ಮಡಿಕೇರಿ, ನ. ೧೧: ೬೮ನೇ ಕನ್ನಡ ರಾಜ್ಯೋತ್ಸವ ಮತ್ತು ‘ಕರ್ನಾಟಕ ಸುವರ್ಣ ಸಂಭ್ರಮ-೫೦ ರ ಆಚರಣೆಯ ಪ್ರಯುಕ್ತ ತಾ. ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ಶಾಲಾ, ಕಾಲೇಜು, ಸಾರ್ವಜನಿಕರಿಗೆ, ಕನ್ನಡ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಗಳು ನಡೆಯಲಿದೆ.
ಈ ಸ್ಪರ್ಧೆಗಳ ಬಹುಮಾನವನ್ನು ತಾ. ೩೦ ರಂದು ಮಧ್ಯಾಹ್ನ ೨.೩೦ ಗಂಟೆಗೆ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.
ರಸ ಪ್ರಶ್ನೆ ಸ್ಪರ್ಧೆ ಪ್ರೌಢಶಾಲೆ-ಕಾಲೇಜು (ಪ್ರತಿ ಶಾಲಾ ಕಾಲೇಜಿನಿಂದ ೩ ವಿದ್ಯಾರ್ಥಿಗಳಿಗೆ ಅವಕಾಶ) ಹೆಸರು ನೋಂದಾಯಿಸಲು ವಸತಿ ರವೀಂದ್ರ ೮೯೭೦೦೭೫೫೯೪.
ಚಿತ್ರಕಲಾ ಸ್ಪರ್ಧೆ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು (ಪ್ರತಿ ಶಾಲಾ ಕಾಲೇಜಿನಿಂದ ೩ ವಿದ್ಯಾರ್ಥಿಗಳಿಗೆ ಅವಕಾಶ) ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಹೆಸರು ನೋಂದಾಯಿಸಲು ಹರೀಶ್ ೯೪೪೮೮೯೬೪೮೭, ಸಿ.ಸಿ. ನಂದ ೭೭೬೦೫೩೦೨೭೪.
ಛದ್ಮವೇಷ ಸ್ಪರ್ಧೆ: ಯುಕೆಜಿಯಿಂದ ೩ನೇ ತರಗತಿ, ೪ನೇ ತರಗತಿಯಿಂದ ೭ನೇ ತರಗತಿ, ೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ (ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಂಬAಧಪಟ್ಟAತೆ) ಹೆಸರು ನೋಂದಾಯಿಸಲು ವಸಂತಿ ರವೀಂದ್ರ ೮೯೭೦೦೭೫೫೯೪.
ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ: ಪ್ರೌಢಶಾಲೆ, ಕಾಲೇಜು (ಪ್ರತಿ ಶಾಲಾ ಕಾಲೇಜಿನಿಂದ ೩ ವಿದ್ಯಾರ್ಥಿಗಳಿಗೆ ಅವಕಾಶ) (ನೀತಿಯನ್ನೊಳಗೊಂಡ ಕಥೆ). ಹೆಸರು ನೋಂದಾಯಿಸಲು ಜಲಾಕಾಳಪ್ಪ ೮೨೭೭೧೩೧೪೫೭.
ಕನ್ನಡ ಸಮೂಹ ಗೀತೆ: (ತಂಡದಲ್ಲಿ ಕನಿಷ್ಟ ೪ ಮತ್ತು ಗರಿಷ್ಠ ೧೦ ಸ್ಪರ್ಧಾಳುಗಳಿಗೆ ಅವಕಾಶ) ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರು. ಹೆಸರು ನೋಂದಾಯಿಸಲು ರುಬೀನ ೯೦೭೧೧೯೪೦೮೭ನ್ನು ಸಂಪರ್ಕಿಸಬಹುದು.
ಕನ್ನಡ ಸಮೂಹ ನೃತ್ಯ: (ತಂಡದಲ್ಲಿ ಕನಿಷ್ಟ ೪ ಮತ್ತು ಗರಿಷ್ಠ ೧೦ ಸ್ಪರ್ಧಾಳುಗಳಿಗೆ ಅವಕಾಶ) ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು-ಸಾರ್ವಜನಿಕರಿಗೆ (ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಂಬAಧಿಸಿದ ಹಾಡು). ಹೆಸರು ನೋಂದಾಯಿಸಲು ಪವಿತ್ರ ೯೪೮೦೨೯೦೨೮೨ನ್ನು ಸಂಪರ್ಕಿಸಬಹುದು.
ಎಸ್ಎಸ್ಎಲ್ಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದ ವಿದ್ಯಾರ್ಥಿಗಳ ಹೆಸರು ಮತ್ತು ಈ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದ ಶಿಕ್ಷಕರ ಹೆಸರನ್ನು ಸನ್ಮಾನಕ್ಕಾಗಿ ತಿಳಿಸುವಂತೆ ಕೋರಿದೆ. ಹೆಸರು ನೋಂದಾಯಿಸಲು ಜ್ಯೋತಿ ಅರುಣ್ ಗೌರವ ಕಾರ್ಯದರ್ಶಿ ೮೮೬೧೫೫೦೪೪೪ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.