ಮಡಿಕೇರಿ, ನ. ೧೦ : ‘ನಂಬಿಕೆ’ ಎಂಬ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಹಿನ್ನೆಲೆ ೧೧೦ ಕೆ.ಜಿ. ಅಕ್ಕಿಯನ್ನು ನಗರದ ಶಕ್ತಿ ವೃದ್ಧಾಶ್ರಮಕ್ಕೆ ನೀಡಲಾಯಿತು.
ಪೋಸ್ಟರ್ ಬಿಡುಗಡೆಯನ್ನು ವೃದ್ಧಾಶ್ರಮದ ವಾಸಿಗಳು ಅನಾವರಣಗೊಳಿಸಿದರು. ಆಶ್ರಮ ವ್ಯವಸ್ಥಾಪಕ ಸತೀಶ್, ಕಿರು ಚಿತ್ರದ ನಿರ್ಮಾಪಕ ವಿಶ್ವ ಕುಂಬೂರ್, ಛಾಯಾಗ್ರಾಹಕ ನಾಗೇಶ್ ಶೆಟ್ಟಿ, ನಿರ್ದೇಶಕÀ ಗೌತಮ್ ಸೂರ್ಯ, ಕಲಾವಿದರಾದ ಬೊಳ್ಳಜಿರ ಅಯ್ಯಪ್ಪ, ಚಂದನ್ ನಂದರಬೆಟ್ಟು, ಕಾವ್ಯ, ಕಾವೇರಿ, ಸತೀಶ್, ಉಮೇಶ್ ಉಪಸ್ಥಿತರಿದ್ದರು.