ಮಡಿಕೇರಿ, ನ. ೧೦ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಟಾಕಿ ಗೋದಾಮು ಅವಘಡದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇತರ ಸ್ಥಳಗಳಲ್ಲಿ ಇಂತಹ ಅವಘಡ ಸಂಭವಿಸಿದAತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಜಿಲ್ಲೆಯಲ್ಲಿರುವ ಪಟಾಕಿ ಸಂಗ್ರಹಿಸುವ, ಸಾಗಾಣಿಕೆ ಮಾಡುವ ಮತ್ತು ಮಾರಾಟ ಮಾಡುವ ಬಗ್ಗೆ ಜಂಟಿಯಾಗಿ ಪರಿಶೀಲಿಸಲು ಸರ್ಕಾರದ ಸೂಚನೆ ಇದೆ. ಅದರಂತೆ ಕಂದಾಯ, ಆರಕ್ಷಕ, ಅಗ್ನಿಶಾಮಕ, ಗ್ರಾಮೀಣ, ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ತಂಡವನ್ನು ರಚಿಸಿ ಯಾವುದೇ ಅಕ್ರಮ ಮಾರಾಟ, ಸಾಗಾಣಿಕೆ, ದಾಸ್ತಾನು ಇರಿಸಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ದೀಪವಾಳಿ ಹಬ್ಬದ ಆಚರಣೆ ಸಂಬAಧ ಕಂದಾಯ, ಆರಕ್ಷಕ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗ್ರಾಮೀಣ, ನಗರ, ಸ್ಥಳೀಯ ಸಂಸ್ಥೆಗಳು ನೀಡಿದ ವರದಿ, ಅಭಿಪ್ರಾಯದ ಮೇರೆಗೆ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯ ಆದೇಶಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೆ ಒಳಪಡಿಸಿ ತಾ. ೧೧ ರಿಂದ ೧೪ರವರೆಗೆ ತೆರೆದ ಮೈದಾನ, ಖಾಲಿ ಜಾಗದಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆ ತೆರೆಯಲು ಅನುಮತಿ ಪತ್ರವನ್ನು ನೀಡಲಾಗುತ್ತದೆ.