ಮಡಿಕೇರಿ, ನ.೭ : ಕೊಡವರ ಸ್ವಯಂ ಶಾಸನದ ಜನ್ಮ ಭೂಮಿಯನ್ನು ಕಾಯ್ದೆಬದ್ಧವಾಗಿ ಸ್ಥಿರೀಕರಣ ಗೊಳಿಸಲು ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕನ್ನು ಸಂವಿಧಾನದ ವಿಧಿ ೨೪೪ ಖ/ತಿ ೬ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕರ್ನಾಟಕದ ಸ್ವಾಧೀನದೊಳಗೆ ಸಂಯೋಜಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಸಿಎನ್‌ಸಿ ಸಂಘಟನೆ ೫ನೇ ಹಂತದ ಪಾದಯಾತ್ರೆಯನ್ನು ಆರಂಭಿಸಿತು. ವೀರಾಜಪೇಟೆ ತಾಲೂಕಿನ ಬೆಪುö್ಪನಾಡ್‌ನ ಅರಮೇರಿ ಮಂದ್ ಮತ್ತು ಕಡಂಗ ಮುರೂರು ಮಂದ್‌ನಲ್ಲಿ ಪಾದಯಾತ್ರೆ ಹಿನ್ನೆಲೆ ನಡೆದ ಕೊಡವ ಜನಜಾಗೃತಿ ಸಭೆಯ ನೇತೃತ್ವ ವಹಿಸಿ ನಾಚಪ್ಪ ಮಾತನಾಡಿದರು.

ಅರಮೇರಿ ಮಂದ್ ಮತ್ತು ಕಡಂಗ ಮುರೂರು ಮಂದ್‌ನಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾಲ್ಗೊಂಡ ಕೊಡವ, ಕೊಡವತಿಯರು ಮಾನವ ಸರಪಳಿಯನ್ನು ರಚಿಸಿದರು. ಸೂರ್ಯ-ಚಂದ್ರ, ಮಾತೃ ಭೂಮಿ, ದೈವಿಕ ವಸಂತ ಕಾವೇರಿ, ಸಂವಿಧಾನ ಮತ್ತು ಗುರು- ಕಾರೋಣ ಹೆಸರಿನಲ್ಲಿ ಸಿಎನ್‌ಸಿ ಯ ಕೊಡವಲ್ಯಾಂಡ್ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಅಲ್ಮಂಡ ಸ್ವಾತಿ ರಂಜನ್, ಬಾಚಿರ ಕನ್ನಿಕೆ ಸುಬ್ರಮಣಿ, ಅಲ್ಮಂಡ ಸುನಿತಾ ಪೂಣಚ್ಚ, ಪೂಳಂಡ ಪದ್ಮಿನಿ ಪೂಣಚ್ಚ, ಬಾಚಿರ ಗೌರು ಉತ್ತಪ್ಪ, ನಂದಿನೆರವAಡ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಬಾಚಿರ ಸುಮಿ ದೇವಯ್ಯ, ಸೋಮೆಯಂಡ ನಿಶ್, ಕಂಡ್ರತAಡ ವಿಠಾ ಸುಬ್ಬಯ್ಯ, ರೀನಾ ಸೋಮೆಯಂಡ, ರತಿ ಪೂಳಂಡ, ಉಷಾ ನಾಯಕಂಡ, ಪೂಳಂಡ ಪವಿ ಅಪ್ಪಯ್ಯ, ನಾಯಕಂಡ ಹರ್ಷಿತಾ, ಉದಿಯಂಡ ಶಾಂತಿ ಜಯಕುಮಾರ್, ಕಂಡ್ರತAಡ ಈಶ್ವರಿ, ಪೂಳಂಡ ವರ್ಷ, ಪೊಯ್ಯೆಟಿರ ಸುಚಿ ಅಶೋಕ್, ಸೋಮೆಯಂಡ ಕೆ.ಪೂವಮ್ಮ ಮತ್ತಿತರರು ಅರಮೇರಿ ಮಂದ್ ಪಾದಯಾತ್ರೆ ಮತ್ತು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಡAಗ್‌ಮುರೂರ್ ಊರ್ ಮಂದ್‌ನಲ್ಲಿ ಬಲ್ಲಚಂಡ ಮಾದಯ್ಯ, ಬಲ್ಯಂಡ ಉದಯ, ಕಾಂಗಿರ ಅರ್ಜುನ, ಚೋಳಂಡ ರಮೇಶ್, ಪಾರ್ವಂಗಡ ನವೀನ್, ಕಾಂಡೇರ ಸುರೇಶ್, ಚಂಬAಡ ಜನತ್, ಬಲ್ಲಚಂಡ ರಾಮು, ಪಟ್ಟಮಾಡ ಕುಶ, ಬಲ್ಲಚಂಡ ಉತ್ತಯ್ಯ, ಬಲ್ಲಚಂಡ ಉತ್ತಪ್ಪ, ಮಂದಪAಡ ಮನೋಜ್, ಅಲ್ಮಂಡ ಜೈ, ಅಲ್ಮಂಡ ನೆಹರು, ಚೀಯಬೇರ ಸತೀಶ್, ಪಳಂಗAಡ ಮೋಹನ್, ಬಲ್ಲಚಂಡ ಸಂಪತ್, ಬಲ್ಲಚಂಡ ರೂಪ ಸಂಪತ್ ಮತ್ತಿತರರು ಪಾಲ್ಗೊಂಡಿದ್ದರು.

ಇಂದಿನ ಪಾದಯಾತ್ರೆ

ತಾ. ೮ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಕಡಿಯತ್‌ನಾಡ್‌ನ ಕರಡದ ಬೇಲಿಯಾಣೆ ಮಂದ್ ಮಧ್ಯಾಹ್ನ ೨.೩೦ ಗಂಟೆಗೆ ಬಲಂಬೇರಿ ಮಂದ್, ತಾ.೯ ರಂದು ಬೆಳಗ್ಗೆ ೧೦ ಗಂಟೆಗೆ ಮಡಿಕೇರಿ ತಾಲೂಕಿನ ನೂರಂಬಡನಾಡ್ ಮಂದ್, ಸಂಜೆ ೪.೩೦ ಗಂಟೆಗೆ ನೆಲಜಿನಾಡ್ ಮಂದ್‌ನಲ್ಲಿ ಪಾದಯಾತ್ರೆ ಮತ್ತು ಜಾಗೃತಿ ಸಭೆ ನಡೆಯಲಿದೆ.