ಮಡಿಕೇರಿ, ನ. ೭: ಇತ್ತೀಚೆಗಷ್ಟೆ ಸೇನೆಯಿಂದ ನಿವೃತ್ತಿ ಹೊಂದಿದ್ದ ವ್ಯಕ್ತಿಯೋರ್ವ ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಉಕ್ಕುಡ ನಿವಾಸಿ ಸಂದೇಶ್ (೩೬) ನಾಪತ್ತೆಯಾದ ವ್ಯಕ್ತಿ. ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಸಂದೇಶ್ ಅವರ ಮೊಬೈಲ್ ಹಾಗೂ ಚಪ್ಪಲಿ, ಪಂಪಿನ ಕೆರೆಯ ಬಳಿ ಪತ್ತೆಯಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಪಂಪಿನ ಕೆರೆಯಲ್ಲಿ ಶೋಧಕಾರ್ಯ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಕತ್ತಲಾದ್ದರಿಂದ ಶೋಧ ಕಾರ್ಯವನ್ನು ತಾ. ೮ ಕ್ಕೆ ಮುಂದೂಡಲಾಗಿದೆ.