ಶನಿವಾರಸಂತೆ, ನ. ೧೧ : ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಸಿರು ದೀಪಾವಳಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಮುಖ್ಯಶಿಕ್ಷಕಿ ರೂಪಾ ಮಾತನಾಡಿ, ಪಟಾಕಿ ಹಚ್ಚುವುದರಿಂದ ಪರಿಸರ ಮಾಲಿನ್ಯದ ಜತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದು. ಕಣ್ಣುಗಳಿಗೂ ಹಾನಿ ಎಂದು ಹಬ್ಬದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಿ ದರು. ವಿದ್ಯಾರ್ಥಿಗಳು, ಶಿಕ್ಷಕರು ದೀಪಗಳನ್ನು ಬೆಳಗಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಸಹಶಿಕ್ಷಕರಾದ ಪ್ರಿಯಾಂಕಾ ಚಿಪಳೂಣಕರ್, ಮಾರುತಿ ಅರೇರ್, ಮಹಾದೇವಿ, ಡಿ.ಎಸ್.ಮಧುಕುಮಾರ್, ಗೀತಾ ಹಾಜರಿದ್ದರು.