ಮಡಿಕೇರಿ, ನ. ೭: ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿನಾಂಕ ೧೨.೨.೨೦೧೮ ರಂದು ನಾಪೋಕ್ಲು ಠಾಣಾ ವ್ಯಾಪ್ತಿಯ ನರಿಯಂದಡ ಗ್ರಾಮದ ಎಡಪಾಲದಲ್ಲಿ ಮೊಹಮ್ಮದ್ ರಫೀಕ್, ಕೆ.ಎ. ಹುಸೇನಾರ್ ಇವರುಗಳು ಇ.ಯು. ಸಿಯಾಬ್, ಕೆ.ಎಂ. ಹನೀಫ್ ಎಂಬವರಿಗೆ ಸೇರಿದ ಪಿಕ್ಅಪ್ ಜೀಪ್ (ಕೆ.ಎ. ೧೯ ಸಿ. ೭೮೫೬ ಹಾಗೂ ಕೆ.ಎಲ್.೧೨ - ೭೪೯೧) ಗಳಲ್ಲಿ ರಶೀದ್ ಎಂಬವರ ಮನೆ ನಿರ್ಮಾಣಕ್ಕೆ ಕಲ್ಲಿನ ಇಟ್ಟಿಗೆಗಳನ್ನು ಕೆ.ಯು. ಹನೀಫ್ ಎಂಬವರ ಭತ್ತದ ಗದ್ದೆಯ ಮೂಲಕ ಸಾಗಾಟ ಮಾಡುತ್ತಿದ್ದಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆ.ಯು. ಹನೀಫ್ ಜಗಳವಾಡಿ ಬಳಿಕ ಮನೆಗೆ ತೆರಳಿ ತನ್ನ ಓಮಿನಿ (ಕೆ.ಎ. ೧೨.ಎಂ.ಎ. ೧೫೭೩) ನಲ್ಲಿ ಎಸ್ಬಿಬಿಎಲ್ ಬಂದೂಕಿನೊAದಿಗೆ ಮೊಹಮ್ಮದ್ ರಫೀಕ್ ಅವರ ಮನೆ ಎದುರು ತೆರಳಿ ಮೊಹಮ್ಮದ್ ರಫೀಕ್ ಅವರಿಗೆ ಗುಂಡು ಹಾರಿಸಿದ್ದು, ಈ ಸಂಬAಧ ನಾಪೋಕ್ಲು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಂಪ್ರಸಾದ್ ಅವರು ಆರೋಪಿ ಮೇಲಿನ ಆರೋಪ ಸಾಬೀತಾದ್ದರಿಂದ ಆರೋಪಿ. ಕೆ.ಯು. ಹನೀಫ್ಗೆ ಕೊಲೆಯತ್ನದ ಅಪರಾಧಕ್ಕಾಗಿ ೩ ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ. ೨೮ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ವಾದಿಸಿದರು.