ಕುಶಾಲನಗರ, ನ. ೭: ಕುಶಾಲನಗರದಲ್ಲಿ ನಡೆಯುವ ಹನುಮ ಜಯಂತಿ ದಶ ಮಂಟಪಗಳ ಸಮಿತಿಯ ಪೂರ್ವ ಸಿದ್ಧತಾ ಸಭೆ ದಶಮಂಟಪ ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಊರಿನ ಹಿರಿಯ ಹಾಗೂ ಪ್ರಮುಖರ ಮತ್ತು ವಿವಿಧ ಹನುಮ ಮಂಟಪಗಳ ಸಮಿತಿ ಸದಸ್ಯರು ಅದ್ದೂರಿ ಆಚರಣೆಯ ಬಗ್ಗೆ ಚರ್ಚೆ ನಡೆಸಿದರು.
ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಶ್ರೀಹನುಮ ಜಯಂತಿಯAದು ಊರಿನಲ್ಲಿ ವಿವಿಧ ಭಾಗಗಳಿಂದ ಹೊರಡುವ ಹನುಮ ಮಂಟಪಗಳ ಬಗ್ಗೆ ಸಭೆಗೆ ವಿವರ ಒದಗಿಸಲಾಯಿತು. ಮಹಾ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಆರ್.ಕೆ. ನಾಗೇಂದ್ರ ಬಾಬು, ಆಂಜನೇಯ ದೇವಾಲಯದ ಅಧ್ಯಕ್ಷರಾದ ಪುಂಡರೀಕಾಕ್ಷ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಗಣಿ ಪ್ರಸಾದ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡು ಡಿಸೆಂಬರ್ ಮಾಹೆಯಲ್ಲಿ ನಡೆಯುವ ಹನುಮ ಜಯಂತಿಯ ಶೋಭಾಯಾತ್ರೆಯನ್ನು ಶ್ರದ್ಧಾಭಕ್ತಿಯೊಂದಿಗೆ ವಿಭಿನ್ನವಾಗಿ ಆಚರಣೆ ಮಾಡಬೇಕೆಂದು ಕರೆ ನೀಡಿದರು,
ಈ ಸಂದರ್ಭ ಹನುಮ ಜಯಂತಿ ದಶ ಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜ್, ಖಜಾಂಜಿ ಗಿರೀಶ್, ವಿಮಲ್ ಜೈನ್, ರಾಜೇಶ್, ವಸಂತ, ಕೆ, ಎಸ್, ನಾಗೇಶ್. ಕೆ.ಜಿ ಮನು, ಪ್ರಮುಖರಾದ ಭಾರತೀಶ್, ದೇವಾಲಯ ಒಕ್ಕೂಟ ಸಮಿತಿಯ ಅಧ್ಯಕ್ಷರಾದ ಎಂ,ಕೆ, ದಿನೇಶ್, ರಾಜೀವ್, ಕೆ.ಎಸ್ ಶಶಿಕುಮಾರ್ ಗೌಡ .ಡಿ.ಸಿ.ಮಂಜುನಾಥ್, ಜನಾರ್ಧನ್, ಜಗದೀಶ್, ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್ ರಾಜ್, ಮಾಜಿ ಸೈನಿಕ ಜನಾರ್ಧನ್ ಮತ್ತು ವಿವಿಧ ಮಂಟಪಗಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.