ಮಡಿಕೇರಿ, ನ. ೧೦: ೨೦೧೫ರಲ್ಲಿ ಟಿಪ್ಪುಜಯಂತಿ ಆಚರಣೆ ಸಂದರ್ಭ ಸಾವನ್ನಪ್ಪಿದ ವಿಶ್ವ ಹಿಂದೂ ಪರಿಷತ್ತು ಹಿರಿಯ ಮುಖಂಡ ದೇವಪ್ಪಂಡ ಕುಟ್ಟಪ್ಪ ಅವರ ಸ್ಮರಣಾರ್ಥ ಜಿಲ್ಲೆಯ ವಿವಿಧೆಡೆ ಇಂದು ಶಾಂತಿ ಪೂಜೆ ನಡೆಯಿತು.
ವಿಶ್ವ ಹಿಂದೂ ಪರಿಷತ್ತು, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ ವತಿಯಿಂದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಂತಿ ಪೂಜೆಯನ್ನು ನೆರವೇರಿಸಿದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಅಜಿತ್ ಮಾತನಾಡಿದರು. ಈ ಸಂದರ್ಭ ಹಿಂದೂಪರ ಸಂಘಟನೆಯ ಪ್ರಮುಖರಾದ ಚೇತನ್, ಪುದಿಯೊಕ್ಕಡ ರಮೇಶ್, ಸಂತೋಷ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಸದಸ್ಯ ಕಾಳಚಂಡ ಅಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪೊನ್ನಂಪೇಟೆ: ವಿಶ್ವ ಹಿಂದೂ ಪರಿಷತ್, ಭಜರಂಗದಳ ಪೊನ್ನಂಪೇಟೆ ಪ್ರಖಂಡ ವತಿಯಿಂದ ದಿವಂಗತ ದೇವಪ್ಪಂಡ ಕುಟ್ಟಪ್ಪ ಹುತಾತ್ಮರಾದ ದಿವಸದ ಸ್ಮರಣಾರ್ಥ ಇಂದು ಪೊನ್ನಂಪೇಟೆ ತಾಲೂಕಿನ ಕುಂದ ಈಚೂರು ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಶಾಂತಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಪಂದ್ಯAಡ ಹರೀಶ್, ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಪೊನ್ನಂಪೇಟೆ ಘಟಕ ಅಧ್ಯಕ್ಷ ಸುಬ್ರಮಣಿ, ಕಿರುಗೂರು ಘಟಕ ಅಧ್ಯಕ್ಷ ಸತೀಶ್, ಕಿರುಗೂರು ಭಜರಂಗದಳದ ಸಂಚಾಲಕ ಭವನ್, ಪೊನ್ನಂಪೇಟೆ ಘಟಕದ ದಿವ್ಯ ಇನ್ನಿತರರು ಪಾಲ್ಗೊಂಡಿದ್ದರು.ಸೋಮವಾರಪೇಟೆ : ದೇವಪಪ್ಪಂಡ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮ ತಾಲೂಕಿನ ಮಾದಾಪುರದಲ್ಲಿ ನಡೆಯಿತು.
ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಮಾದಾಪುರದ ಗಣಪತಿ ದೇವಾಲಯದಲ್ಲಿ ಆಯೋಜನೆಗೊಂಡಿದ್ದ ಸ್ಮರಣೆ ಕಾರ್ಯಕ್ರಮದಲ್ಲಿ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಬೋಜೇಗೌಡ ಅವರು, ಹಿಂದು ಸಮಾಜ ಇನ್ನಷ್ಟು ಒಗ್ಗಟ್ಟಾಗಬೇಕು. ಮತ್ತೊಬ್ಬ ಕುಟ್ಟಪ್ಪ ಅವರನ್ನು ಹಿಂದೂ ಸಮಾಜ ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಸಮಾಜ ಸದಾ ಜಾಗೃತವಿದ್ದು, ಎಲ್ಲರೂ ಒಂದಾಗಿ ಸಮಾಜವನ್ನು ಸಂಘಟಿಸಬೇಕು ಎಂದರು.
ವೇದಿಕೆಯಲ್ಲಿ ಕುಟ್ಟಪ್ಪ ಅವರ ಪುತ್ರ ಡಿ.ಕೆ. ಡಾಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಅಜಿತ್ ಕುಕ್ಕೇರ, ಪ್ರಮುಖರಾದ ಚೇತನ್ ಶಾಂತಿನಿಕೇತನ, ವಿನಯ್, ತಾಲೂಕು ಸಂಯೋಜಕ ವಿನಯ್ ಕುಮಾರ್, ಹೇಮಂತ್, ಗಪ್ಪು ಸೋಮಯ್ಯ, ಬಿಪಿನ್, ಸೂರಜ್, ಕೊಪ್ಪತಂಡ ಗಣೇಶ್, ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುನಿಲ್ ಮಾದಾಪುರ ಕಾರ್ಯಕ್ರಮ ನಿರ್ವಹಿಸಿದರು.ವೀರಾಜಪೇಟೆ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಮತ್ತು ಹಿಂದೂ ಪರ ಸಂಘಟನೆ ವತಿಯಿಂದ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಾ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕುಟ್ಟಪ್ಪ ಅವರ ಹೆಸರಿನಲ್ಲಿ ಶಾಂತಿ ಪೂಜೆ ಮಾಡಲಾಯಿತು.
ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಭಜರಂಗದಳ ತಾಲೂಕು ಸಂಚಾಲಕ ಐನಂಡ ಕುಶಾಲಪ್ಪ, ಜಿಲ್ಲಾ ಸಹ ಸಂಯೋಜಕ್ ವಿವೇಕ್ ರೈ, ಪ್ರಮುಖರಾದ ವಿಶ್ವ, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಗಣೇಶ್. ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ. ಕೃಷ್ಣ, ಕಾರ್ಯದರ್ಶಿ ಪ್ರದೀಪ್ ರೈ, ಪ್ರಮುಖರಾದ ಅನಿಲ್ ಮಂದಣ್ಣ, ರಚನ್ ಮೇದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.ಕುಶಾಲನಗರ : ಕುಟ್ಟಪ್ಪ ಅವರಿಗೆ ಶಾಂತಿ ಕೋರಿ ಕುಶಾಲನಗರದಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರು ಗಣಪತಿ ದೇವಾಲಯದಲ್ಲಿ ಶಾಂತಿ ಪೂಜೆ ನೆರವೇರಿಸಿದರು ಈ ಸಂದರ್ಭ ಹಿಂದೂಪರ ಸಂಘಟನೆಗಳ ಪ್ರಮುಖರಾದ ಜಿ.ಎಲ್. ನಾಗರಾಜ್, ಅಮೃತ ರಾಜ್, ನವನೀತ್ ಮತ್ತಿತರರು ಇದ್ದರು.