ಸೋಮವಾರಪೇಟೆ, ನ. ೧೦: ರಾಮಕೃಷ್ಣ ವಿದ್ಯಾಶಾಲೆ ಆರಂಭಗೊAಡು ೫೦ ವರ್ಷ ಪೂರೈಸಿದ ಹಿನ್ನೆಲೆ ಇಲ್ಲಿನ ಸಾಂದೀಪನಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ಆವರಣದಲ್ಲಿ ಅಂತರ ಶಾಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಾಂದೀಪನಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಲಿಖಿತ್ ದಾಮೋದರ್, ಉದ್ಯೋಗಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಬದುಕಿಗೆ ಸಾಮಾನ್ಯ ಜ್ಞಾನವೂ ಅಷ್ಟೇ ಮುಖ್ಯವೆಂದು ತಿಳಿಸಿದರು.
ಇಂದು ಪ್ರಮುಖವಾಗಿ ಉದ್ಯೋಗಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಆದರೆ ಬದುಕಿನಲ್ಲಿ ಸಾಮಾನ್ಯ ಜ್ಞಾನವೆಂಬುದು ಇಲ್ಲವಾದರೆ ಜೀವನ ದುಸ್ತರವಾಗುತ್ತದೆ ಎಂದರು. ರಾಮಕೃಷ್ಣ ವಿದ್ಯಾಶಾಲೆ ಆರಂಭಗೊAಡು ೫೦ ವರ್ಷವಾಗಿರುವ ಸಂದರ್ಭ ಅಂದಿನ ಗುರುಗಳಾಗಿದ್ದ ಶಾಂಭವಾನAದ ಜೀಯವರ ಜ್ಞಾಪಕಾರ್ಥ ರಾಜ್ಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ರಾಜ್ಯದ ೭೩೨ ಕೇಂದ್ರಗಳಲ್ಲಿ ಒಟ್ಟು ೧೭,೨೪೧ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು ಕೊಡಗು ಜಿಲ್ಲೆಯಲ್ಲಿ ೧೦೦ ಮಂದಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್, ರಾಮಕೃಷ್ಣ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎಂ.ಟಿ. ದಾಮೋಧರ್, ವಿಕ್ರಂ, ಬಿ.ಎಸ್. ಸುದೀಪ್, ಬಿ.ಎಸ್. ಸಿದ್ದಾರ್ಥ್ ಅವರುಗಳು ಉಪಸ್ಥಿತರಿದ್ದರು