ವೀರಾಜಪೇಟೆ, ನ. ೧೧: ಪಟ್ಟಣದ ಚಿಕ್ಕಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಅಂತರ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಗಣ್ಯರು ಚಾಲನೆ ನೀಡಿದರು.

ಇಂದಿನಿAದ ನಾಲ್ಕು ದಿನಗಳ ವರೆಗೆ ಪಂದ್ಯಾಟಗಳು ನಡೆಯಲಿದ್ದು, ತಾ. ೧೪ ರಂದು ಮುಕ್ತಾಯ ಕಾಣಲಿದೆ. ೧೦ ಕೊಡವ ಸಮಾಜಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.

ಪಂದ್ಯಾಟವನ್ನು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಸಮಾಜ ಸೇವಕ ಮತ್ತು ಭಾರತೀಯ ಜನತಾ ಪಕ್ಷದ ಮುಖಂಡ ತೇಲಪಂಡ ಶಿವಕುಮಾರ್, ಕೊಡವ ಜನಾಂಗದ ಪ್ರತಿಯೊಬ್ಬ ರಲ್ಲಿಯೂ ಕ್ರೀಡೆಯು ರಕ್ತಗತವಾಗಿ ಬಂದಿದೆ. ಹಾಕಿ ಕ್ರೀಡೆಗೆ ಮಹತ್ವ ನೀಡುವಂತೆ ಕ್ರಿಕೆಟ್ ಪಂದ್ಯಾಟಕ್ಕೂ ಪ್ರೋತ್ಸಾಹ ನೀಡುವಂತಾಗಬೇಕು. ಜನಪ್ರತಿನಿಧಿಗಳು ಜಿಲ್ಲೆಯನ್ನು ಕ್ರೀಡಾ ವಲಯ ಎಂದು ಘೋಷಣೆ ಮಾಡಬೇಕು. ಅಲ್ಲದೆ ಕ್ರೀಡಾ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಮುಂದಾಗ ಬೇಕು ಎಂದು ಆಗ್ರಹಿಸಿದರು.

ಕೊಡಗು ಜಿಲ್ಲೆಯು ಕ್ರೀಡಾ ತವರೂರಾದರು ಕೆಲವೊಂದು ಸಮಸ್ಯೆಗಳಿಂದ ಜಾಗತಿಕ ಮಟ್ಟದಲ್ಲಿ ಸಾಧನೆಗೈಯಲು ಕ್ರೀಡಾಪಟುಗಳಿಗೆ ಸಾಧ್ಯವಾಗುತ್ತಿಲ್ಲ. ಶಕ್ತ ಕ್ರೀಡಾಪಟುವಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಗತ್ಯ. ಕ್ರಿಕೆಟ್ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಕ್ರೀಡಾ ಸಾಮರ್ಥ್ಯ ಸಮಸ್ಯೆಗಳಿಂದ ಜಾಗತಿಕ ಮಟ್ಟದಲ್ಲಿ ಸಾಧನೆಗೈಯಲು ಕ್ರೀಡಾಪಟುಗಳಿಗೆ ಸಾಧ್ಯವಾಗುತ್ತಿಲ್ಲ. ಶಕ್ತ ಕ್ರೀಡಾಪಟುವಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಗತ್ಯ. ಕ್ರಿಕೆಟ್ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಕ್ರೀಡಾ ಸಾಮರ್ಥ್ಯ ಸಮೂಹದಲ್ಲಿ ಇಂದು ಮೊಬೈಲ್ ಗೀಳು ಹೆಚ್ಚಾಗುತ್ತಿದ್ದು, ಇದರಿಂದ ದೈಹಿಕ ಚಟುವಟಿಕೆಗಳಿಂದ ದೂರವಾಗಿ ಆರೋಗ್ಯ ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದ ಅವರು, ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ಸುಮಾರು ೨೧ ವರ್ಷಗಳಿಂದ

(ಮೊದಲ ಪುಟದಿಂದ) ಕಾರ್ಯ ನಿರ್ವಹಿಸುತ್ತ ಬಂದಿದೆ. ಲೆದರ್ ಬಾಲ್ ಕ್ರಿಕೆಟ್ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತರ ಕೊಡವ ಸಮಾಜಗಳ ನಡುವೆ ಪ್ರಪ್ರಥಮವಾಗಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಟೆನ್ನಿಸ್ ಬಾಲ್ ಕ್ರಿಕೆಟ್‌ಗಿಂತ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಭವಿಷ್ಯವಿದೆ ಪಂದ್ಯಾಟದಲ್ಲಿ ಒಟ್ಟು ೧೦ ಕೊಡವ ಸಮಾಜಗಳು ಭಾಗವಹಿಸುತ್ತಿವೆ ಎಂದರು.

ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ವೀರಾಜಪೇಟೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆÀ ಯಶೋಧ ಮಂದಣ್ಣ ಮತ್ತು ಗೋಣಿಕೊಪ್ಪದ ಉದ್ಯಮಿ ನಾಗೇಶ್ ಪವನ್ ಉಪಸ್ಥಿತರಿದ್ದರು. ಅಕಾಡೆಮಿ ಖಜಾಂಜಿ ಕೊಕ್ಕೆಂಗಡ ರಂಜನ್ ಸ್ವಾಗತಿಸಿ, ಕಾಂಡೇರ ಡಾನ್ ಕುಶಾಲಪ್ಪ ನಿರೂಪಿಸಿದರು, ಬಾಳೆಯಡ ಪ್ರತೀಶ್ ವಂದಿಸಿದರು.

ಮೂರ್ನಾಡು ತಂಡ ಮುನ್ನಡೆ

ದಿನದ ಮೊದಲ ಪಂದ್ಯಾಟದಲ್ಲಿ ಮಕ್ಕಂದೂರು ಕೊಡವ ಸಮಾಜ ಮತ್ತು ಮೂರ್ನಾಡು ಕೊಡವ ಸಮಾಜದ ನಡುವೆ ನಡೆದ ಪಂದ್ಯಾಟದಲ್ಲಿ ಮೂರ್ನಾಡು ತಂಡ ಗೆಲುವಿನ ನಗೆಬೀರಿ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಮಕ್ಕಂದೂರು ತಂಡ ನಿಗದಿತ ೧೨ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೮೫ ರನ್ ಪೇರಿಸಿ ೮೬ ರನ್‌ಗಳ ಗುರಿ ನೀಡಿತು. ಬೆನ್ನತ್ತಿದ ಮೂರ್ನಾಡು ೧೨ ಓವರ್ ಬಳಸಿಕೊಂಡು ಗುರಿ ಸಾಧಿಸಿ ಗೆಲುವು ಪಡೆದುಕೊಂಡಿತು. ಚಕ್ಕೇರ ನವೀನ್, ಅಳಮೇಂಗಡ ಮೋಹನ್ ಚೆಂಗಪ್ಪ ಅವರುಗಳು ಪಂದ್ಯಾಟದ ತೀರ್ಪುಗಾರರಾಗಿ, ಅದೇಂಗಡ ಶಾಶ್ವತ್ ಅವರು ಸ್ಕೋರರ್ ಆಗಿ ಕರ್ತವ್ಯ ನಿರ್ವಹಿಸಿದರು. -ಕಿಶೋರ್ ಕುಮಾರ್ ಶೆಟ್ಟಿ