(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ನ. ೧೧: ಕರ್ನಾಟಕ ಕೇರಳ ಗಡಿ ಭಾಗವಾದ ಕುಟ್ಟ ಪಟ್ಟಣದ ಹೃದಯ ಭಾಗದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣವಾಗುತ್ತಿದೆ. ಸುಂದರ ಪರಿಸರದ ನಡುವೆ ಒಂದು ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯವು ನಿರ್ಮಾಣವಾಗುತ್ತಿದ್ದು, ಈಗಾಗಲೇ ದೇವಸ್ಥಾನದ ಪ್ರಗತಿ ಕಾರ್ಯಗಳು ಭರದಿಂದ ಸಾಗುತ್ತಿವೆ.

ವನಸಿರಿಯ ನಡುವೆ ಸುಂದರ ಜಾಗವನ್ನು ೪೦ ವರ್ಷಗಳ ಹಿಂದೆ ಸ್ಥಳೀಯ ದಾನಿಗಳು ನೀಡಿದ್ದರು. ಈ ಜಾಗದಲ್ಲಿ ಉತ್ತಮ ದೇವಸ್ಥಾನದ ನಿರ್ಮಾಣ ಮಾಡುವ ಸಲುವಾಗಿ ಸ್ಥಳೀಯ ಗ್ರಾಮಸ್ಥರು ಒಟ್ಟುಗೂಡಿ ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಲೇ ಬಂದಿದ್ದರು. ಗಡಿಭಾಗದಲ್ಲಿ ಧಾರ್ಮಿಕ ಕೇಂದ್ರವೊAದನ್ನು ಆರಂಭಿಸುವ ಸಲುವಾಗಿ ಯೋಜನೆ ರೂಪಿಸಿದ್ದರು. ಹಿರಿಯರ ಮಾರ್ಗದರ್ಶನ ಪಡೆದು ಪ್ರಸ್ತುತ ಇರುವ ಶ್ರೀಕೃಷ್ಣ ದೇವಾಲಯದ ನೂತನ ಸಮಿತಿಯು ಆರಂಭದಲ್ಲಿ ತಮ್ಮ ಕೈಯಿಂದಲೇ ಲಕ್ಷಾಂತರ ಹಣವನ್ನು ದೇವಾಲಯದ ಅಭಿವೃದ್ಧಿಗಾಗಿ ನೀಡಿದ್ದರು. ಈ ಹಣದಿಂದ ಸುಂದರ ಪರಿಸರದ ನಡುವೆ ದೇವಾಲಯ ಸ್ಥಾಪನ ಕಾರ್ಯ ಯಶಸ್ವಿಯಾಗಿ ಆರಂಭವಾಯಿತು. ಇದೀಗ ನಿಗದಿತ ಸಮಯದೊಳಗೆ ದೇವಾಲಯವನ್ನು ಲೋಕಾರ್ಪಣೆ ಮಾಡಲು ಸಮಿತಿಯು ಹಗಲಿರುಳೆನ್ನದೆ ಶ್ರಮಿಸುತ್ತಿದೆ.

ಪ್ರಸ್ತುತ ದೇವಾಲಯ ಸಮಿತಿಯ ನೂತನ ಅಧ್ಯಕ್ಷನಾಗಿರುವ ಚೆಕ್ಕೆರ ಜಫ್ಫ್ ಗಣಪತಿ, ಉಪಾಧ್ಯಕ್ಷ ತೀತಿರ ನರೇನ್ ಬಾಲಕೃಷ್ಣ, ಕಾರ್ಯದರ್ಶಿ ಚೋಡುಮಾಡ ಶರೀನ್ ಸುಬ್ಬಯ್ಯ, ಖಜಾಂಜಿ ದುಗ್ಗಂಡ ರವಿ ನೇತೃತ್ವದಲ್ಲಿ, ನಿರ್ದೇಶರುಗಳಾದ ತೀತಿರ ಕುಶಾಲಪ್ಪ, ಮಚ್ಚಮಾಡ ಸುಬ್ರಮಣಿ, ತೀತಿರ ತೀರ್ಥ ಮಂಜುನಾಥ್, ಕಟ್ಟೆರ ರಮೇಶ್, ತೀತಿರ ಕಾರ್ಯಪ್ಪ, ಮಚ್ಚಮಾಡ ಕಾಶಿ ಕಾರ್ಯಪ್ಪ, ಧ್ಯಾನ ದರ್ಶನ, ಚಂದ್ರಕುಟ್ಟನ್, ಪ್ರಶಾಂತ್, ಜಾನ್ಸನ್, ಅಜ್ಜಿಕುಟ್ಟಿರ ಬೋಪಣ್ಣ ಹಾಗೂ ಮುಕ್ಕಾಟೀರ ನವೀನ್ ದೇವಾಲಯ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.

ಶ್ರೀ ಕೃಷ್ಣ ದೇವಾಲಯ ಸ್ಥಾಪಿಸುವ ಮೂಲಕ ಕೇರಳ, ಕರ್ನಾಟಕ ಗಡಿಭಾಗವಾದ ಕುಟ್ಟದ ಪಟ್ಟಣದ ಅತೀ ಎತ್ತರ ಪ್ರದೇಶದಲ್ಲಿ ನಿರ್ಮಿಸ ಲಾಗುತ್ತಿರುವ ದೇವಾಲಯವು ಉತ್ತಮ ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಈಗಾಗಲೇ ಎಲ್ಲಾ ರೀತಿಯ ಪ್ರಯತ್ನಗಳು ಶರವೇಗದಲ್ಲಿ ನಡೆಯುತ್ತಿದೆ.

ಶ್ರೀಕೃಷ್ಣ ದೇವಾಲಯವು ವನ ಸಿರಿಯ ನಡುವೆ ಅತೀ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ದೇವಾಲಯ ಸ್ಥಳದಿಂದ ಇಡಿ ಕುಟ್ಟ ಪಟ್ಟಣವನ್ನು ವೀಕ್ಷಿಸಬಹುದಾಗಿದೆ.

(ಮೊದಲ ಪುಟದಿಂದ) ದೇವಾಲಯಕ್ಕೆ ಪ್ರವೇಶ ಮಾಡಲು ಈಗಾಗಲೇ ೨ ಮಾರ್ಗಗಳನ್ನು ಪೂರ್ಣಗೊಳಿಸಲಾಗಿದೆ. ಕಾಲ್ನ ಡಿಗೆಯ ಮೂಲಕ ಮೆಟ್ಟಿಲು ಗಳನ್ನು ಹತ್ತುತ್ತ ದೇವಾಲಯವನ್ನು ಪ್ರವೇಶಿಸಬಹುದಾಗಿದೆ. ಮತ್ತೊಂದು ಮಾರ್ಗದಲ್ಲಿ ವಾಹ ನದ ಮೂಲಕ ತೆರಳಿ ದೇವಾ ಲಯವನ್ನು ತಲುಪಬಹುದಾಗಿದೆ.

ಅತೀ ಎತ್ತರದ ಪ್ರದೇಶದಲ್ಲಿ ಶ್ರೀಕೃಷ್ಣ ದೇವಾಲಯವು ನಿರ್ಮಾಣವಾಗುತ್ತಿರುವುದರಿಂದ ಸಹಜವಾಗಿಯೇ ಈ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಗಡಿ ಭಾಗವಾದ ಕುಟ್ಟ ಪಟ್ಟಣದ ಸುತ್ತಮುತ್ತಲಿನಲ್ಲಿ ಕಾಫಿ ಬೆಳೆಗಾರರು, ರೈತರು ಸೇರಿದಂತೆ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಇಲ್ಲಿಯತನಕ ಧಾರ್ಮಿಕ ಕೇಂದ್ರ ಆರಂಭವಾಗಿರಲಿಲ್ಲ. ಇದೀಗ ಈ ಭಾಗದ ಗ್ರಾಮಸ್ಥರು ದೇವಾಲಯ ಸ್ಥಾಪನೆ ಮಾಡುವ ಮೂಲಕ ಭಕ್ತರಿಗೆ ಇದರ ಪ್ರಯೋಜನ ಪಡೆಯಲು ಮುಂದಾಗಿದ್ದಾರೆ. ನಿರ್ಮಾಣವಾಗುತ್ತಿರುವ ಶ್ರೀ ಕೃಷ್ಣ ದೇವಾಲಯವು ಕುಟ್ಟ ಪಟ್ಟಣದ ಹೃದಯ ಭಾಗದಲ್ಲೇ ಇರುವುದು ಮತ್ತೊಂದು ವಿಶೇಷವಾಗಿದೆ. ಅಲ್ಲದೆ ಸುಂದರ ಪರಿಸರದ ನಡುವೆ ದೇವಾಲಯ ಸ್ಥಾಪನೆ ಆಗುತ್ತಿರುವುದು ಇಲ್ಲಿಯ ಮತ್ತೊಂದು ವಿಶೇಷ.