ಮಡಿಕೇರಿ, ನ. ೧೧: ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಪರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಶಾಂತಿಯುತ ಹೋರಾಟಕ್ಕೆ ಶೀಘ್ರ ಜಯ ಸಿಗಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಂಜಿಲ ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್‌ಮಂದ್”ನಲ್ಲಿ ಕೊಡವ ಜಾಗೃತಿ ಸಭೆಯ ಮೂಲಕ ಸಿಎನ್‌ಸಿ ಸಂಘಟನೆಯ ಐದು ಹಂತಗಳ ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡಗಿನ ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದಡಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಮೂಲಕ ಮಾತ್ರ ಭದ್ರತೆ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೊಡವ ಲ್ಯಾಂಡ್‌ಗಾಗಿ ಶಾಂತಿಯುತ ಹೋರಾಟ ಮುಂದುವರೆಯಲಿದೆ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು ಆರಂಭಿಸಿ ಇಂದು ಮುಕ್ತಾಯಗೊಳಿಸಿದ್ದೇವೆ. ಇವರ ಮಾರ್ಗದರ್ಶನದಲ್ಲಿ ಕೊಡವ ಲ್ಯಾಂಡ್‌ಗಾಗಿ ಕಾನೂನು ಹೋರಾಟ ಕೂಡ ನಡೆಯಲಿದೆ ಎಂದರು.

ತಾ.೨೬ ರಂದು ಸಿಎನ್‌ಸಿ ವತಿಯಿಂದ ಕೊಡವ ನ್ಯಾಷನಲ್ ಡೇ ನಡೆಯಲಿದ್ದು, ಕಾರ್ಯಕ್ರಮಕ್ಕೆ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಡಾ. ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷö್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.

ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸಿಗದ ಹೊರತು ಕೊಡವರಿಗೆ ಸಾಂವಿಧಾನಿಕ ಭದ್ರತೆ ಮತ್ತು ನ್ಯಾಯಯುತ ಹಕ್ಕುಗಳು ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯೋಗಕ್ಷೇಮಕ್ಕಾಗಿ ಪೂಜೆ

ಕೊಡವ ಲ್ಯಾಂಡ್ ಹೋರಾಟದ ಪರ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಾಚಪ್ಪ ಅವರು, ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು.

ಇದಕ್ಕೂ ಮೊದಲು ಕಕ್ಕಬ್ಬೆಯಲ್ಲಿ ಮಾನವ ಸರಪಳಿ ನಿರ್ಮಿಸಿದ ಸಿಎನ್‌ಸಿ ಪ್ರಮುಖರು ಹಾಗೂ ಕೊಡವ, ಕೊಡವತಿಯರು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು, ನಂತರ ಪಾದಯಾತ್ರೆಯಲ್ಲಿ ಸಾಗಿದರು.

ಕಲಿಯಂಡ ಮೀನ, ಪಟ್ಟಮಾಡ ಲಲಿತಾ ಗಣಪತಿ, ನಂದಿನೆರವAಡ ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತ, ಕರವಂಡ ಸರಸು, ನಂದಿನೆರವAಡ ನಿಶಾ ಅಚಯ್ಯ, ನಂದೆಟ್ಟಿರ ಕವಿತಾ ಸುಬ್ಬಯ್ಯ, ಚೀಯಕಪೂವಂಡ ಚಿತ್ರ ರಂಜು, ಬಾಚಮಂಡ ಸೀತಾ ಪೂವಣ್ಣ, ಕಲಿಯಂಡ ಸರಸು ಮಾದಪ್ಪ, ಅಪ್ಪಾರಂಡ ಮೀರಾ ನಂಜಪ್ಪ, ಅಪ್ಪಾರಂಡ ನೀರು ನಂಜಪ್ಪ, ನಂಬುಡಮAಡ ಜೂಬಿ ದೇವಕ್ಕಿ, ಕಲಿಯಂಡ ಪ್ರಕಾಶ್, ಬಾಚಮಂಡ ರಾಜ ಪೂವಣ್ಣ, ದೇಶ ತಕ್ಕ ಪರದಂಡ ಸುಮನ್ ಸುಬ್ರಮಣಿ,

ಅರೆಯಡ ಗಿರೀಶ್, ನಂದಿನೆರವAಡ ವಿಜು, ಬೇಪಡಿಯಂಡ ಬಿದ್ದಪ್ಪ, ನಂದಿನೆರವAಡ ಬೋಪಣ್ಣ, ಅಪ್ಪಾರಂಡ ಶ್ರೀನಿವಾಸ್, ಪೊನ್ವಾಲ್ತಂಡ ರಾಜಪ್ಪ, ನಂದೆಟ್ಟಿರ ರವಿ ಸುಬ್ಬಯ್ಯ, ಚೋಳಪಂಡ ನಾಣಯ್ಯ, ಪಾಂಡAಡ ನರೇಶ್, ಕೋಡಿಮಣಿಯಂಡ ಗಗನ್, ಕಂಬೆಯAಡ ಮಿಟ್ಟು ಪಳಂಗಪ್ಪ, ಪಟ್ಟಮಾಡ ಕುಶ, ಮಂದಪAಡ ಮನೋಜ್, ಅಲ್ಮಂಡ ನೆಹರು, ಪಟ್ಟಮಾಡ ಅಶೋಕ್, ಮಂದಪAಡ ಸೂರಜ್, ಬಾಚಮಂಡ ಲವ, ಚಂಬAಡ ಜನತ್, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಜಮ್ಮಡ ಮೋಹನ್, ಅಪ್ಪೆಂಗಡ ಮಾಲೆ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್, ಬಾಚಮಂಡ ಬೆಲ್ಲು ಪೂವಪ್ಪ, ಕಲ್ಯಾತಂಡ ಬಾಬು ತಿಮ್ಮಯ್ಯ, ಪುದಿಯೊಕ್ಕಡ ಪೃಥ್ವಿ, ಕಲಿಯಂಡ ಸಂಪನ್, ಕಲಿಯಂಡ ರಮೇಶ್, ಬಾಚಮಂಡ ಭರತ್, ಕಲ್ಯಾತÀಂಡ ರಘು, ಕಲ್ಯಾತಂಡ ಯತೀಶ್, ಕಲ್ಯಾತಂಡ ಸುಧಾ, ಬೊಳಿಯಡಿರ ಸಂತು, ಕಲ್ಯಾತಂಡ ಅರುಣ್, ಕಲ್ಯಾತಂಡ ರಾಜ, ಚೀಯಕಪೂವಂಡ ರಂಜು, ಬೊಟ್ಟಂಗಡ ಜಪುö್ಪ, ಪರ್ದಂಡ ಕಸ್ತೂರಿ, ಉದಿಯಂಡ ಸುಭಾಷ್, ಉದಿಯಂಡ ವಿನಯ್, ಕಂಬೆಯAಡ ಮಿಟ್ಟು ಪಳಂಗಪ್ಪ, ಕಂಬೆಯAಡ ರಾಜ ದೇವಯ್ಯ, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿವೇಕ್, ಉದಿಯಂಡ ಮೋಹನ್ ಪೆಮ್ಮಯ್ಯ, ಪೊನ್ವಾಲ್ತಂಡ ರಘು, ಪೊನ್ವಾಲ್ತಂಡ ಚೋಮುಣಿ, ಮೇಚಂಡ ಜೋಯಪ್ಪ, ಪೊರ್ಕೊಂಡ ಬೋಪಣ್ಣ, ಕೋಳೆರ ರನ್ನು, ಚೋಯಮಾಡಂಡ ಮೊಣ್ಣಪ್ಪ, ಬಡ್ಕಡ ಡೀನಾ ಪೂವಯ್ಯ, ಬಡ್ಕಡ ಉತಯ್ಯ, ನಂಬAಡಮAಡ ಗಪುö್ಪ, ನಂಬAಡಮAಡ ಮನು ಮಂದಣ್ಣ, ನಂಬAಡಮAಡ ಅಯ್ಯಪ್ಪ, ನಾಟೋಳಂಡ ದಿಲೀಪ್, ಕುಂಡ್ಯೋಳAಡ ರಮೇಶ್, ಬೇಪಡಿಯಂಡ ಬಿದ್ದಪ್ಪ, ಕಲ್ಯಾಟಂಡ ರಾಜಕುಮಾರ, ಕಳಿಯಂಡ ಸುನಂದಾ, ಕೇಟೋಳಿರ ಸನ್ನಿ ಸೋಮಣ್ಣ, ಮಾದಂಡ ಜಗ್ಗ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.