ಮಡಿಕೇರಿ, ನ. ೧೦ : ಕಳೆದ ೬೩ ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ತಾ.೧೪ರಿಂದ ೨೦ರವರೆಗೆ ಏಳು ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು; ಇದು ೭೦ನೇ ಸಹಕಾರ ಸಪ್ತಾಹವಾಗಿದ್ದು, ಸಪ್ತಾಹದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಸಹಕಾರ ಸಂಘಗಳು ತಮ್ಮ ಕಟ್ಟಡದ ಮೇಲೆ ಏಳು ಬಣ್ಣಗಳಿರುವ ಸಹಕಾರಿ ಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು. ಭಾರತ ಸರಕಾರ ಸಂವಿಧಾನದ ೯೭ನೇ ತಿದ್ದುಪಡಿ ಮಡಿಕೇರಿ, ನ. ೧೦ : ಕಳೆದ ೬೩ ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ತಾ.೧೪ರಿಂದ ೨೦ರವರೆಗೆ ಏಳು ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು; ಇದು ೭೦ನೇ ಸಹಕಾರ ಸಪ್ತಾಹವಾಗಿದ್ದು, ಸಪ್ತಾಹದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಸಹಕಾರ ಸಂಘಗಳು ತಮ್ಮ ಕಟ್ಟಡದ ಮೇಲೆ ಏಳು ಬಣ್ಣಗಳಿರುವ ಸಹಕಾರಿ ಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು. ಭಾರತ ಸರಕಾರ ಸಂವಿಧಾನದ ೯೭ನೇ ತಿದ್ದುಪಡಿ ಎಂಬ ವಿಚಾರದಡಿ ಹೊದ್ದೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮವನ್ನು ತಾವು ಉದ್ಘಾಟನೆ ಮಾಡಲಿದ್ದು, ಸಹಕಾರ ಯೂನಿಯನ್ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ ಧ್ವಜಾರೋಹಣ ಮಾಡುವರು. ಸಭಾಂಗಣವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಉದ್ಘಾಟಿಸುವರು. ಉಪಾಧ್ಯಕ್ಷ ಕೆ.ಎಸ್. ಹರೀಶ್ ಪೂವಯ್ಯ ಸೇಫ್ ಲಾಕರ್ ಉದ್ಘಾಟನೆ ಮಾಡುವರು. ಹೊದ್ದೂರು ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಅಧ್ಯಕ್ಷತೆ ವಹಿಸಲಿದ್ದು, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಗೋದಾಮು ಕಟ್ಟಡ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು. ತಾ. ೧೫ರಂದು ನಂಜರಾಯಪಟ್ಟಣದಲ್ಲಿ, ತಾ. ೧೬ರಂದು ಮಡಿಕೇರಿಯಲ್ಲಿ, ತಾ. ೧೭ರಂದು ಕರಿಕೆಯಲ್ಲಿ, ತಾ. ೧೮ರಂದು ಮಡಿಕೇರಿಯಲ್ಲಿ, ತಾ. ೧೯ರಂದು ಸೋಮವಾರಪೇಟೆಯಲ್ಲಿ ಹಾಗೂ
ತಾ. ೨೦ರಂದು
(ಮೊದಲ ಪುಟದಿಂದ) ಕುಶಾಲನಗರದಲ್ಲಿ ಸಮರೋಪ ಸಮಾರಂಭದೊAದಿಗೆ ಮುಕ್ತಾಯ ಗೊಳ್ಳಲಿದೆ ಎಂದು ಮನು ಮುತ್ತಪ್ಪ ತಿಳಿಸಿದರು.
ಪ್ರಶಸ್ತಿ ಪ್ರದಾನ
ಸಹಕಾರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಗೆ ಮಾದರಿಯಾಗಿದ್ದರೂ ರಾಜ್ಯಮಟ್ಟದಲ್ಲಿ ಸಾಧಕರಿಗೆ ಮಾನ್ಯತೆ ದೊರೆಯದ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಗು ಸಹಕಾರ ರತ್ನ ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿಯ ಕೊಡಗು ಸಹಕಾರ ರತ್ನ ಪ್ರಶಸ್ತಿಗೆ ಕೊಳಕೇರಿ ಗ್ರಾಮದವರಾದ ಕೊಡಗು ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ಎ. ರಮೇಶ್ ಚಂಗಪ್ಪ ಅವರು ಭಾಜನರಾಗಿದ್ದಾರೆ. ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಮಡಿಕೇರಿಯ ಕೊಂಗAಡ ಎಂ.ತಿಮ್ಮಯ್ಯ, ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪ, ನಿಡ್ತ ಗ್ರಾಮದ ಹಿತ್ತಲಗೇರಿ ಗ್ರಾಮದ ಎಚ್.ಎಸ್.ಸುಬ್ಬಪ್ಪ, ಹಾಗೂ ಮಹಿಳಾ ವಿಬಾಗದಲ್ಲಿ ಮಡಿಕೇರಿಯ ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ ಅವರುಗಳು ಭಾಜನರಾಗಿದ್ದಾರೆ. ತಾ. ೧೮ರಂದು ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದೆಂದು ಮನು ಮುತ್ತಪ್ಪ ತಿಳಿಸಿದರು.
ಅಂದಿನ ಕಾರ್ಯಕ್ರಮವನ್ನು ಅರಕಲಗೂಡು ಶಾಸಕ, ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ಹಾಸನ ಮತ್ತು ಕೊಡಗು ಜಿಲ್ಲಾ ನಿರ್ದೇಶಕ ಎ.ಮಂಜು ಉದ್ಘಾಟನೆ ಮಾಡುವರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಎಂ.ಬಿ.ದೇವಯ್ಯ ಹಾಗೂ ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಪ್ರಶಸ್ತಿ ಪ್ರದಾನ ಮಾಡುವರು ಎಂದು ಮನು ಮುತ್ತಪ್ಪ ತಿಳಿಸಿದರು.
ಸಹಕಾರ ಯೂನಿಯನ್ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ, ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ, ಯೂನಿಯನ್ ನಿರ್ದೇಶಕ ನಂದಿನೆರವAಡ ರವಿ ಬಸಪ್ಪ, ನಿದೇರ್ಶಕರುಗಳಾದ ಕೋಡೀರ ಪ್ರಸನ್ನ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೊಗೇಂದ್ರ ನಾಯಕ್ ಗೋಷ್ಠಿಯಲ್ಲಿದ್ದರು.