ಕಣಿವೆ, ನ. ೧೧: ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿ ಕೊಳ್ಳುವ ಮೂಲಕ ಸಮಾಜದ ಸತ್ಪçಜೆಗಳಾಗಬೇಕು. ಆ ಮೂಲಕ ಸದೃಢ ಸಮಾಜ ಕಟ್ಟಬೇಕೆಂದು ಕೊಡಗು ವಿವಿ ನಿರ್ದೇಶಕ ಪ್ರೊ. ಕೆ.ಕೆ. ಧರ್ಮಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕಾಲೇಜು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಪ್ರಧಾನ ನುಡಿಗಳಾಡಿದ ಅವರು, ಗುಣಮಟ್ಟದ ಶಿಕ್ಷಣ ಇಂದಿನ ವಿದ್ಯಾರ್ಥಿಗಳ ಮೊದಲ ಅಗತ್ಯವಾಗಬೇಕಿದೆ. ಪದವಿಗಳನ್ನು ಪೂರೈಸಿದ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಗಳಿಗಾಗಿ ಕಾಯದೇ ಸಿಕ್ಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗಬೇಕು. ಹೆತ್ತವರಿಗೆ ಹಾಗೂ ಗುರು ಹಿರಿಯರಿಗೆ ಸದಾ ಕಾಲ ಗೌರವ ನೀಡುವ ಪರಂಪರೆಗೆ ವಿದ್ಯಾರ್ಥಿಗಳು ಮತ್ತಷ್ಟು ಇಂಬು ನೀಡಬೇಕಿದೆ.
ಅಂತಹ ಸನ್ನಡತೆ, ಸಚ್ಚಾರಿತ್ರö್ಯ ಇಂದಿನ ವಿದ್ಯಾರ್ಥಿಗಳ ಆದ್ಯತೆಯಾಗಬೇಕಿದೆ. ಹಾಗೆಯೇ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಬೇಕು. ಭೂಮಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ಬಳಸದಂತೆ ಕಿವಿ ಮಾತನ್ನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ವಿದ್ಯಾರ್ಥಿ ಜೀವನದ ದಿನಗಳನ್ನು ಅತ್ಯುತ್ತಮವಾಗಿ ಸದ್ಭಳಕೆ ಮಾಡಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೇ ವಿನಃ ಸಲ್ಲದ ವಿಚಾರಗಳಿಗೆ ಒಳಗಾಗಿ ತಮ್ಮ ವ್ಯಕ್ತಿತ್ವ ಧಕ್ಕೆಯಾಗದಂತೆ ಜಾಗೃತೆ ವಹಿಸಬೇಕು. ಕೇವಲ ಸರ್ಕಾರಿ ಹುದ್ದೆಗೆ ಮೀಸಲಾಗದೇ ವಿವಿಧ ಕೌಶಲ್ಯಗಳು ಹಾಗೂ ಕೃಷಿಯತ್ತವೂ ಆಸಕ್ತಿ ವಹಿಸುವಂತೆ ವಿದ್ಯಾರ್ಥಿಗಳಿಗೆ ಚಂದ್ರಕಲಾ ಕರೆ ನೀಡಿದರು.
ಕಾಲೇಜಿನ ವತಿಯಿಂದ ಹೊರತಂದ ‘‘ಸೃಜನ’’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪಿ. ಶಶಿಧರ್, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಚಿಗುರೊಡೆವ ನಾಯಕತ್ವದಲ್ಲಿ ಬಹು ಮುಖ್ಯವಾಗಿ ಸೃಜನಶೀಲತೆ ಇರಬೇಕು. ದೇಶದ ನಾಯಕತ್ವ ಇಂದು ಬೇರೆ ದಿಕ್ಕಿನತ್ತ ಹೊರಳುತ್ತಿದೆ ಎಂದು ವಿಷಾದಿಸಿದ ವಿ.ಪಿ.ಶಶಿಧರ್, ೧೯೫೦ ರ ದಶಕದ ರಾಜಕಾರಣ ತ್ಯಾಗದ ಪ್ರತೀಕವಾಗಿತ್ತು.
೧೯೬೦ ರ ದಶಕದ ರಾಜಕಾರಣ ಸೇವೆಯಾಗಿತ್ತು. ನಂತರದ ರಾಜಕಾರಣ ವ್ಯಾಪಾರೀಕರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ. ಬಿ.ಡಿ. ಹರ್ಷ ಪ್ರಾಸ್ತಾವಿಕ ನುಡಿಗಳಾಡಿದರು.
ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಕೆ.ಪಿ. ಕುಸುಮ ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಸಮಿತಿಯ ಕ್ಷೇಮ ಪಾಲನಾ ಅಧಿಕಾರಿ ಡಾ. ರಮೇಶ್ಚಂದ್ರ, ಕ್ರೀಡಾ ಸಮಿತಿ ಸಂಚಾಲಕಿ ಪಿ.ಪಿ. ಜಯಂತಿ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಸುನಿಲ್ ಕುಮಾರ್, ಮಧುಶ್ರೀ, ಸಾಂಸ್ಕೃತಿಕ ಸಮಿತಿಯ ಟಿ.ಎಂ. ಸುಧಾಕರ್, ಡಾ.ಎಂ. ರಶ್ಮಿ, ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಬಿ.ಎಸ್. ಶಿವನ್ ಕುಮಾರ್, ಕಾರ್ಯದರ್ಶಿ ಕೆ.ಎಸ್. ಗೌತಮ್, ಮಹಿಳಾ ಕಾರ್ಯದರ್ಶಿ ಎಂ.ಎಸ್. ಸಿಂಚನಾ, ಸಾಂಸ್ಕೃತಿಕ ಕಾರ್ಯದರ್ಶಿ ಕೆ. ವಿಜಯ್, ಮಹಿಳಾ ಘಟಕದ ಕಾರ್ಯದರ್ಶಿ ಅಂಜನ್ ಪ್ರಮೋದ್, ಕ್ರೀಡಾ ಕಾರ್ಯದರ್ಶಿ ಸಿ.ಎನ್. ಆಕಾಶ್, ಕ್ರೀಡಾ ಕಾರ್ಯದರ್ಶಿ ಎ. ಸ್ಮಿತಾ, ಜಂಟಿ ಕಾರ್ಯದರ್ಶಿ ಟಿ.ಎಸ್. ಹರ್ಷಾನಂದ, ಮಹಿಳಾ ವಿಭಾಗದ ಕೆ.ಆರ್. ಮಾಳವಿಕಾ ಇದ್ದರು. ವಿದ್ಯಾರ್ಥಿನಿ ಎಂ.ಎಸ್. ಸಿಂಚನಾ ನಿರೂಪಿಸಿದರು. ಅರ್ಪಿತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಶಿವನ್ ಕುಮಾರ್ ಸ್ವಾಗತಿಸಿದರು. ಮಧುಶ್ರೀ ವಂದಿಸಿದರು.