ಕುಶಾಲನಗರ, ನ. ೭: ಪ್ರವಾಹ ಸೇರಿದಂತೆ ನದಿಯ ನೀರಿನ ಹರಿವಿನ ಪ್ರಮಾಣವನ್ನು ಸ್ವಯಂ ಚಾಲಿತವಾಗಿ ಶೀಘ್ರವಾಗಿ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕುಶಾಲನಗರ-ಕೊಪ್ಪ ಕಾವೇರಿ ಸೇತುವೆಯ ಮೇಲ್ಭಾಗದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ನದಿ ಜಲಮಾಪಕ ಕೇಂದ್ರ ಸ್ಥಾಪಿಸಲಾಗಿದೆ.
ನದಿಯ ನೂತನ ಸೇತುವೆಯ ಮೇಲ್ಭಾಗದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರದಲ್ಲಿ ಎರಡು ವೆಲಾಸಿಟಿ ಸೆನ್ಸಾರ್ ಮತ್ತು ಇನ್ನೊಂದು ಡೆಪ್ತ್ ಸೆನ್ಸಾರ್ ಅಳವಡಿಸಲಾಗಿದ್ದು ದಿನದ ೨೪ ಗಂಟೆಗಳ ಕಾಲ ಈ ಕೇಂದ್ರದಿAದ ಬೆಂಗಳೂರು ಸೇರಿದಂತೆ ಸಂಬAಧಿಸಿದ ಕಚೇರಿಗಳಿಗೆ ನೀರಿನ ಹರಿವಿನ ಪ್ರಮಾಣದ ಮಾಹಿತಿಗಳು ರವಾನೆಯಾಗಲಿದೆ. ಈ ಕೇಂದ್ರ ಕಾರ್ಯಾಚರಣೆ ನಡೆಸಲು ಸೋಲಾರ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ಅಂದಾಜು ೩೦ ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ತಂತ್ರಜ್ಞಾನದ ಕೇಂದ್ರದ ಕಾಮಗಾರಿ ಸಂಪೂರ್ಣಗೊAಡಿದ್ದು ಕೆಲವೇ ದಿನಗಳಲ್ಲಿ ಕಾರ್ಯ ಆರಂಭಗೊಳಿಸಲಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಇದುವರೆಗೆ ನೀರಿನ ಹರಿವಿನ ಪ್ರಮಾಣವನ್ನು ಮಾನವ ಸಂಪನ್ಮೂಲ ಬಳಸಿ ಸಂಗ್ರಹಿಸಲಾಗುತ್ತಿತ್ತು. ಇದೀಗ ಸಂಪೂರ್ಣವಾಗಿ ಸ್ವಯಂ ನಿಯಂತ್ರಿತವಾಗಿ ನದಿ ನೀರಿನ ಹರಿವಿನ ಪ್ರಮಾಣವನ್ನು ಪಡೆಯುವ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದ್ದಾರೆ.
-ಚಂದ್ರಮೋಹನ್