ಮಡಿಕೇರಿ, ನ. ೧೦: ಮಾಜಿ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಪಟ್ಟAತೆ ಜಿಲ್ಲಾ ಪೊಲೀಸರು ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜೀವಿತಾ, ಆಕೆಯ ತಾಯಿ, ಅಣ್ಣ ಮತ್ತು ಸಹೋದರಿ ಸಂಬAಧಿ ಸೇರಿದಂತೆ ಒಟ್ಟು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೀವಿತಾಳ ತಾಯಿ ಮಂಜುಳಾ, ಮಡಿಕೇರಿ, ನ. ೧೦: ಮಾಜಿ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಪಟ್ಟAತೆ ಜಿಲ್ಲಾ ಪೊಲೀಸರು ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜೀವಿತಾ, ಆಕೆಯ ತಾಯಿ, ಅಣ್ಣ ಮತ್ತು ಸಹೋದರಿ ಸಂಬAಧಿ ಸೇರಿದಂತೆ ಒಟ್ಟು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೀವಿತಾಳ ತಾಯಿ ಮಂಜುಳಾ, ಈಕೆಯ ಅಮ್ಮ, ತಂಗಿ ಕೂಡ ‘ಬ್ಲಾö್ಯಕ್‌ಮೇಲ್’ ಮಾಡುತ್ತಿದ್ದಾರೆ ಎಂದು ಆರೋಪಿಸಿದಲ್ಲದೆ ಕೆಲವರ ಹೆಸರನ್ನು ಉಲ್ಲೇಖಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್ ಬರೆದಿಟ್ಟು ಉಕ್ಕುಡ ನಿವಾಸಿ, ಮಾಜಿ ಯೋಧ ಸಂದೇಶ್ ನಾಪತ್ತೆ ಯಾಗಿದ್ದರು. ನಂತರ ಮಡಿಕೇರಿಯ ಪಂಪಿನಕೆರೆ ದಡದಲ್ಲಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿತ್ತು. ಆ ಬಳಿಕ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ತಾ. ೮ ರಂದು ಮೃತದೇಹ ಹೊರ ತೆಗೆಯಲಾಗಿತ್ತು.

ವಿಚಾರ ಕಾಡ್ಗಿಚ್ಚಿನಂತೆ ಹರಡುತ್ತಿದಂತೆ ಜೀವಿತಾ, ಆಕೆಯ ತಾಯಿ ಮಂಜುಳಾ, ಅಣ್ಣ ಪ್ರವೀಣ್ ಉತ್ತರ ಕರ್ನಾಟಕದ ಹಾವೇರಿ, ಬೆಳಗಾವಿಯ ಭಾಗಕ್ಕೆ ತೆರಳಿದ್ದಾರೆ. ಇವರುಗಳು ಪರಾರಿಯಾಗಲು ಭಗವತಿ ನಗರದ ನಿವಾಸಿ ದಿವ್ಯ ಹಾಗೂ ಮಡಿಕೇರಿಯ ಅಯ್ಯಪ್ಪ ಸಹಕರಿಸಿದ್ದಾರೆ. ಅಯ್ಯಪ್ಪ ತನ್ನ ಕಾರಿನಲ್ಲಿ ಮೂರ್ನಾಡು ಮೂಲಕ ಕರೆದೊಯ್ದು ಗೋಣಿಕೊಪ್ಪಕ್ಕೆ ಬಿಟ್ಟು ವಾಪಾಸ್ ಮಡಿಕೇರಿಗೆ ಹಿಂತಿರುಗಿದ್ದಾನೆ.

ಕಾರು-ದಾಖಲೆಗಳು ವಶಕ್ಕೆ

ಸಂದೇಶ್‌ಗೆ ಸೇರಿದೆ ಎನ್ನಲಾದ ಕಾರು ಹಾಗೂ ಕೆಲವೊಂದು ದಾಖಲೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೀವಿತಾ ಮೂಲತಃ ಮೂರ್ನಾಡಿನ ನಿವಾಸಿಯಾಗಿದ್ದು, ಮಡಿಕೇರಿಗೆ ವಿವಾಹವಾಗಿದ್ದಳು.

ಕೌಟುಂಬಿಕ ಸಮಸ್ಯೆಯಿಂದ ಪತಿಯಿಂದ ವಿಚ್ಛೇದನ ಪಡೆದಿದ್ದ ಆಕೆ, ತಾಯಿಯೊಂದಿಗೆ ಗಣಪತಿ ಬೀದಿಯಲ್ಲಿ ವಾಸಿಸುತ್ತಿದ್ದಳು. ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದಂತೆ ಕಾರು ಹಾಗೂ ಕೆಲವೊಂದು ದಾಖಲೆಗಳು ಗಣಪತಿ ಬೀದಿಯ ಮನೆಯಲ್ಲಿರುವ ಬಗ್ಗೆ ಪೊಲೀಸರು ಆರೋಪಿಗಳ ಬಂಧನ ನಂತರ ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಮೂರ್ನಾಡಿಗೆ ತೆರಳಿ ಮೊಬೈಲ್ ಇಟ್ಟಿದ್ದ ಜಾಗವನ್ನು ಮಹಜರು ಮಾಡಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಹೆಚ್ಚಿನ ಮಾಹಿತಿ ನೀಡದಿರುವ ಜೀವಿತಾ ಪೊಲೀಸ್ ಸಿಬ್ಬಂದಿ ಸತೀಶ್ ಬಗ್ಗೆಯೂ ಬಾಯಿ ಬಿಟ್ಟಿರುವುದಿಲ್ಲ. ಹಣ ವರ್ಗಾವಣೆಯ ಬಗ್ಗೆಯ ಕೆಲವೊಂದು ಮಾಹಿತಿಯನ್ನು ಈಗಾಗಲೇ ಪೊಲೀಸರು ಪಡೆದುಕೊಂಡಿದ್ದಾರೆ. (ಮೊದಲ ಪುಟದಿಂದ)

ತನಿಖೆ ಹಾದಿ ತಪ್ಪಿಸುವ ಪ್ರಯತ್ನ

ಪೊಲೀಸರ ಹಾದಿ ತಪ್ಪಿಸುವ ಉದ್ದೇಶದಿಂದ ಜೀವಿತಾ ತನ್ನ ಮೊಬೈಲ್ ಅನ್ನು ಮೂರ್ನಾಡಿನಲ್ಲಿಟ್ಟು ತಾಯಿ, ಅಣ್ಣನೊಂದಿಗೆ ತೆರಳಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಇವರ ಪತ್ತೆಗೆ ಬಲೆಬೀಸಿ ಡಿಜಿಟಲ್ ಸಾಕ್ಷಾö್ಯಧಾರಗಳನ್ನು ಕಲೆಹಾಕಲು ಆರಂಭಿಸಿದ್ದಾರೆ. ಈ ವೇಳೆ ಪರಾರಿಗೆ ಸಹಕರಿಸಿದವರ ಬಗ್ಗೆ ಮಾಹಿತಿ ತಿಳಿದು ಅವರ ಮೂಲಕ ಪರಾರಿಯಾಗಿದ್ದ ಮೂವರನ್ನು ಜಿಲ್ಲೆಗೆ ಕರೆಸಿದ್ದಾರೆ. ಈ ಸಂದರ್ಭ ಮಡಿಕೇರಿ ಹೊರ ವಲಯದಲ್ಲಿ ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ಸತೀಶ್ ಯಾರು?

ಮೃತದೇಹ ಪತ್ತೆಯಾದ ಬಳಿಕ ಡೆತ್‌ನೋಟ್‌ನಲ್ಲಿ ಹೆಸರುಗಳು ಉಲ್ಲೇಖವಾಗಿದ್ದ ಹಲವರು ನಾಪತ್ತೆಯಾಗಿದ್ದರು. ಈ ಹೆಸರುಗಳೊಂದಿಗೆ ಪೊಲೀಸ್ ಸತೀಶ್ ಎಂಬ ಹೆಸರೂ ಇದೆ. ಆದರೆ, ಅಚ್ಚರಿ ಎಂಬAತೆ ಪೊಲೀಸ್ ಇಲಾಖೆಯಲ್ಲಿ ಸತೀಶ್ ಎಂಬ ಹೆಸರಿನ ಅನೇಕರಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದವರು ಯಾರೆಂದು ಇದುವರೆಗೂ ತಿಳಿದು ಬಂದಿರಲಿಲ್ಲ. ಅಲ್ಲದೆ, ಈ ಹೆಸರಿನ ಸಿಬ್ಬಂದಿಯೂ ನಾಪತ್ತೆಯಾಗಿಲ್ಲ. ಇದೀಗ ಜೀವಿತಾ ಬಂಧನ ಬಳಿಕ ಸತೀಶ್ ಯಾರು? ಪ್ರಶ್ನೆಗೆ ಉತ್ತರ ದೊರಕಲಿದೆ ಎಂದು ಪೊಲೀಸ್ ಇಲಾಖೆ ವಿಶ್ವಾಸದಲ್ಲಿದೆ.

ಸಂದೇಶ್ ಪತ್ನಿ ಯಶೋಧ ನೀಡಿದ ದೂರಿನ ಅನ್ವಯ ಜೀವಿತಾ ವಿರುದ್ಧ ಸೆಕ್ಷನ್ ೩೮೪ ಅಡಿ ಸುಲಿಗೆ (ಹನಿಟ್ರಾö್ಯಪ್) ಪ್ರಕರಣ ದಾಖಲಾಗಿತ್ತು. ಮೃತದೇಹ ಪತ್ತೆ ಬಳಿಕ ಜೀವಿತಾ ಸೇರಿದಂತೆ ಇಬ್ನಿಸ್ಪಿçಂಗ್ ಹೋಂಸ್ಟೇ ಮಾಲೀಕ ಸತ್ಯ, ಪೊಲೀಸ್ ಸಿಬ್ಬಂದಿ ಸತೀಶ್, ಜೀವಿತಾಳ ತಾಯಿ, ತಂಗಿ ವಿರುದ್ಧ ಸೆಕ್ಷನ್ ೩೦೬ ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉದ್ಯಮಿ ಸತ್ಯ ಪತ್ತೆ ಸಂಬAಧ ಪೊಲೀಸರು ಚುರುಕಿನ ಕಾರ್ಯಾಚರಣೆಗೆ ಮುಂದಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ.