ಮಡಿಕೇರಿ, ನ. ೧೦ : ರೂ. ೩೫ ಲಕ್ಷ ವೆಚ್ಚದಲ್ಲಿ ನಗರದ ಮಹದೇವಪೇಟೆಯ ಜಿಲ್ಲಾ ಆಯುಷ್ ಇಲಾಖೆ ನೂತನ ಕಚೇರಿಯನ್ನು ಶಾಸಕ ಡಾ. ಮಂಥರ್‌ಗೌಡ ಉದ್ಘಾಟಿಸಿದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾ ದೇವಿ, ಮೈಸೂರು ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಶ್ರೀಶಾನಂದ ಶರ್ಮ, ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಇತರರು ಇದ್ದರು.

ಬಳಿಕ ೮ ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ ಅವರು ಆಯುರ್ವೇದ ಔಷಧಿಗೆ ತನ್ನದೇ ಆದ ಮಹತ್ವ ಇದ್ದು, ಅದನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಹೇಳಿದರು. ಆಯುಷ್ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಆಯುರ್ವೇದ ವೈದ್ಯರ ಭರ್ತಿಗೆ ಕ್ರಮವಹಿಸಲಾಗುವುದು. ಹಾಗೆಯೇ ಆಯುರ್ವೇದ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾ ದೇವಿ ಮಾತನಾಡಿ, ಆಯುರ್ವೇದವು ವಿಶ್ವ ಆರೋಗ್ಯ ಆಯುರ್ವೇದ ಔಷಧಿಗೆ ತನ್ನದೇ ಆದ ಮಹತ್ವ ಇದ್ದು, ಅದನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಹೇಳಿದರು. ಆಯುಷ್ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಆಯುರ್ವೇದ ವೈದ್ಯರ ಭರ್ತಿಗೆ ಕ್ರಮವಹಿಸಲಾಗುವುದು. ಹಾಗೆಯೇ ಆಯುರ್ವೇದ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾ ದೇವಿ ಮಾತನಾಡಿ, ಆಯುರ್ವೇದವು ವಿಶ್ವ ಆರೋಗ್ಯ ಸಂಸ್ಥೆಯಿAದ ಸಾಂಪ್ರದಾಯಿಕ ಔಷಧ ವ್ಯವಸ್ಥೆಯಾಗಿ ಮಾನ್ಯತೆ ಪಡೆದಿದೆ. ಕೇಂದ್ರ ಆಯುಷ್ ಸಚಿವಾಲಯವು ಧನ್ವಂತರಿ ಜಯಂತಿಯನ್ನು ೨೦೧೬ ರ ಅಕ್ಟೋಬರ್, ೨೬ ರಂದು ರಾಷ್ಟಿçÃಯ ಆಯುರ್ವೇದ ದಿನವನ್ನಾಗಿ ಘೋಷಿಸಿದೆ ಎಂದು ತಿಳಿಸಿದರು.

‘ಪ್ರತಿದಿನ ಪ್ರತಿ ಮನೆಯಲ್ಲೂ ಆಯುರ್ವೇದ’. ಇದರ ಅಂಗವಾಗಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ರೈತರಿಗೆ, ಶಾಲೆಯ ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ವಿವಿಧ ಆಯುರ್ವೇದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಡಾ. ಅರುಣ್ ಸ್ವಾಗತಿಸಿದರು. ಡಾ.ಸರಸ್ವತಿ ಪ್ರಾರ್ಥಿಸಿ ದರು. ಡಾ. ಶ್ವೇತಾ ವಂದಿಸಿದರು.