ್ಕೆ ಬಂದಲ್ಲಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಇಲಾಖೆಯ ಸಿಬ್ಬಂದಿಗಳು ಸಜ್ಜಾಗಿದ್ದಾರೆ.

- ಹೆಚ್.ಕೆ.ಜಗದೀಶ್