ಕುಶಾಲನಗರ, ನ. ೧೧: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪುರಸಭೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಬಳಕೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ‘ಸ್ವಚ್ಛ ದೀಪಾವಳಿ, ಶುಭ ದೀಪಾವಳಿ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕುಶಾಲನಗರದ ಪುರಸಭೆ ವತಿ ಯಿಂದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಜೂನಿ ಯರ್ ಕಾಲೇಜು ಹಾಗೂ ಫಾತಿಮಾ ಕಾನ್ವೆಂಟ್ ಶಾಲೆಗಳ ಸಹಯೋಗ ದೊಂದಿಗೆ "ಸ್ವಚ್ಛ ದೀಪಾವಳಿ ಶುಭ ದೀಪಾವಳಿ" ಅಭಿಯಾನದಲ್ಲಿ ವಿದ್ಯಾರ್ಥಿ ಗಳಿಗೆ ಪರಿಸರ ಸ್ನೇಹಿ ಹಸಿರು ದೀಪಾ ವಳಿ ಬಗ್ಗೆ ಅರಿವು ಮೂಡಿಸಲಾಯಿತು.

ಹಸಿರು ಪಟಾಕಿ ಬಳಕೆ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸ ಲಾಯಿತು. ಕಾಲೇಜುಗಳ ಮುಂಭಾಗ ಹಾಗೂ ಕಾರ್ಯಪ್ಪ ಸರ್ಕಲ್‌ನಲ್ಲಿ ಸೆಲ್ಫಿ ಬೋರ್ಡ್ಗಳನ್ನು ಅಳವಡಿಸಿ ಸಾರ್ವಜ ನಿಕರಿಗೆ ಸೆಲ್ಫಿ ತೆಗೆಯಲು ಅನುವು ಮಾಡಿಕೊಡಲಾಗಿದೆ.

ನಂತರ ಸಾರ್ವಜನಿಕರಿಗೆ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನದ ಬಗ್ಗೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.

ಕೂಡುಮಂಗಳೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿದರು.

ಕುಶಾಲನಗರ ಪರಸಭೆ ಮಾಜಿ ಅಧ್ಯಕ್ಷ ಜಯವರ್ಧನ್, ಆರೋಗ್ಯಾ ಧಿಕಾರಿ ಉದಯ್ ಕುಮಾರ್, ಶಾಲಾ ಕಾಲೇಜು ಪ್ರಮುಖರು, ಪುರಸಭೆ ಸಿಬ್ಬಂದಿಗಳು ಇದ್ದರು.