ಮಡಿಕೇರಿ, ನ. ೧೧: ‘ಹನಿಟ್ರಾö್ಯಪ್’ ಹಾಗೂ ‘ಬ್ಲಾö್ಯಕ್ಮೇಲ್’ನಿಂದ ಮನನೊಂದು ಸಾವನ್ನಪ್ಪಿ ದ್ದಾರೆ ಎನ್ನಲಾದ ಮಾಜಿ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಅಧಿಕಾರಿಗಳು ವಿವಿಧ ಆಯಾಮಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಪ್ರಮುಖ ಆರೋಪಿ ಜೀವಿತಾ, ಆಕೆಯ ತಾಯಿ ಮಂಜುಳಾ, ಅಣ್ಣ ಪ್ರವೀಣ್, ಸಹೋದರಿ ಸಂಬAಧಿ ದಿವ್ಯ ಹಾಗೂ ಸ್ನೇಹಿತ ಅಯ್ಯಪ್ಪ ಅವರುಗಳು ಬಂಧನವಾಗಿ ಮಡಿಕೇರಿ ಕಾರಾಗೃಹದಲ್ಲಿದ್ದಾರೆ. ತಾ. ೧೧ ರಿಂದ ಮುಂದಿನ ೫ ದಿನಗಳ ಕಾಲ ನ್ಯಾಯಾಲಯಕ್ಕೆ ರಜೆ ಇರುವ ಹಿನ್ನೆಲೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲು ಸಾಧ್ಯವಿಲ್ಲ.
ತನಿಖೆ ಹಾದಿ ತಪ್ಪಿಸುವ ಉದ್ದೇಶದಿಂದ ಜೀವಿತಾ ತನ್ನ ಮೊಬೈಲ್ನ್ನು ಮೂರ್ನಾಡಿನಲ್ಲಿಟ್ಟು ಪರಾರಿಯಾಗಿದ್ದಳು. ಇದೀಗ ಆಕೆಯ ಮೊಬೈಲ್ ಸೇರಿದಂತೆ, ಸಹೋದರಿ ಸಂಬAಧಿ ದಿವ್ಯ ಹಾಗೂ
(ಮೊದಲ ಪುಟದಿಂದ) ಮೃತ ಸಂದೇಶ್ ಅವರ ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡು ಸೈಬರ್ ಪೊಲೀಸರ ಮೂಲಕ ಅವುಗಳಲ್ಲಿರುವ ಕರೆಗಳ ರೆಕಾರ್ಡ್, ವಾಟ್ಸಪ್ ಮೆಸೇಜ್ ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಜೊತೆಗೆ ಬ್ಯಾಂಕ್ ಸ್ಟೇಟ್ಮೆಂಟ್, ಯುಪಿಎ ಮೂಲಕ ಹಣ ವರ್ಗಾವಣೆಯಾದ ದಾಖಲೆಗಳನ್ನು ಪೊಲೀಸರು ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
‘ಆ್ಯಪ್’ ಮೂಲಕ ಜೀವಿತಾಳಿಗೆ ಹಣ ಕಳುಹಿಸುವ ಸಂದರ್ಭ ವರ್ಗಾವಣೆಯಾಗದಿದ್ದಾಗ ಜೀವಿತಾಳ ತಂಗಿಗೆ ಸಂದೇಶ್ ಹಣ ವರ್ಗಾವಣೆ ಮಾಡಿದ ಬಗ್ಗೆ ದಾಖಲೆ ದೊರೆತಿರುವ ಹಿನ್ನೆಲೆ ಆಕೆಯನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಡೆತ್ನೋಟ್ನಲ್ಲಿ ಉಲ್ಲೇಖವಾಗಿರುವ ಪೊಲೀಸ್ ಸತೀಶ್ ಯಾರು? ಎಂಬ ಪ್ರಶ್ನೆಗೆ ಪ್ರಾಥಮಿಕ ವಿಚಾರಣೆಯಲ್ಲಿ ಜೀವಿತಾ ಉತ್ತರಿಸಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಯಾರೆಂಬ ಹುಡುಕಾಟಕ್ಕೆ ಸ್ವತಃ ಪೊಲೀಸರೇ ಮುಂದಾಗಿದ್ದಾರೆ. ಉದ್ಯಮಿ ಸತ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆಬೀಸಲಾಗಿದೆ.
ಲಕ್ಷಾಂತರ ರೂಪಾಯಿ ವ್ಯವಹಾರ
ಸಂದೇಶ್ ವಿವಾಹಿತನಾಗಿದ್ದು, ಜೀವಿತಾ ಕೆಲ ವರ್ಷಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ ಪತಿಯಿಂದ ವಿಚ್ಛೇಧನ ಪಡೆದು ಗಣಪತಿ ಬೀದಿಯಲ್ಲಿ ವಾಸವಾಗಿದ್ದಳು. ಆಕೆಯ ಇಬ್ಬರ ಮಕ್ಕಳು ಮೂರ್ನಾಡಿನಲ್ಲಿ ಜೀವಿತಾ ತಾಯಿ ಮನೆಯಲ್ಲಿ ನೆಲೆಸಿದ್ದರು.
ಮೂರು ವರ್ಷಗಳ ಹಿಂದೆ ಸಂದೇಶ್, ಜೀವಿತಾಳಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯವಾಗಿದೆ. ಅನಂತರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಕರ್ತವ್ಯದಿಂದ ರಜೆಯ ಮೇಲೆ ಬರುತ್ತಿದ್ದ ಸಂದೇಶ್ ಜೀವಿತಾಳನ್ನು ಭೇಟಿಯಾಗುತ್ತಿದ್ದರು. ಇದರೊಂದಿಗೆ ಸಂದೇಶ್ ಕರ್ತವ್ಯ ನಿರ್ವಹಿಸುತ್ತಿದ್ದ ಜಾಗಕ್ಕೂ ಜೀವಿತಾಳನ್ನು ಕರೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಪ್ರತಿ ತಿಂಗಳು ರೂ. ೨೦ ಸಾವಿರ ಹಣದೊಂದಿಗೆ ಜೀವಿತಾಳ ಮನೆಯ ಬಾಡಿಗೆಯನ್ನು ಸಂದೇಶ್ ಪಾವತಿಸುತ್ತಿದ್ದರು. ಇದೇ ರೀತಿ ಅನೇಕ ಬಾರಿ ಜೀವಿತಾಳಿಗೆ ಹಣ ವರ್ಗಾವಣೆ ಮಾಡಿದ ಸಂದೇಶ್ ಜುಲೈನಲ್ಲಿ ನಿವೃತ್ತಿ ಪಡೆದು ಬಂದ ಬಳಿಕ ಜೀವಿತಾ ಮನೆ ನಿರ್ಮಾಣದ ಉದ್ದೇಶಕ್ಕೆ ರೂ. ೫೦ ಲಕ್ಷ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದಳು ಎನ್ನಲಾಗುತ್ತಿದೆ.
ಅಷ್ಟೊಂದು ಪ್ರಮಾಣದ ಹಣ ನೀಡಲಾಗದ ಸಂದರ್ಭ ಖಾಸಗಿ ಫೋಟೋ ಗಳನ್ನು ತೋರಿಸಿ ಬೆದರಿಸುತ್ತಿದ್ದಳು. ಈ ವಿಚಾರವನ್ನು ಕೆಲ ತಿಂಗಳ ಹಿಂದೆ ಸಂದೇಶ್ ತನ್ನ ಪತ್ನಿಗೆ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.