ಸೋಮವಾರಪೇಟೆ, ನ. ೧೧: ಜಿಲ್ಲೆಯಲ್ಲಿ ಸಾವಿರಾರು ಎಕರೆ ಆಸ್ತಿ ಹೊಂದಿರುವ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಮಠಕ್ಕೆ ಸಂಬAಧಿಸಿದ ಆಸ್ತಿಗಳನ್ನು ಮರು ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿ ಹಾಗೂ ಚಿತ್ರದುರ್ಗದ ಜಿಲ್ಲಾ ನ್ಯಾಯಾಧೀಶರೂ ಆಗಿದ್ದ ರೇಖಾ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಮಠದ ಆಡಳಿತಾಧಿಕಾರಿಯಾಗಿ ಕಳೆದ ಆಗಸ್ಟ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದ ರೇಖಾ ಅವರು ಕಳೆದ ವಾರ ಸೋಮವಾರಪೇಟೆಗೆ ಆಗಮಿಸಿ ಬೇಳೂರಿನಲ್ಲಿರುವ ಮಠದ ಆವರಣದಲ್ಲಿ ಸಭೆ ನಡೆಸಿ, ಮಠದ ಆಸ್ತಿಗೆ ಸಂಬAಧಿಸಿದAತೆ ಭಕ್ತರೊಂದಿಗೆ ಚರ್ಚೆ ನಡೆಸಿದ್ದರು.
ಒತ್ತುವರಿ ಅಥವಾ ಇನ್ನಿತರ ಮೂಲದಿಂದ ಮಠದ ಆಸ್ತಿಯನ್ನು ಬಳಸಿಕೊಂಡಿರುವವರು ತಾವಾಗಿಯೇ ಆಸ್ತಿಯನ್ನು ಬಿಟ್ಟುಕೊಡಬೇಕೆಂದು ಮೌಖಿಕ ಆದೇಶ ಹೊರಡಿಸಿದ್ದರು. ಇದಾದ ಕೆಲ ದಿನಗಳಲ್ಲಿಯೇ ಅವರನ್ನು ವರ್ಗಾವಣೆ ಮಾಡಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.